Monday, 14th October 2024

Tumkur News: ಎಡಿಜಿಪಿ ರೌಡಿ ವರ್ತನೆ-ಶಾಸಕ ಕಿಡಿ

ತುಮಕೂರು: ಎಡಿಜಿಪಿ ಚಂದ್ರಶೇಖರ್ ಕೀಳು ಮಟ್ಟಕ್ಕೆ ಇಳಿದು ರೌಡಿಯ ರೀತಿಯಲ್ಲಿ ಹೇಳಿಕೆ ಕೊಟ್ಟಿರುವುದು ಖಂಡನೀಯ ಎಂದು ಶಾಸಕ ಸುರೇಶ್ ಗೌಡ ಹೇಳಿದರು.

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಸಿದ ವಿಚಾರ ಸಂಬಂಧ ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿ, ಬಿಳಿಯರು-ಕರಿಯರು ಅಂತಾ ದ್ವೇಷ ಮಾಡುವುದು, ಅವಹೇಳನ ಮಾಡುವುದು ನಡೆಯುತ್ತಲೇ ಇದೆ. ಎಡಿಜಿಪಿ ಚಂದ್ರಶೇಖರ್ ಬಿಳಿಯಾಗಿದ್ದು ಸುಂದರವಾಗಿ ಇದ್ದಾರೆ. ನಮ್ಮ ಕುಮಾರಸ್ವಾಮಿ ರವರು ಕಪ್ಪುಗೆ ಇದ್ದಾರಲ್ಲಾ ಅದಕ್ಕೆ ಹಂದಿಗೆ ಹೋಲಿಕೆ ಮಾಡಿದ್ದಾರೆ. ಒಬ್ಬ ಅಧಿಕಾರಿ ಅವರು ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ. ಶಾಸಕಾಂಗದ ಮುಂದೆ ಅವನು ಏನು ಅಲ್ಲ. ನನ್ನ 30 ವರ್ಷದ ರಾಜಕೀಯದಲ್ಲಿ ಈ ರೀತಿಯ ಹೇಳಿಕೆಗಳನ್ನು ಕೇಳಿರಲಿಲ್ಲ. ಎಡಿಜಿಪಿಯೂ ಸಹ ನೌಕರ ಅಷ್ಟೇ. ಒಬ್ಬ ನೌಕರನಾಗಿ ಈ ರೀತಿಯ ಹೇಳಿಕೆ ಕೊಡಬಾ ರದು ಕೂಡಲೇ ಸಿಎಂ ಹಾಗೂ ಗೃಹ ಸಚಿವರು ಅಪಾಲಜಿ ಕೇಳಿಸಬೇಕು ಎಂದರು.

ನಾನು ಪ್ರಧಾನಿ ಮೋದಿಗೆ, ಗೃಹ ಸಚಿವ ಅಮಿತ್‌ಷಾಗೆ ವಿನಂತಿ ಮಾಡುತ್ತೇನೆ. ಆತ ಆಂಧ್ರ ಪ್ರದೇಶದವರು, ಹಿಮಾಚಲ ಪ್ರದೇಶ ಕೇಡರ್‌ನಲ್ಲಿ ಇಲ್ಲಿ ಡೆಪ್ಯೂಟ್ ಮೇಲೆ ಇದ್ದಾರೆ. ಕೂಡಲೇ ಅವರನ್ನು ಹಿಮಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸುತ್ತೇನೆ. ಈ ರೀತಿಯ ಅವಮಾನವನ್ನು ಯಾರು ಪ್ರಜಾಪ್ರಭುತ್ವದಲ್ಲಿ ಸಹಿಸಿಕೊಳ್ಳಲ್ಲ. ರಾಜಕಾರಣ ಯನ್ನು ಜನರಿಂದ ಆಯ್ಕೆ ಮಾಡಿರೋದು. ಅಧಿಕಾರಿ ಇತಿ-ಮಿತಿಯಲ್ಲಿ ಹದ್ದು-ಬಸ್ತಿನಲ್ಲಿ ಮಾತನಾಡಬೇಕು ಎಂದರು. ನಿರ್ಮಲ ಸೀತರಾಮನ್ ಮೇಲೆ ಎಫ್‌ಐಆರ್ ವಿಚಾರಕ್ಕೆ ಪ್ರತಿಕ್ರಯಿಸಿ ಬಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಮಾಡಿದೆ.

ಬಾಂಡ್ ಅನ್ನು ಕಾಂಗ್ರೆಸ್‌ನವರು ಕೂಡ ತೆಗೆದುಕೊಂಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ತೆಗೆದುಕೊಂಡಿದ್ದಾರೆ, ಕಾಂಗ್ರೆಸ್ ಪಕ್ಷ ತೆಗೆದುಕೊಂಡಿದೆ. ಈ ಬಗ್ಗೆ ಸಿದ್ದರಾಮಯ್ಯ ಹೇಳಲಿ, ಅದನ್ನು ಯಾಕೆ ಮಾತನಾಡುವುದಿಲ್ಲ. ಅವರ ಮೇಲೆ ಎಫ್‌ಐಆರ್ ಆಗಬೇಕಲ್ವಾ. ಇದೆಲ್ಲ ನೈತಿಕತೆ ಇಟ್ಟುಕೊಂಡು ಮಾತಾಡಬೇಕು ಎಂದರು.

ಇದನ್ನೂ ಓದಿ: Tumkur News: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಕಷ್ಟ