Friday, 29th November 2024

Tumkur News: ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ

ಚಿಕ್ಕನಾಯಕನಹಳ್ಳಿ: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಸಂತೆ ಮೈದಾನ, ಹುಳಿಯಾರಿನ ಬಸ್ ನಿಲ್ದಾಣ ಹಾಗೂ ಹುಳಿಯಾರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಚ್ಐವಿ ಮತ್ತು ಏಡ್ಸ್ ಕುರಿತು  ಬೀದಿ ನಾಟಕ   ಪ್ರದರ್ಶನ ವನ್ನು ಮಾಡಲಾಯಿತು. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ತುಮಕೂರು ಹಾಗೂ ತಾಲೂಕು ವೈದ್ಯಾಧಿಕಾರಿಗಳ ಕಚೇರಿ, ಚಿಕ್ಕನಾಯಕನಹಳ್ಳಿ ಇವರ ಸಹಯೋಗದಲ್ಲಿ  

“ತೀವ್ರಗೊಂಡ ಎಚ್ಐವಿ/ ಏಡ್ಸ್” ಕುರಿತು ಜಾಗೃತಿ ಅಭಿಯಾನದಡಿಯಲ್ಲಿ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು  

 ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಮೂಲಕ  ಹೆಚ್ಐವಿ/ಏಡ್ಸ್ ಕಾಯಿಲೆ ಹರಡುವ ಬಗೆ, ಮುನ್ನೆಚ್ಚರಿಕೆ ಕ್ರಮಗಳು, ಕಾಯಿಲೆಗೆ  ತುತ್ತಾಗಿರುವ ಜನರಿಗೆ ಇರುವ ಆರೋಗ್ಯ ಮತ್ತು ಕಾನೂನು ಸೌಲಭ್ಯಗಳ ಕುರಿತು ಸಮುದಾಯದ ಜನರಿಗೆ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ವಿಭಾಗದ  ಮುಖ್ಯಸ್ಥರಾದ ನಾಗರಾಜ್.ಬಿ.ಜಿ ಉಪನ್ಯಾಸಕರಾದ ಪ್ರಶಾಂತ್ ಕುಮಾರ್ , ಮಂಜುನಾಥಯ್ಯ ನಾಗಭೂಷಣ, ವಿಶ್ವನಾಥ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ನವೀನ್, ಮುರಳಿ. ತಿಪ್ಪೇಸ್ವಾಮಿ. ವಿಜಯರವರು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ವಿ ವೆಂಕಟರಾಮಯ್ಯ. ಉಮಾಶಂಕರ್, ನಿರೂಪ ರಾವತ್ ರವರು ಮತ್ತು ಇತರ ಆರೋಗ್ಯ ಸಿಬ್ಬಂದಿ ಹಾಜರಿದ್ದರು.