ತುಮಕೂರು: ವೈದ್ಯಕೀಯ ಚಿಕಿತ್ಸಾ ವಿಭಾಗಕ್ಕೆ ಬೆನ್ನುಲುಬಾಗಿರುವ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ರೋಗಿಗಳ ಕಾಳಜಿ ಹಾಗೂ ಚಿಕಿತ್ಸಾ ಸಮಯ ದಲ್ಲಿ ಸಂಯಮ ಕಾಯ್ದುಕೊಂಡು ಸರಿಯಾದ ಚಿಕಿತ್ಸೆ ದೊರಕಿಸುವಲ್ಲಿ ಶ್ರಮಿಸಬೇಕು ಎಂದು ಸಿದ್ಧಗಂಗಾ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಕರೆನೀಡಿದರು.
ಸಿದ್ಧಗಂಗಾ ಅಸ್ಪತ್ರೆ ಪ್ಯಾರಾಮೆಡಿಕಲ್ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ವೃತ್ತಿ ಬದ್ಧತೆ ಅದೇ ಉತ್ತಮ ಬದುಕನ್ನು ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಿದ್ದಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಪರಮೇಶ್ ಪ್ರಪಂಚದಲ್ಲಿ ಪ್ಯಾರಾಮೆಡಿಕಲ್ ಉದ್ಯೋಗಿಗಳಿಗೆ ಬಹಳಷ್ಟು ಅವಕಾಶಗಳಿದ್ದು ಒಳ್ಳೆಯ ಅಂಕಗಳ ಜೊತೆಗೆ ಇಲ್ಲಿನ ವೈದ್ಯರ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆದು ನುರಿತ ಅರೆವೈದ್ಯಕೀಯ ಸಿಬ್ಬಂಧಿಗಳಾಗಿ ಹೊರಹೊಮ್ಮಬೇಕು ಎಂದು ಕರೆನೀಡಿದರು.ಸಿದ್ಧಗಂಗಾ ಮೆಡಿಕಲ್ ಕಾಲೇಜು ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ , ಮೆಡಿಕಲ್ ಕಾಲೇಜು ಪ್ರಾಚಾ ರ್ಯರಾದ ಡಾ.ಶಾಲಿನಿ ಎಂ., ಮೆಡಿಕಲ್ ಅಧೀಕ್ಷಕ ಡಾ.ನಿರಂಜನಮೂರ್ತಿ, ಪ್ಯಾರಾಮೆಡಿಕಲ್ ಕಾಲೇಜು ಉಪ ಪ್ರಾಂಶುಪಾಲರಾದ ಡಾ.ವೀಣಾ ಉಪಸ್ಥಿತಿತರಿದ್ದರು.