ತುಮಕೂರು: ಮೊದಲು ಸಮುದಾಯಕ್ಕೆ ಆದ್ಯತೆ ನಂತರ ಪಕ್ಷ ಎಂದು ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣೀಮ ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಕನ್ನಡಭವನದಲ್ಲಿ ಶ್ರೀಕೃಷ್ಣ ಗೆಳೆಯರ ಬಳಗವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಗೊಲ್ಲಗಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ನಾನು ಇಂದು ಶಾಸಕಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಸಮುದಾಯ. ಹಾಗಾಗಿ ಸಮುದಾಯದ ವಿಷಯಕ್ಕೆ ಮೊದಲ ಅದ್ಯತೆ ನೀಡಲಾಗುವುದೆಂದರು.
ಗೊಲ್ಲಸಮುದಾಯದಲ್ಲಿ ಸಂಘಟನೆ ಎಂಬುದು ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಗೊಲ್ಲ, ಕಾಡುಗೊಲ್ಲ ಎಂಬ ಗೊಂದಲ.ಎಂದಿಗೂ ನಾನಾಗಲಿ, ನಮ್ಮ ಕುಟುಂಬದವರಾಗಲಿ ಕಾಡು ಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ವಿರೋಧ ಮಾಡಿಲ್ಲ.ಆದರೆ ಕೆಲವರು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನನಗೆ ಒಡೆಯು ವುದು ಗೊತ್ತಿಲ್ಲ. ಒಗ್ಗೂಡಿಸುವುದಷ್ಟೇ ಗೊತ್ತು ಎಂದರು.
ಅಭಿನಂದನೆ ಸ್ವೀಕರಿಸಿದ ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ನಮ್ಮದೆ ಸಮುದಾಯದ ಉಪಪಂಗಡ ವಾಗಿರುವ ಕಾಡುಗೊಲ್ಲ ಸಮುದಾಯವನ್ನು ಬದಿಗಿಟ್ಟು ಸಮುದಾಯ ಸಂಘಟನೆ ತರವಲ್ಲ.ಅವರ ಎಸ್ಟಿ ಮೀಸಲಾತಿ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿ ಬೇಕಿದೆ.
ಎ.ಕೃಷ್ಣಪ್ಪ ನಂತರ ಕಾಡುಗೊಲ್ಲ ಸಮುದಾಯದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ ಎದುರಿಸು ತ್ತಿದ್ದೇವೆ ಎಂದು ಹೇಳಿದರು. ಅಭಿನಂದನೆ ಸ್ವೀಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂದರು.
ಶ್ರೀಕೃಷ್ಣ ಗೆಳೆಯರ ಬಳಗದ ಗೌರವಾಧ್ಯಕ್ಷ ಹಾಗೂ ಸುದ್ದಿಬಿಂಬ ಪತ್ರಿಕೆ ಸಂಪಾದಕ ಡಿ.ಎಂ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಧರ್ಮದರ್ಶಿ ಪಾಪಣ್ಣ, ಮುರುಳಿಕೃಷ್ಣಪ್ಪ, ಸೌಭಾಗ್ಯಮ್ಮ, ಮಾಚೇನಹಳ್ಳಿ ಕರಿಯಪ್ಪ ಅವರುಗಳಿಗೆ ಗೊಲ್ಲಗಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿಧಾನಪರಿಷ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ ಮಾಜಿ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಪಾವಗಡದ ಬಲರಾಮ ರೆಡ್ಡಿ, ಪಾಲಿಕೆ ಸದಸ್ಯೆ ಚಂದ್ರಕಲಾ ಪುಟ್ಟರಾಜು,ಚಲನಚಿತ್ರ ನಿರ್ದೇಶಕ ಕೀರ್ತಿ, ಗಾಯಕ ಮೋಹನ್,ಶ್ರೀಕೃಷ್ಣ ಗೆಳೆಯರ ಬಳಗದ ಅಧ್ಯಕ್ಷರಾದ ಕುಣಿಹಳ್ಳಿ ಆರ್.ಮಂಜುನಾಥ್, ಗಂಗಾಧರ್.ಕೆ, ಸತೀಶ್, ರಾಮಲಿಂಗಾರೆಡ್ಡಿ, ಬಿ.ಎಸ್.ಜಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.