ತುಮಕೂರು: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ವಾಗತಕಾರರು ಹಾಗೂ ಗ್ರಂಥ ಪಾಲರಾದ ಆರ್. ರೂಪಕಲಾ, ಸಿದ್ಧಪಡಿಸಿ ರುವ ಚುನಾವಣಾ ಕೈಪಿಡಿಯನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಈ ಕೈಪಿಡಿಯಲ್ಲಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1952 ರಿಂದ 2023ರವರೆಗೆ ನಡೆದಿರುವ ವಿಧಾನ ಸಭಾ ಚುನಾವಣಾ ಮಾಹಿತಿಯನ್ನು ನೀಡಲಾಗಿದೆ. ಕೈಪಿಡಿಯು 1952 ಹಾಗೂ 1957ರಲ್ಲಿ ಜಿಲ್ಲೆಯಲ್ಲಿದ್ದ ದ್ವಿಸದಸ್ಯ ಕ್ಷೇತ್ರಗಳ ಚುನಾವಣಾ ಮಾಹಿತಿ, 2008ಕ್ಕೂ ಮುನ್ನ ಇದ್ದ ವಿಧಾನಸಭಾ ಕ್ಷೇತ್ರಗಳ ಚುನಾವಣೆ ವಿವರ, ಕ್ಷೇತ್ರ ಪುನರ್ವಿಂಗಡಣೆಯಾದ 2008ರ ನಂತರ ಪ್ರಸ್ತುತ ಜಿಲ್ಲೆಯು ಒಳಗೊಂಡಿ ರುವ 11 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವಿವರ ಸೇರಿದಂತೆ ಚುನಾವಣೆ ನಡೆದ ವರ್ಷ, ಚುನಾವಣಾ ಸ್ಪರ್ಧಿಗಳ ವಿವರ, ಅವರು ಗಳಿಸಿದ ಮತಗಳ ವಿವರ, ಒಟ್ಟು ಮತದಾರರ ಸಂಖ್ಯೆ, ಮತ್ತಿತರ ಮಾಹಿತಿಯನ್ನು ಹೊಂದಿದೆ.
ಮುಂಬರುವ ಚುನಾವಣೆಗಳಲ್ಲಿ ಚುನಾವಣಾಸಕ್ತರು, ಚುನಾವಣಾ ವಿಮರ್ಶಕರು ಸೇರಿದಂತೆ ಮತ್ತಿತರರಿಗೆ ಈ ಕೈಪಿಡಿ ಅನುಕೂಲವಾಗಲಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಗ್ಯಾಸೆಟಿಯರ್‌ನಿಂದ ಸಂಗ್ರಹಿಸಿದ ಮಾಹಿತಿಯನ್ನು ಕ್ರೋಢೀಕರಿಸಿ ಕೈಪಿಡಿಯನ್ನು ಸಿದ್ಧಪಡಿಸಿರುವ ರೂಪಕಲಾ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಇದ್ದರು.