Monday, 9th December 2024

ಕೆರೆ ಸೇರುತ್ತಿದೆ ಕಸ ವಿಲೇವಾರಿ ಘಟಕದ ತ್ಯಾಜ್ಯ ನೀರು

ತುಮಕೂರು: ತಾಲೂಕಿನ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದ ತ್ಯಾಜ್ಯ ನೀರು ಸುತ್ತಮುತ್ತಲ ರೈತರ ಹೊಲಗಳು ಹಾಗೂ ಕೆರೆಗಳಿಗೆ ಸೇರುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ತ್ಯಾಜ್ಯ ನೀರು ರೈತರ ಜಮೀನುಗಳಿಗೆ ಹರಿದು ಬರುತ್ತಿರುವುದರಿಂದ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ತ್ಯಾಜ್ಯ ನೀರು ರಸ್ತೆಗಳಲ್ಲಿಯೂ ಹರಿಯುತ್ತಿದೆ. ಇದರಿಂದ ಅಜ್ಜಗೊಂಡನಹಳ್ಳಿ ಸುತ್ತಮುತ್ತ ಇರುವ ಗ್ರಾಮಗಳಲ್ಲಿನ ಜನರಲ್ಲಿ ಕಾಯಿಲೆ ಭೀತಿ ಉಂಟು ಮಾಡಿದೆ.

ತ್ಯಾಜ್ಯ ನೀರು ಕೆರೆ ಸೇರುತ್ತಿದೆ
ತ್ಯಾಜ್ಯ ವಿಲೇವಾರಿ ಘಟಕದಿಂದ ಹರಿಯುತ್ತಿರುವ ಕಲುಷಿತ ನೀರು ಕೋರಾ ಕೆರೆಯಿಂದ ಕಟ್ಟಿಗೆನಹಳ್ಳಿ ಕೆರೆ, ಹೆಬ್ಬಾಕ ಕೆರೆ ಸೇರುತ್ತಿದೆ. ಇದರಿಂದಾಗಿ ಜನಜಾನುವಾರುಗಳಲ್ಲಿ ಅನಾರೋಗ್ಯ ಕಂಡುಬರುತ್ತಿದೆ.
ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಸಮರ್ಪಕವಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.