ಗುಬ್ಬಿ: ಮೊಟ್ಟಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಎಂಬ ಪರಿಕಲ್ಪನೆ ಸೃಷ್ಟಿಸಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್ ನಾಗರಾಜ್ ತಿಳಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ಜಾಲಗುಣಿ ಗ್ರಾಮದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದಾಗ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಮುಂದಿನ ಕ್ರಮ ಕೈಗೊಳ್ಳಲು ಪೂರಕವಾಗುತ್ತದೆ.
ಈಚೆಗೆ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಅನೇಕ ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಒದಗಿಸಿಕೊಡಲಾಗಿದೆ. ಮಠ, ಗಂಗಯ್ಯನಪಾಳ್ಯ ಹಾಗೂ ಹಾಗಲವಾಡಿ ಕೆರೆಗಳಿಗೆ ನೀರು ಹರಿಸುವುದು ಮೊದಲ ಆದ್ಯತೆಯಾಗಿದೆ . 20 ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದ ತಾಲೂಕಾಗಿ ಮಾರ್ಪಟ್ಟಿದೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ನೀಡುವ ಮೂಲಕ ಒಮ್ಮೆ ಅವಕಾಶ ಮಾಡಿಕೊಟ್ಟರೆ ಅಭಿವೃದ್ಧಿಯೇತರ ತಾಲೂಕನ್ನಾಗಿ ಪರಿವರ್ತಿಸುತ್ತೇನೆಂದು ತಿಳಿಸಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಅವಶ್ಯಕತೆ ಇದ್ದು ಪಂಚರತ್ನ ಯೋಜನೆ ರೈತರ ಮಹಿಳೆಯರ ದೀನದಲಿತರ ಹಿತ ಕಾಯುವ ಅಂಶಗಳನ್ನು ಒಳ ಗೊಂಡು ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕುಮಾರಣ್ಣನ ಕೈ ಬಲಪಡಿಸಲು ತಾಲೂಕಿನಲ್ಲಿ ಬಿಎಸ್ ನಾಗರಾಜು ಅವರನ್ನು ಗೆಲ್ಲಿಸ ಬೇಕು ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಸದಸ್ಯ ಜಿ.ಎಂ.ಶಿವಲಿಂಗಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಗಂಗಸಂದ್ರ ಮಂಜಣ್ಣ, ನಾಗಸಂದ್ರ ವಿಜಯ್ ಕುಮಾರ್, ನಾಗರಾಜು, ಮೋಹನ್, ತಾಪಂ ಮಾಜಿ ಸದಸ್ಯ ಕಾಂತರಾಜು, ಮುಖಂಡರಾದ ರಾಮಕೃಷ್ಣಯ್ಯ, ಸಲೀಂ ಪಾಷ, ಬಸವರಾಜು, ಮಧು, ನಾಗರಾಜು, ಮಂಜುನಾಥ, ಆನಂದಪ್ಪ, ರಾಜಣ್ಣ ಮುಂತಾದವರಿದ್ದರು.