ತುಮಕೂರು: ವೈದ್ಯರು ರೋಗಿಗಳಲ್ಲಿ ದೇವರನ್ನು ಕಾಣಬೇಕು ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿರಿಯರಾದ ಡಾ.ಬಿ.ಸಿ.ರಾಯ್‌ರವರು ಹಾಕಿಕೊಟ್ಟ ಮಾರ್ಗದರ್ಶನ, ಜೀವನ ಶೈಲಿ, ಸಮಾಜದ ರಾಜಕೀಯವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಗಳನ್ನು ಸ್ಮರಿಸುವುದು ಅದೇ ದಾರಿಯಲ್ಲಿ ನಮ್ಮ ವೈದ್ಯರು ಮತ್ತು ವೈದ್ಯಕೇತರ ಸಿಬ್ಬಂದಿಗಳು ಕೆಲಸ ನಿರ್ವಹಿಸುವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದರು.
ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ. ರಮಣ್ ಹುಲಿನಾಯ್ಕರ್ ಮಾತನಾಡಿ, ಪ್ರತಿ ವರ್ಷವೂ ಭಾರತ ಸರ್ಕಾರ ಡಾ.ಬಿ.ಸಿ. ರಾಯ್‌ರವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸ ಲಾಗುತ್ತಿದೆ. ಡಾ.ಬಿ.ಸಿ.ರಾಯ್‌ರವರ ಬದುಕು ಮತ್ತು ಅವರು ಅನುಸರಿಸಿದ ಮಾರ್ಗಗಳು ವೈದ್ಯರಿಗೆ ದಾರಿದೀಪವಾಗಬೇಕು, ಇಂತಹ ನಿಸ್ವಾರ್ಥ ಸಾಧಕರು ಹಾಕಿಕೊಟ್ಟ ಮಾರ್ಗ ಗಳನ್ನು ನಾವುಗಳೆಲ್ಲ ನಡೆಯುವುದೇ ಡಾ.ಬಿ.ಸಿ.ರಾಯ್‌ರವರ ಅವರಂತಹ ಮಹಾ ಚೇತನ ನಾವು ಸಲ್ಲಿಸುವ ಅತ್ಯುತ್ತಮ ಗೌರವಿಸಬೇಕು ಎಂದು ತಿಳಿಸಿದರು.
ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಡಾ.ಬಿ.ಸಿ.ರಾಯ್‌ರವರು ನಿಸ್ವಾರ್ಥಸೇವೆ ಯುವ ವೈದ್ಯರಿಗೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಉಪಪ್ರಾಂಶುಪಾಲೆ ಡಾ.ರೇಖಾಗುರುಮೂರ್ತಿ, ಶ್ರೀದೇವಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಟಿ.ಜಿ.ದೀಪಕ್ ಗೆ 2022-23 ನೇ ಸಾಲಿನೇ ಡಾ.ಬಿ.ಸಿ.ರಾಯ್‌ರವರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ಡಾ.ಕೆ.ಮೋಹನ್‌ಕುಮಾರ್, ಡಾ.ಲಾವಣ್ಯ, ಡಾ.ಹೇಮಂತ್‌ರಾಜ್, ಡಾ.ಸೌಮ್ಯ, ಡಾ.ಕುಸುಮ, ಟಿ.ವಿ.ಬ್ರಹ್ಮದೇವಯ್ಯ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಸಿಬ್ಬಂದಿ ವರ್ಗ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.