ತುಮಕೂರು: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಮತ್ತು ಜಿಲ್ಲೆಗೆ ಪ್ರಥಮ ರ‍್ಯಾಂಕ್, ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್‌ಗಳನ್ನು ಪಡೆಯುವುದರೊಂದಿಗೆ ವಿದ್ಯಾನಿಧಿ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದೆ.
ಚಿನ್ಮಯಿ ಎಂ. ಮತ್ತು ಗೀತಾ ಇ. 600 ರಲ್ಲಿ 595 (99.16%) ಅಂಕಗಳನ್ನು ಗಳಿಸಿ ಈ ಸಾಧನೆ ತೋರಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿಜ್ಞಾನ್ 585 (97.7)ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಒಟ್ಟಿನಲ್ಲಿ ವಿದ್ಯಾ ನಿಧಿ ಕಾಲೇಜು95.5 ಪ್ರತಿಶತ ಫಲಿತಾಂಶವನ್ನು ದಾಖಲಿಸಿದೆ.
ಸಿ.ಎ. ಕಸ್ತೂರಿ 594 (99) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದು ಭಾವನಾಜಿ.ಎ., ಕುಶಾಲ್ ಕಂಕರಿಯಾ, ರಕ್ಷಿತಾಜೆ. 593 (98.83%) ಅಂಕಗಳೊಂದಿಗೆ ಐದನೇ ರ‍್ಯಾಂಕ್‌ಗೆ ಅರ್ಹರಾಗಿದ್ದಾರೆ. ಮನೋಜ್ಞಾ ಆರ್. ಮತ್ತು ಮಾನಸಾ ಟಿ.ಎ.592 (98.67%) ಅಂಕಗಳೊAದಿಗೆ ಆರನೇ ರ‍್ಯಾಂಕ್ ಗಳಿಸಿದ್ದಾರೆ. ಶಬಾದಿ ನೇಹಾ 589 (98.17%) ಏಳನೇ ರ‍್ಯಾಂಕ್, ಖುಷಿ ಕೊಂಡ 588 (98%) ಎಂಟನೇ ರ‍್ಯಾಂಕ್ ಪಡೆದಿದ್ದಾರೆ. ಸಂಚನಾ 587 (97.83%)ಅಂಕಗಳನ್ನು ಗಳಿಸಿದ್ದಾರೆ.
ವಿಜ್ಞಾನ ವಿಭಾಗದ ನಿಧಿ ಡಿ.ಗೌಡ 584 (97.3%), ವರುಣ್‌ಗೌಡಆರ್. 583 (97%), ಸೃಜನ್‌ಎಸ್.ಜೈನ್ 581 (96.8%), ಪ್ರಿಯಾ ಪುಲಿಕೇಶಿ 580 (96%) ಅಂಕಗಳನ್ನು ಗಳಿಸಿ ಜಿಲ್ಲೆಗೆ ಕ್ರಮವಾಗಿ ಮೂರು, ನಾಲ್ಕು, ಐದು ಮತ್ತು ಆರನೇ ರ‍್ಯಾಂಕ್ ಪಡೆದಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ 380 ಮಂದಿ ಅತ್ಯುನ್ನತ ಶ್ರೇಣಿ, 283 ಮಂದಿ ಪ್ರಥಮ ಶ್ರೇಣಿ ಮತ್ತು45 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
‘ನಮ್ಮ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳು ಕಳೆದ ಹಲವು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ರ‍್ಯಾಂಕುಗಳನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಧ್ಯೇಯವಾಗಿಸಿಕೊಂಡು ಅವರ ಸಾಮರ್ಥ್ಯವನ್ನು ಗುರುತಿಸಿ, ಅಗತ್ಯವೆನಿಸಿದ ಹೆಚ್ಚುವರಿ ತರಬೇತಿಯನ್ನು ಒದಗಿಸುವಲ್ಲಿ ನಮ್ಮ ಶಿಕ್ಷಕ ವೃಂದ ಪಣತೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆದ ಕೆ.ಬಿ.ಜಯಣ್ಣ ಶ್ಲಾಘಿಸಿದರು.
‘ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಸ್ಪರ್ಧೆಯಿದ್ದು, ಗೆಲ್ಲುವ ಛಲವಿದ್ದರೆ ಅವರು ಯಶಸ್ಸನ್ನು ಪಡೆದೇ ಪಡೆಯುತ್ತಾರೆ. ರಾಜ್ಯಮಟ್ಟದಲ್ಲಿ ರ‍್ಯಾಂಕು ಗಳನ್ನು ಪಡೆಯುವುದು ಸುಲಭ ಸಾಧ್ಯವಲ್ಲ. ಪಿಯುಸಿಯ ಮೊದಲ ದಿನದಿಂದಲೇ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಮಾತ್ರ ಮಕ್ಕಳು ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸುವುದಕ್ಕೆ ಸಾಧ್ಯ. ಮುಂದಿನ ವರ್ಷ ಪ್ರಥರ‍್ಯಾಂಕ್ ಪಡೆಯುವಂತಾಗಲಿ ಎಂದು ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಿಗೆ ಶುಭಕೋರಿದರು. ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.