Wednesday, 11th December 2024

ಶೆಟ್ಟಿಕೆರೆಯಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ : ಶಿಶು ಅಭಿವೃದ್ದಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೋಷಣ್ ಪಕ್ವಾಡ ಕಾರ್ಯಕ್ರಮ ಶೆಟ್ಟಿಕೆರೆಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆಯಿತು.

ಮುಖ್ಯ ಶಿಕ್ಷಕ ವೆಂಕಟೇಶಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಶು ಮತ್ತು ಮಹಿಳಾ ಯೋಜನೆ ಇಲಾಖೆಯ ಮೇಲ್ವಿಚಾರಕಿ ರಮ್ಯಾ ಎದೆ ಹಾಲಿನ ಮಹತ್ವದ ಕುರಿತು ಗರ್ಭಿಣಿ, ಬಾಣಂತಿಯರು ಹಾಗು ಪೋಷಕರಿಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ವಿಶಾಲಕ್ಷಮ್ಮ, ಸಿಆರ್‌ಪಿ ನವೀನ್, ಶಿಕ್ಷಕರಾದ ಬೀರಪ್ಪ, ನಾಗರಾಜು, ಅಂಗನವಾಡಿ ಕಾರ್ಯಕರ್ತೆಯರಾದ ಲಲಿತಮ್ಮ, ಜಯಮ್ಮ, ಲತಾ, ಸುಲೋಚನ, ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು ಉಪಸ್ಥಿತರಿದ್ದರು.