Wednesday, 11th December 2024

ಕಾಂಗ್ರೆಸ್ ಪಕ್ಷದಿಂದ ವಾಸಣ್ಣನವರ ಸ್ಪರ್ಧೆ ಬಹುತೇಕ ಖಚಿತ

ಗುಬ್ಬಿ : ತಾಲೂಕಿನ ಮಂಚಲ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚುವೀರನಹಳ್ಳಿಯಲ್ಲಿ ನಡೆದ ಜೆಡಿಎಸ್ ಬೂತ್ ಮಟ್ಟ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಎಂ ಆರ್ ರಂಗಸ್ವಾಮ ಯ್ಯ, ಶಾಸಕ ಶ್ರೀನಿವಾಸ್ ರವರ ಕುಟುಂಬ ಮೂಲತ ಕಾಂಗ್ರೆಸ್ ಪಕ್ಷದವರಾಗಿದ್ದು ಅನಿವಾರ್ಯವಾಗಿ ಜೆಡಿಎಸ್ ಸೇರಿದ್ದರು.

ನಾವುಗಳು ಸುಮಾರು 40 ವರ್ಷಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ವಾಸಣ್ಣನವರ ಸ್ಪರ್ಧೆ ಬಹುತೇಕ ಖಚಿತವಾಗಿದ್ದು ನಮ್ಮ ಭಾಗದ ಎಲ್ಲಾ ಕಾಂಗ್ರೆಸ್ ಕಾರ್ಯ ಕರ್ತರು ಸಹ ಅವರನ್ನು ಬೆಂಬಲಿಸಿದಾಗಿ ತಿಳಿಸಿದರು.

 ಮುಖಂಡ ಮಂಚಲ ದೊರೆ ರಮೇಶ್ ಮಾತನಾಡಿ,  ಕುಮಾರಸ್ವಾಮಿ ಅವರು ವಾಸಣ್ಣನವರಿಗೆ ಮಾಡಿದಂತ ಮೋಸದಿಂದ ಬೇಸತ್ತು ಸ್ವಯಂ ಪ್ರೇರಿತರಾಗಿ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಗುಬ್ಬಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಪ್ರಾಬಲ್ಯ ಹೆಚ್ಚಿಸಿದವರು ವಾಸಣ್ಣ ನವರು  ಸ್ವಾಭಿಮಾನಿ ವ್ಯಕ್ತಿತ್ವವುಳ್ಳ ವಾಸಣ್ಣನವರು ನಮ್ಮ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಬೇಕು.
ಸಾಮಾನ್ಯ ಸದಸ್ಯರನ್ನು ಸಮಾನರಂತೆ ಕಾಣುವ ವಾಸಣ್ಣನವರು ವ್ಯಕ್ತಿತ್ವ ತಾಲೂಕಿನ ಜನತೆಗೆ ತಿಳಿದಿದ್ದು ಯಾವ ಪಕ್ಷದಿಂದ ಸ್ಪರ್ಧಿಸಿದರು ಸಹ ಅವರ ಬೆಂಬಲವಾಗಿ ನಿಂತು ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ವಾಸಣ್ಣ ಅಭಿಮಾನಿ ಬಳಗದ ಮುಖಂಡ : ಕೆ ಆರ್ ವೆಂಕಟೇಶ್ ಮಾತನಾಡಿ  ಬಿಜೆಪಿ ಸರ್ಕಾರ ಜನರಿಗೆ ಸುಳ್ಳು ಹೇಳುತ್ತ ಜನರನ್ನು ವಂಚಿಸಿ 40% ಕಮಿಷನ್ ದಂಧೆಯಲ್ಲಿ ಮುಳುಗಿದೆ ಯಾವ ಇಲಾಖೆಯಲ್ಲಿ ನೋಡಿದರೂ ಕಮಿಷನ್ ದಂಧೆಯ ಹಾವಳಿ ಹೀಗಿದ್ದಲ್ಲಿ ಜನರಿಗೆ ಹೇಗೆ ಸ್ಪೂರ್ತಿದಾಯಕ ಆಡಳಿತವನ್ನು ಕೊಡಲು ಸಾಧ್ಯ. ಇಂತಹ ದುರಾಡಳಿತ ಬಿಜೆಪಿ ಪಕ್ಷದಿಂದ ಬಂದಂಥ ಈಗಿನ ಜೆಡಿಎಸ್ ಅಭ್ಯರ್ಥಿ ವಾಸಣ್ಣನವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್ ಠೇವಣಿ ಕಳೆದುಕೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುರು ರೇಣುಕಾರಾಧ್ಯ, ತಾಲೋಕ್ ಪಂಚಾಯಿತಿ ಮಾಜಿ ಸದಸ್ಯೆ ಕರಿಯಮ್ಮ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಗಂಗಮ್ಮ, ಉಪಾಧ್ಯಕ್ಷ ರಾಜು, ಮುಖಂಡ ಮಂಚಲ ದೊರೆ ರಮೇಶ್, ಮುದ್ದ ರಂಗಪ್ಪ, ಸಣ್ಣ ರಂಗಯ್ಯ, ಕರಿ ಬಸವಣ್ಣ, ಶೇಷೇಗೌಡ, ಶಕುಂತಲಾ, ಎಂಜರಪ್ಪ, ಗುರುಸಿದ್ದಪ್ಪ, ಲಿಂಗರಾಜು,ಶಿವಣ್ಣ ಮುಂತಾದವರಿದ್ದರು.