ಗುಬ್ಬಿ: ತಾಲೂಕಿನ ಜಿ ಹೊಸಹಳ್ಳಿ ಗ್ರಾಮದ 33 ಗ್ರಾಮಗಳ ಆರಾಧ್ಯ ದೇವತೆ ಶ್ರೀ ಆಲದ ಕೊಂಬೆಯಮ್ಮ ದೇವಸ್ಥಾ ನದ ಜಾಗವನ್ನು ನ್ಯಾಯಾಲಯ ಕಟ್ಟಡ ನಿರ್ಮಾಣ ಮತ್ತು ಇನ್ನಿತರ ಸರ್ಕಾರಿ ಉದ್ದೇಶಕ್ಕೆ ನೀಡಲಾಗುತ್ತಿದೆ ಎಂದು ತಾಲೂಕ ಆಡಳಿತದ ವಿರುದ್ಧ 33 ಗ್ರಾಮಗಳ ಮುಖಂಡರು ಮತ್ತು ಭಕ್ತಾದಿಗಳು ವಿರೋಧ ವ್ಯಕ್ತಪಡಿಸಿ ದೇವಸ್ಥಾನದ ಮುಂಭಾಗ ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಸ್. ಆರ್ ಶ್ರೀನಿವಾಸ್ ಪುರಾತನ ಕಾಲದಿಂದಲೂ ಸಹ ಈ ಭಾಗದ ಜನರು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ತಮ್ಮದೇ ಆದಂತಹ ಧಾರ್ಮಿಕ ಭಾವನೆಗಳ ಜೊತೆಯಲ್ಲಿ ಸಾಗುತ್ತಿದ್ದಾರೆ. ಹಬ್ಬ ಹರಿದಿನ ಜಾತ್ರಗಳನ್ನು ಇಲ್ಲಿ ಮಾಡುತ್ತಿದ್ದು ದೇವಾಲಯಕ್ಕೆ ಜಾಗವನ್ನು ಉಳಿಸುವಂತಹ ಕೆಲಸಕ್ಕೆ ಖಂಡಿತವಾಗಿಯೂ ಬದ್ಧವಾಗಿದ್ದು ಟ್ರಸ್ಟ್ ರಚನೆ ಮಾಡಿ ಅದರ ಮೂಲಕ ದೇವಾಲಯಕ್ಕೆ ಅಗತ್ಯವಿರು ವಂತಹ ಭೂಮಿಯನ್ನ ಸರ್ಕಾರದ ಜೊತೆಯಲ್ಲಿ ಮಾತನಾಡಿ ದೇವಾಲಯಕ್ಕೆ ಬಿಡುತ್ತೇವೆ ಎಂದು ಭರವಸೆ ನೀಡಿದರು.
ಹುಚ್ಚಪ್ಪಾಜಿ ಅರಸ್ ಮಾತನಾಡಿ ಜಿ ಹೊಸಹಳ್ಳಿ ಗ್ರಾಮದ ಸರ್ವೇ ನಂಬರ್ 26ರಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಆಲದ ಕೊಂಬೆಯಮ್ಮ ದೇವಸ್ಥಾನವಿದ್ದು. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬಾರಿ ಜನಸಾಗರವೇ ಹರಿದು ಬರುತ್ತದೆ. ಧಾರ್ಮಿಕ ಹಿನ್ನೆಲೆ ಇರುವ ಈ ಸ್ಥಳವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ನಾವು ಬಿಡುವುದಿಲ್ಲ ತಾಲೂಕ್ ಆಡಳಿತ ನಿರ್ಧಾರವನ್ನು ಹಿಂಪಡೆಯಬೇಕು ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ 33 ಗ್ರಾಮಗಳಿಗೆ ಸೇರಿದ ಗ್ರಾಮ ದೇವತೆಯ ಧಾರ್ಮಿಕ ಕ್ಷೇತ್ರ ವಾಗಿದ್ದು. ತಾಲೂಕ ಆಡಳಿತ ಧಾರ್ಮಿಕ ಸ್ಥಳವನ್ನು ಉಳಿಯಬೇಕು. ತಹಶೀಲ್ದಾರ್ ಅವರು ಐತಿಹಾಸಿಕ ಮಹತ್ವವುಳ್ಳ ಜಾಗವನ್ನು ಬೇರೆಯವರಿಗೆ ನೀಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ: Gubbi: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದು ಶ್ರದ್ಧಾಂಜಲಿ ಸಲ್ಲಿಸಿದ ಗುಬ್ಬಿ ಅಭಿಮಾನಿಗಳು