Wednesday, 11th December 2024

ವೈವಿಧ್ಯಮಯ ಅವಕಾಶಗಳ ಆಗರ ಹೆಚ್ಚಿವೆ: ಡಾ.ಫರ್ಜಾನ್ ಎಂಜಿನೀರ್

ತುಮಕೂರು: ಹಿ0ದಿನ ದಿನಗಳಲ್ಲಿನ ಓದಿಗೂ ಮತ್ತು ಇಂದಿನ ಓದಿಗೂ ವ್ಯತ್ಯಾಸ ಬಹಳ ಇದೆ. ಇಂದು ವೈವಿಧ್ಯಮಯ ಅವಕಾಶಗಳ ಆಗರವೇ ವಿದ್ಯಾರ್ಥಿಗಳ ಮುಂದಿದೆ. ಭಾರತ ಇಂದು 5ನೇ ದೊಡ್ಡ ಆರ್ಥಿಕತೆ ಹೊಂದಿದ ದೇಶ, 2028ರ ಹೊತ್ತಿಗೆ ಭಾರತ 3ನೇ ದೊಡ್ಡ ಆರ್ಥಿಕತೆ ಹೊಂದುವ ದೇಶವಾಗಿ ಹೊರಹೊಮ್ಮಲಿದೆಎಂದು, ಬೆಂಗಳೂರಿನ ಸೈಟ್ ಕೇರ್ ಆಸ್ಪತ್ರೆಯ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷ ಡಾ. ಫರ್ಜಾನ್ ಎಂಜಿನೀರ್ ಪ್ರತಿಪಾದಿಸಿದರು.

ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸದಲ್ಲಿ ಮಾತನಾಡಿದ ಅವರು, ಇಂದು ಭಾರತ ರಾಷ್ಟ್ರ ಸೇವಾ ಕ್ಷೇತ್ರ ಮಾತ್ರವಲ್ಲದೆ ಉತ್ಪಾದನಾ ರಂಗದಲ್ಲೂ ಮುಂಚೂಣಿಗೆ ಬಂದು ನಿಂತಿದೆ.

ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣ ವಾಗಿ ವಿದ್ಯಾರ್ಥಿಗಳನ್ನು ಪದವೀಧರ ರನ್ನಾಗಿ ಮಾತ್ರವಲ್ಲ ಕೌಶಲ್ಯವಂತರನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾ ಸಂಸ್ಥೆಗಳ ಮೇಲಿದೆ ಎಂದರು.

ಇಂದಿನ ಜನಾಂಗಕ್ಕೆ ವೈಭವೋಪೇತ ಜೀವನ ದೊರೆತಿರುವುದಷ್ಟೇ ಅಲ್ಲದೆ ಅನ್ವೇಷಣೆ ಮತ್ತು ಸಂಶೋಧನೆಗೆ ಅವಕಾಶವಿರುವ ಪರಿಸರವೂ ಸುಲಭವಾಗಿ ದೊರೆತಿದೆ. ಉಳಿಯುವುದಕ್ಕಾಗಿ ಇಂದಿನ ವಿದ್ಯಾರ್ಥಿಗಳು ಹೋರಾಟ ಮಾಡಬೇಕಾದ ಅವಶ್ಯಕತೆ ಇಲ್ಲ, ಬದಲಾಗಿ ತಮ್ಮ ಜೀವನವನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಭೋದಿಸಿದ ಸಾಹೇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಜಿ.ಪರಮೇಶ್ವರ ಅವರು ಇಂಜಿನಿಯರಿAಗ್ ವೈದ್ಯಕೀಯ ಮತ್ತು ಡೆಂಟೆಲ್ ಕೋರ್ಸ್ ಮುಗಿಸಿದವರಿಗೆ ಘಟಿಕೋತ್ಸವದಲ್ಲಿ ಪದವಿಗಳನ್ನು ಘೋಷಿಸಿದರು. ಡಾಕ್ಟರೇಟ್ ಪದವಿ-10, ಇಂಜಿನಿಯರಿ0ಗ್-596 ವೈದ್ಯಕೀಯ-214, ದಂತ ವೈದ್ಯಕೀಯ-26 ಸೇರಿದಂತೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ವಿತರಿಸಲಾಯಿತು.

ಸಾಹೇ ವಿವಿ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ ಅವರು ಸಾಹೇ ವಿಶ್ವವಿದ್ಯಾನಿಲಯ ಪ್ರಗತಿನೋಟದ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಟ್ ಕೇರ್ ಆಸ್ಪತ್ರೆಯ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ಫರ್ಜಾನ್ ಎಂಜಿನೀರ್‌ಅವರನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹೇ ರಿಜಿಸ್ಟಾçರ್ ಡಾ. ಎಮ್.ಝೆಡ್.ಕುರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸುಶಿಲ್‌ ಚಂದ್ರ ಮಹಾಪಾತ್ರ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ್,ಶ್ರೀ ಸಿದ್ಧಾರ್ಥ ಇಂಜಿನಿಯರಿ0ಗ್ ಕಾಲೇಜಿನ ಪ್ರಾಂಶುಪಾಲರಾದ ಡಾಂ.ಎಸ್.ರವಿಪ್ರಕಾಶ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಎ.ಎಸ್.ರಾಜು ಘಟಿಕೋತ್ಸವ ಮೇಲ್ವಿಚಾರಕರು ಮತ್ತು ಉಪ ಕುಲಸಚಿವರು ಆದ ಡಾ.ಸುಧೀಪ್ ಕುಮಾರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಾದ ಡಾ. ಕರುಣಾಕರ್ ಸಾಹೇ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು.