Wednesday, 9th October 2024

ಶ್ರೀ ಕೆಂಪಾ0ಬಾದೇವಿಯವರ ಜಾತ್ರಾ ಮಹೋತ್ಸವ

ತಿಪಟೂರು: ೧೨ ಹಳ್ಳಿಗಳ ಗ್ರಾಮದೇವತೆ ತಿಪಟೂರಿನ ಶ್ರೀ ಕೆಂಪಾ0ಬಾದೇವಿಯವರ ಜಾತ್ರಾ ಮಹೋತ್ಸವ ಭಾನುವಾರ ಮಧ್ಯಾಹ್ನ ೩ ಗಂಟೆಗೆ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಅದ್ದೂರಿಯಾಗಿ ನಡೆಯಿತು.

ಇತಿಹಾಸ ಪ್ರಸಿದ್ಧ ತಿಪಟೂರಮ್ಮನ ಜಾತ್ರೆ ಸೊಬಗು ಇದೆ ೨೩ನೇ ಮಂಗಳವಾರದಿ0ದ ಪ್ರಾರಂಭವಾಗಿ ಗಣಪತಿ ಪೂಜೆ ಮಧುವಣ ಗಿತ್ತಿ ಉತ್ಸವ, ಕಳಸ ಪೂಜೆ ಧ್ವಜ ಪ್ರತಿಷ್ಠಾಪನೆ ಸುಹಾಸನೆಯರಿಂದ ಶ್ರೀಚಕ್ರ ಪೂಜೆ, ಶುಕ್ರವಾರ ಆರತಿ ಬಾನ ಶನಿವಾರ ರಾತ್ರಿ ಇದೇ ಮೊದಲ ಬಾರಿಗೆ ಶ್ರೀ ಕೆಂಪಮ್ಮ ದೇವಿಯವರ ಆನೆಯ ಮೇಲೆ ಅಂಬಾರಿ ಉತ್ಸವ ಶ್ರೀ ಕಾಡಸಿದ್ದೇಶ್ವರ ಮಠದ ಆನೆ (ಲಕ್ಷ್ಮಿ) ಕೆಂಪಮ್ಮ ದೇವಿಯವರನ್ನು ಅಂಬಾರಿ ಸಮೇತ ಹೊತ್ತುಕೊಂಡು ರಾಜಬೀದಿಗಳಲ್ಲಿ ಸಾಗಿತು.

ಭಾನುವಾರ, ಮಧ್ಯಾಹ್ನ ರಥೋತ್ಸವಕ್ಕೆ, ಶಾಸಕರಾದ ಕೆ.ಷಡಕ್ಷರಿ, ಮಾಜಿ ಶಾಸಕ ಬಿ ಸಿ ನಾಗೇಶ್, ಗುಡಿ ಗೌಡರಾದ ಚಂದ್ರಶೇಖರ್ ಮತ್ತು ಧರ್ಮದರ್ಶಿಗಳಾದ ಶ್ರೀಕಂಠ ರಥಕ್ಕೆ ಚಾಲನೆ ನೀಡಿದರು, ನಾನಾ ರೀತಿಯ ಹರಕೆಗಳನ್ನು ಬಾಳೆಹಣ್ಣಿನಲ್ಲಿ ಬರೆದು ಇಷ್ಟಾರ್ಥ ಈಡೇರಿಸುವಂತೆ ಭಕ್ತರು ಬಾಳೆಹಣ್ಣು ಎಸೆದರು ಒಬ್ಬ ಭಕ್ತ ನಾನು ಪ್ರೀತಿಸಿದ ಹುಡುಗಿ ನನಗೆ ಸಿಗಲಿ ಎಂದು ಬರೆದಿದ್ದ, ಮತ್ತೊಬ್ಬ ಮುಂದಿನ ಬಾರಿ ಆರ್ ಸಿ ಸಿ ಕಪ್ ನಮ್ಮದಾಗಲಿ ಎಂದು ಬರೆದರೆ ಇನ್ನೊಬ್ಬ ನಮ್ಮೂರಿಗೆ ಉತ್ತಮ ಮಳೆ ಬೆಳೆ ಸಿಗಲಿ ಎಂದು ಬಾಳೆಹಣ್ಣು ಎಸೆದರು, ನಗರಸಭೆ ರಾಜಣ್ಣ ನೇತೃತ್ವದ ತಂಡ ಬಿದ್ದ ಕಸವನ್ನು ಸ್ವಚ್ಛ ಮಾಡುತ್ತಿದ್ದರು.

ಕಾಂಗ್ರೆಸ್ ಮುಖಂಡ ಹಾಗೂ ನಿವೃತ್ತ ಎಸಿಪಿ ಸಮಾಜ ಸೇವಕ ಲೋಕೇಶ್ವರ್ ಮತ್ತುಅಭಿಮಾನಿ ತಂಡ ಬಂದ ಭಕ್ತರಿಗೆ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದರು. ರಥೋತ್ಸವದಲ್ಲಿ ವೈದ್ಯರಾದ ಡಾ. ಶ್ರೀಧರ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಅರಕ್ಷಕ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಸಾವಿರಾರು ಭಕ್ತರು, ಭಾಗವಹಿಸಿದ್ದರು.
ಬಾಕ್ಸ್-ಗ್ರಾಮ ದೇವತೆ ಜಾತ್ರಾ ಮಹೋತ್ಸವ ವರ್ಷಕ್ಕೊಮ್ಮೆ ನಡೆಯುತ್ತದೆ.

*

ಜಾತ್ರಾ ಸಡಗರದಲ್ಲಿ ಗೃಹಿಣಿಯರು ದಿನದ ಮಟ್ಟಿಗೆ ಅಡಿಗೆ ಕಾರ್ಯಕ್ರಮಕ್ಕೆ ರಜಾ ಮಾಡಿ ತಮ್ಮ ಕುಟುಂಬ ಸಮೇತ ಜಾತ್ರೆಗೆ ಭಾಗವಹಿಸಿ ಪ್ರಸಾದ ಸ್ವೀಕರಿಸುವುದು ಮುಖದಲ್ಲಿ ಸಂತೋಷದ ಛಾಯೆ ಕಾಣುತ್ತದೆ ಭಕ್ತರು ಯಾರು ಸಹ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ನಮ್ಮ ತಂಡ ಹತ್ತಾರು ವರ್ಷಗಳಿಂದ ಅನ್ನ ಸಂತರ್ಪಣೆ ನಡೆಸುತ್ತಿದೆ, ತಾಯಿ ಆಶೀರ್ವಾದ ಎಲ್ಲರಿಗೂ ಸಿಗಲಿ ಈ ಬಾರಿ ತಾಲೂಕಿನಾದ್ಯಂತ ಉತ್ತಮ ಮಳೆ ಬೆಳೆ ಸಿಗಲಿ ಎಂದು ಶ್ರೀ ಕೆಂಪಾ0ಬ ದೇವಿಯಲ್ಲಿ ಬೇಡಿಕೊಳ್ಳು ತ್ತೇನೆ.
ಲೋಕೇಶ್ವರ್. ಕಾಂಗ್ರೆಸ್ ಮುಖಂಡ, ನಿವೃತ್ತ ಎಸಿಪಿ ತಿಪಟೂರು.