
ಎನ್.ಆರ್.ಕಾಲೋನಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೋಳಿಗೆ ಹಿಡಿದು ತಮಟೆ ಸದ್ದಿನೊಂದಿಗೆ ಮನೆ ಮನೆಗೆ ತೆರಳಿ ಮತ ಹಾಗೂ ಹಣಕ್ಕಾಗಿ ಜೋಳಿಗೆ ಹಿಡಿದು ಮತ ಭಿಕ್ಷೆ ಆರಂಭಿಸಿದರು. ಇದಕ್ಕೆ ಭರ್ಜರಿ ಸ್ವಾಗತ ದೊರೆತಿದ್ದು ಮಹಿಳೆಯರು ಮಾಜಿ ಸಚಿವ ಸೊಗಡು ಶಿವಣ್ಣಗೆ ಆರತಿ ಬೆಳಗಿ ಸ್ವಾಗತಿಸಿದರಲ್ಲದೆ, ತಮ್ಮ ಇಚ್ಚಾನುಸಾರ ಜೋಳಿಗೆಗೆ ಹಣ ಹಾಕಿ ಧನ್ಯತೆ ಮೆರೆದರು, ಈ ಬಾರಿ ನೀವು ಶಾಸಕರಾಗಿ ಗೆದ್ದು ಬರಬೇಕೆಂದು ಆಶೀರ್ವದಿಸಿದರು.
ಜನರ ಅಭಿಮಾನ ಕಂಡು ಮಾಜಿ ಸಚಿವ ಸೊಗಡು ಶಿವಣ್ಣ ಕ್ಷಣಕಾಲ ಭಾವುಕರಾದರು. ಎನ್.ಆರ್.ಕಾಲೋನಿ ಮುಖಂಡರಾದ ನರಸಿಂಹಮೂರ್ತಿ, ಜಯಮೂರ್ತಿ, ಬಸವರಾಜು, ಬಿಜೆಪಿ ಮುಖಂಡರಾದ ಊರುಕೆರೆ ನಂಜು0ಡಪ್ಪ, ಚೌಡೇಶ್, ಹೆಬ್ಬಾಕ ಮಲ್ಲಿಕಾರ್ಜುನ್, ಧನಿಯಾಕುಮಾರ್, ಗಂಗಾಧರಸ್ವಾಮಿ, ಗೋಕುಲ್ ಮಂಜುನಾಥ್, ಶಿವಶಂಕರ್ ಉಪಸ್ಥಿತರಿದ್ದರು.