Saturday, 14th December 2024

ಜಗತ್ತಿಗೆ ಬೆಳಕನ್ನು ತೋರಿಸಿದಂತಹ ಮಹಾನ್ ಚೇತನ ಮಹಾತ್ಮ ಗಾಂಧೀಜಿ

ಗುಬ್ಬಿ: ಇಡೀ ಜಗತ್ತಿಗೆ ಬೆಳಕನ್ನು ತೋರಿಸಿದಂತಹ ಮಹಾನ್ ಚೇತನ ಮಹಾತ್ಮ ಗಾಂಧೀಜಿ ಅವರು ಎಂದು ಸಾಹಿತಿ ಎಣ್ಣೆ ಕಟ್ಟೆ ಚಿಕ್ಕಣ್ಣ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟದಲ್ಲಿ ಸರ್ವೋದಯ ಮಂಡಲ ವತಿಯಿಂದ ಗಾಂಧಿ ಚಿಂತನೆ ಅಂಗವಾಗಿ ದುಶ್ಚಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಭಾರತಕ್ಕೆ ಇಂಗ್ಲೀಷರಿಂದ ಮುಕ್ತಿ ಕೊಡಿಸಿ ಸ್ವಾತಂತ್ರ್ಯ ಲಭಿಸಲು ಮಹಾತ್ಮ ಗಾಂಧೀಜಿ ಯವರ ಅಹಿಂಸ ಮಾರ್ಗ ಕ್ವಿಟ್ ಇಂಡಿಯಾ ಚಳುವಳಿ ಉಪ್ಪಿನ ಚಳುವಳಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಎಂದರು.
ನಿವೃತ್ತ ಉಪನ್ಯಾಸಕ ದಾಸಪ್ಪ ಮಾತನಾಡಿ ಮಹಾತ್ಮ ಗಾಂಧೀಜಿಯವರು ದಾಸ್ಯ ಹಾಗೂ ದುಶ್ಚಟ ಮುಕ್ತ ಸಮಾಜದ ಕನಸು ಕಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಹಳ್ಳಿ ಹಳ್ಳಿಯಲ್ಲಿಯೂ ಅನಧಿಕೃತವಾಗಿ ಮಧ್ಯ ಮಾರಾಟವಾಗುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಸರ್ವೋದಯ ಮಂಡಲದ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟಕಾಮಣ್ಣ ಮಾತನಾಡಿ, ಗ್ರಾಮಗಳ ಏಳಿಗೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಚಿಂತನೆ ಆದರ್ಶ ಈಗಲೂ ಪ್ರಸ್ತುತವಾಗಿದೆ ಎಂದರು.
ಸರ್ವೋದಯ ಮಂಡಳದ ಕಾರ್ಯಾಧ್ಯಕ್ಷ ಚಂದ್ರಶೇಖರ್, ಕಾಂತರಾಜು ವಿವೇಕ್, ಮಹಾದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಸಾರ್ವಜನಿಕರು ಇದ್ದರು.