Friday, 13th December 2024

ಕೆರೆಯಲ್ಲಿ ನೀರಿನ ರಭಸಕ್ಕೆ ಸಿಲುಕಿ ಇಬ್ಬರು ನೀರು ಪಾಲು

ಗುಬ್ಬಿ: ತಾಲೂಕಿನ ಕಲ್ಲೂರು ಕೆರೆಯಲ್ಲಿ ನೀರನ ರಬಸಕ್ಕೆ ಸಿಲುಕಿ ಇಬ್ಬರು ವ್ಯಕ್ತಿಗಳು ನೀರು ಪಾಲಾಗಿರುವ ಘಟನೆ ಜರುಗಿದೆ.
ನೀರಿನಲ್ಲಿ ಕೈ ಕಾಲು ತೋಳೆಯಲು ಇಳಿದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ನೀರುಪಾಲದ ವ್ಯಕ್ತಗಳನ್ನು ಕಲ್ಲೂರು ಗ್ರಾಮದ ನಟರಾಜ್(28)ವರ್ಷ. ಹಾಗೂ ಹನುಮಂತಪ್ಪ (45)ವರ್ಷ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಿ.ಎಸ್.ಪುರ ಪೊಲೀಸರು ಬೇಟಿ ನೀಡಿ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ ಗಳ ಪತ್ತೆಗೆ ಮುಂದಾಗಿದ್ದಾರೆ.
ಘಟನಾ ಸ್ಥಳಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಜೊತೆಗೆ ಜಿಲ್ಲಾಡಳಿತ ನೀರಿನಲ್ಲಿ ಮುಳುಗಡೆಗೊಂಡಿ ರುವ ಕುಟುಂಬಸ್ಥರಿಗೆ ಹತ್ತು ಲಕ್ಷ ರೂಗಳ ಪರಿಹಾರ ವಿತರಣೆ ಮಾಡುವ ಜೊತೆಗೆ ಅತಿ ತುರ್ತಾಗಿ ಮುಳುಗಡೆ ಗೊಂಡಿರುವ ವ್ಯಕ್ತಿಗಳ ಪತ್ತೆ ಕಾರ್ಯಕ್ಕೆ ಮುಂದಾಗುವಂತೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಬಿ ಆರತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಹಾಗೂ ಕಂದಾಯ ನಿರೀಕ್ಷಕ ರಾಜಶೇಖರ್ ಗ್ರಾಮ ಲೆಕ್ಕಾಧಿಕಾರಿ ಶಶಿ ಕುಮಾರ್ ಸಿಎಸ್ ಪುರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು