ಗುಬ್ಬಿ: ತಾಲೂಕಿನ ಚೇಳೂರು ಹೋಬಳಿ ಮೆಣಸಿನ ಹಟ್ಟಿ ಗ್ರಾಮದ ಪಂಚಾಕ್ಷರಿ ಎಂಬ ರೈತ ಖಾಸಗಿ ಫೈನಾನ್ಸ್ ನಲ್ಲಿ ಸಾಲ ತೆಗೆದುಕೊಂಡು ಕಟ್ಟಲಿಲ್ಲ ಎಂಬ ಕಾರಣಕ್ಕೆ ಮನೆ ಜಪ್ತಿ ಮಾಡಿ ಸಾಲ ಕಟ್ಟುವಂತೆ ಕಿರುಕುಳ ನೀಡಿದ್ದರಿಂದ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡಿದು ಖಾಸಗಿ ಫೈನಾನ್ಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ತಾಲೂಕು ಕಚೇರಿ ಮುಂದೆ ಮೃತನ ಕುಟುಂಬ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮೃತ ಪಂಚಾಕ್ಷರಯ್ಯ ತುಮಕೂರಿನ ಇಕ್ವಿಟಾಸ್ ಎಂಬ ಫೈನಾನ್ಸ್ ಕಂಪನಿಯಲ್ಲಿ ಸಾಲ ತೆಗೆದುಕೊಂಡಿದ್ದು ಅನಾರೋಗ್ಯ ಪಿಡಿತನಾಗಿದ್ದರಿಂದ ಹಂತ ಹಂತವಾಗಿ ಕಟ್ಟಲು ಅನುಮತಿ ಕೋರಿದರು ಸಹ ಸ್ಪಂದಿಸದ ಅಧಿಕಾರಿಗಳು ಮನೆಯನ್ನು ಜಪ್ತಿ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ತಮ್ಮ ಅಳಲು ತೋಡಿ ಕೊಂಡರು.
ಖಾಸಗಿ ಫೈನಾನ್ಸ್ ನವರಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದ್ದು ರೈತರು ಬಡವರು ಹಾಗೂ ಕೂಲಿ ಕಾರ್ಮಿಕರು ಬೇಸತ್ತಿದ್ದಾರೆ ಮಾನವೀಯತೆ ಇಲ್ಲದೆ ಜನರನ್ನು ಸಂಕಷ್ಟಕ್ಕೆ ತಳ್ಳಿ ಸಾಲ ವಸೂಲಿ ಮಾಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಮೃತನ ಕುಟುಂಬಕ್ಕೆ ಫೈನಾನ್ಸ್ ನವರು ಋಣ ಭಾರ ಪತ್ರವನ್ನು ವಾಪಸ್ ನೀಡಿ ಸಾಲ ಮುಕ್ತ ಮಾಡಬೇಕು ಹಾಗೂ ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಬಿಜೆಪಿ ಮುಖಂಡರು ಆಗ್ರಹಿಸಿದರು.
Read E-Paper click here