Friday, 13th December 2024

ಜೀವನಕ್ಕೆ ಕೌಶಲ್ಯಾಧಾರಿತ ಶಿಕ್ಷಣ ಮುಖ್ಯ

ಗುಬ್ಬಿ: ಜೀವನಕ್ಕೆ ಕೌಶಲ್ಯಾಧಾರಿತ ಶಿಕ್ಷಣ ಮುಖ್ಯ ಎಂದು ಮುಖ್ಯ ಶಿಕ್ಷಕ ಯೋಗಾನಂದ್ ತಿಳಿಸಿದರು.
ತಾಲೂಕಿನ ಲಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲಾ ಆವರಣದಲ್ಲಿ ಎಂಎಚ್ ಪಟ್ಟಣ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಕರು ಮಕ್ಕಳ ಮನಸ್ಸನ್ನು ಅರಿತು ಬೋಧನೆ ಮಾಡುವಂತಾಗಬೇಕು ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹೊಸ ಶಿಕ್ಷಣ ನೀತಿಗೆ ಪೂರ್ವಭಾವಿಯಾಗಿ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡು ನಾಲ್ಕು ವಿಭಾಗಿಯ ತರಬೇತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರದ ಪರಿಚಯದ ಜೊತೆಗೆ ಕೌಶಲ್ಯಾಧಾರಿತ ಕಲಿಕಾ ಆಸಕ್ತಿ ಮೂಡಿಸಲಾಗುತ್ತಿದೆ ಮಕ್ಕಳ ಮನಸ್ಸಿಗೆ ನಾಟುವ ಸ್ಥಳೀಯ ಭಾಷೆಯನ್ನು ಹೆಚ್ಚು ಬಳಸಿ ಬೋದನೆ ಮಾಡುವ ಮೂಲಕ ಆಸಕ್ತಿ ಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಎಂಎಚ್ ಪಟ್ನಾ ಕ್ಲಸ್ಟರ್ ಸಿಆರ್‌ಪಿ ಚಿಕ್ಕವೀರಯ್ಯ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯವಾದದ್ದು ಪೋಷಕರು ಸಹ ಮಕ್ಕಳಲ್ಲಿ ಕಲಿಕಾ ಅಭ್ಯಾಸ ಮೂಡಿಸುವಲ್ಲಿ ಹೆಚ್ಚು ಒತ್ತು ನೀಡಬೇಕು ರಾಜ್ಯದ್ಯಂತ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯುತ್ತಿದೆ ಮಕ್ಕಳಿಗೆ ಇರಿಸು ಮುರಿಸು ಆಗದಂತೆ ಸಂತೋಷದಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಉದ್ದೇಶವನ್ನು ಒಳಗೊಂಡು ಮಕ್ಕಳ ಪ್ರಗತಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ನಾಸಿಕ್ ಡೋಲ್ಗಳ ಮೂಲಕ ಕುಂಭಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ವಿಶೇಷವಾಗಿ ಬಲೂನ್ ರಾಕೆಟ್ ಹಾರಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಮಣ್ಣ, ಎಂಎಚ್ ಪಟ್ನಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ, ಮಾಜಿ ಗ್ರಾ ಪಂ ಅಧ್ಯಕ್ಷೆ ಸಣ್ಣ ತಾಯಮ್ಮ , ಸದಸ್ಯರಾದ ಮಹೇಂದ್ರ ಕುಮಾರ್, ಮುಖ್ಯ ಶಿಕ್ಷಕರು, ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.