Saturday, 14th December 2024

ತುಮಕೂರು ವಿವಿ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ಬಹುತೇಕ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕ ವಾಗುವ ಸಾಧ್ಯತೆಯಿದೆ. ಪ್ರೊ.ಸಿದ್ದೇಗೌಡ ಅವರ ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ 56 ಮಂದಿ ಅರ್ಜಿ ಸಲ್ಲಿಸಿದ್ದರು.

ಕುಲಪತಿ ಶೋಧನಾ ಸಮಿತಿಯ ನಿರ್ಣಯದಂತೆ ಅಂತಿಮವಾಗಿ ಮೂವರ ಹೆಸರು ರಾಜ್ಯಪಾಲರ ಅಂಗಳಲ್ಲಿದೆ. ಅದರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟೇಶ್ವರಲು ಹೆಸರು ಮುಂಚೂಣಿಯಲ್ಲಿದೆ. ಈ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿದ್ದರು.

ವೆಂಕಟೇಶ್ವರಲು ಅವರೊಂದಿಗೆ ಹಂಪಿ ವಿಶ್ವವಿದ್ಯಾನಿಲಯದ ಟಿ.ಪಿ.ವಿಜಯ್, ಮೈಸೂರು ವಿವಿಯ ಡಾ.ವಿಜಯ್ ಕುಮಾರ್ ಅವರ ಹೆಸರು ರಾಜ್ಯಪಾಲರಿಗೆ ರವಾನೆಯಾಗಿದೆ.