ತುಮಕೂರು: ಪೌರಾಣಿಕ ಹಿನ್ನೆಲೆಯಿರುವ ವೀರಗಾಸೆ ಕಲೆಯನ್ನು ಪ್ರಧಾನ ವಸ್ತು ವಾಗಿಟ್ಟುಕೊಂಡು ಚಿತ್ರೀಕರಿಸಿರುವ ಪರಂವ ಸಿನಿಮಾ ಜು.21ಕ್ಕೆರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ. ಈ ನೆಲದ ಕಥೆಯನ್ನಾಧರಿಸಿದ ಸಿನಿಮಾವನ್ನು ಕನ್ನಡಿಗರು ನೋಡಿ, ಆಶೀರ್ವದಿಸುವಂತೆ ಚಿತ್ರದ ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸುಮಾರು 200ಕ್ಕೂ ಹೆಚ್ಚು ರಂಗಭೂಮಿಯ ಹಿನ್ನೆಲೆಯುಳ್ಳ ಹೊಸ ಕಲಾವಿದರ ನಟಿಸಿರುವ ಪರಂವ ಚಿತ್ರ. ತುಮಕೂರು ಜಿಲ್ಲೆಯಲ್ಲಿ ಶೇ.80ರಷ್ಟು ಚಿತ್ರೀಕರಣ ನಡೆಸಿದ್ದು, ಸಿದ್ದಗಂಗೆಯಲ್ಲಿಯೂ ಚಿತ್ರೀಕರಿಸಲಾಗಿದೆ. ಸ್ಥಳೀಯ ಪ್ರತಿಭೆಯಾಗಿ ನಾವು ಮಾಡಿದ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.
ವೀರಗಾಸೆ ಬಹಳ ಪ್ರಸಿದ್ದ ಕಲೆ.ಶಿವನ ಡಮರುಗದಿಂದ ಬರುವ ನಾದವನ್ನು ಪರಂವ ಎಂದು ಸಂಸ್ಕೃತದಲ್ಲಿ ಕರೆಯಲಾಗು ತ್ತಿದೆ. ವೀರಗಾಸೆಯನ್ನು ಬದುಕಾಗಿಸಿಕೊಂಡಿದ್ದ ಕುಟುಂಬವೊಂದು,ತನಗೊಲಿದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಪಡುವ ಪಡಿ ಪಾಟಲುಗಳನ್ನೇ ಕಥಾವಸ್ತುವನ್ನಾಗಿಸಲಾಗಿದೆ.ರಂಗಭೂಮಿ ಯ ಹಿನ್ನೆಲೆಯಿಂದ ಬಂದ ಪ್ರೇಮ್ ಸಿಡೇಗಲ್ ಚಿತ್ರದ ನಾಯಕ ನಾಗಿದ್ದು,ಮಂಗಳೂರು ಮೂಲದ ಮೈತ್ರೇಯಿ ನಾಯಕನಟಿಯಾಗಿದ್ದ,ಸುಮಾರು 200ಕ್ಕೂ ಹೆಚ್ಚು ಜನರು ಪಾತ್ರಗಳನ್ನು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆನಂದ್, ನವೀನ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.