ತಿಪಟೂರು: ಗಾಂಧಿ ಜಯಂತಿಯ ದಿನದಂದು ಗಾಂಧಿ ಭವನ ಮತ್ತು ಗ್ರಂಥಾಲಯ ಉದ್ಘಾಟನಾ ಸಮಯ ದಲ್ಲಿ, ಸ್ವ ಪಕ್ಷದ ಶಾಸಕ ಸ್ಪೋಟಕ ಭಾಷಣದಿಂದ ರಾಜ್ಯ ಸರ್ಕಾರವನ್ನು ಪೇಚಿಗೆ ಸಿಲುಕುವಂತಾಗಿದೆ.
ಕಾರ್ಯಕ್ರಮದಲ್ಲಿ ಶಾಸಕ ಕೆ.ಷಡಕ್ಷರಿ ಭಾಗಿಯಾಗಿ ತಿಪಟೂರು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಅರಸೀಕೆರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ,ತಿಪಟೂರು ಹಾಗೂ ಹುಳಿಯಾ ರನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿ ಮಾಡಬಹುದು. ಆದರೆ ಈಗ ನಮ್ಮಲ್ಲಿ ಹಣವಿಲ್ಲ ಈ 5 ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದ್ದಾರೆ.
ಸದ್ಯಕ್ಕೆ ಈಗಲೇ ಹೊಸ ಜಿಲ್ಲೆಗಳಾಗಿ ಆಗಿರುವ ಜಿಲ್ಲೆಗಳಿಗೆ ಕುರ್ಚಿ ಬೆಂಚು ಹಾಕಲು ಹಣವಿಲ್ಲವೆಂದು ಮುಖ್ಯಮಂತ್ರಿಗಳು ನನಗೆ ಹೇಳಿದ್ದು, ಮೊದಲಿಗೆ ಬೆಳಗಾವಿಯಲ್ಲಿ ಇನ್ನೂ ಎರಡು ಜಿಲ್ಲೆಗಳನ್ನು ಮಾಡಬೇಕಾ ಗಿದೆ. ಏಕೆಂದರೆ ಬೆಳಗಾವಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.ನಂತರ ತುಮಕೂರು ಜಿಲ್ಲೆಯನ್ನು ಇನ್ನೊಂದು ಜಿಲ್ಲೆಯನ್ನಾಗಿ ಮಾಡಬೇಕಾಗುತ್ತದೆ.
ಈ ಐದು ಗ್ಯಾರಂಟಿಗಳಿಂದ ಸರ್ಕಾರದಲ್ಲಿ ಹಣವಿಲ್ಲ ಹಾಗಾಗಿ ಜಿಲ್ಲಾ ಕೇಂದ್ರದ ಪ್ರಸ್ತಾಪ ಮಾಡಲು ಸಾಧ್ಯ ವಾಗುವುದಿಲ್ಲ, ಮುಂದಿನ ಬಜೆಟ್ ನಲ್ಲಿ ಜಿಲ್ಲಾ ಕೇಂದ್ರದ ಬಗ್ಗೆ ಪ್ರಸ್ತಾಪ ಮಾಡುವೆ ಎಂದು ಕೆ. ಷಡಕ್ಷರಿ ಮಾತನಾಡಿದ್ದಾರೆ.