• ಯುನೈಟೆಡ್ ವೇ ಆಫ್ ಬೆಂಗಳೂರು ಸಹಯೋಗದಲ್ಲಿ ಅನುಷ್ಠಾನಗೊಳಿಸಲಾದ ಈ ಉಪಕ್ರಮವು “ಎಲ್ಲರಿಗೂ ಸ್ವಚ್ಛ ನೀರು ಮತ್ತು ನೈರ್ಮಲ್ಯ”ವನ್ನು ಸಾಧಿಸುವ ಮೂಲಕ ಎಸ್.ಡಿ.ಜಿ. 6 ಗುರಿಯನ್ನು ಪೂರೈಸುತ್ತದೆ
• ಈ ಕೆರೆಯು ಈಗ 18 ಕೋಟಿ ಲೀಟರ್ ಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು ಸ್ಥಳೀಯ ಅಂತರ್ಜಲ ಹೆಚ್ಚಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ
ಬೆಂಗಳೂರು: ಬೆಂಗಳೂರು ಎದುರಿಸುತ್ತಿರುವ ತೀವ್ರವಾದ ನೀರಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸುಸ್ಥಿರ ಮೊಬಿಲಿಟಿಯಲ್ಲಿ ಜಾಗತಿಕ ನಾಯಕ ಆಲ್ಸ್ಟಂ, ಮುಂಚೂಣಿಯ ಲಾಭರಹಿತ ಸಂಸ್ಥೆ ಯುನೈಟೆಡ್ ವೇ ಬೆಂಗಳೂರು ಜೊತೆಯಲ್ಲಿ ಸಹಯೋಗ ಹೊಂದಿದ್ದು ಬೆಂಗಳೂರು ಪೂರ್ವದ ದೊಡ್ಡಬಾನಹಳ್ಳಿ ಗ್ರಾಮದಲ್ಲಿರುವ ಬಿದರೆ ಅಗ್ರಹಾರ ಕೆರೆಯನ್ನು ಯಶಸ್ವಿಯಾಗಿ ಪುನರುಜ್ಜೀವನ ನೀಡಿದೆ. ಈ ಉಪಕ್ರಮವು `ವೇಕ್ ದಿ ಲೇಕ್’ ಯೋಜನೆಯ ಅನ್ವಯ ಇದ್ದು ಎಸ್.ಡಿ.ಜಿ. ಗುರಿ 6 ಅನ್ನು ಪೂರೈಸುತ್ತದೆ.
ಈ ಸಮಗ್ರ ಪುನರುಜ್ಜೀವನ ಯೋಜನೆಯು ಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು 18 ಲೀಟರ್ ಗಳಿಗೆ ಹೆಚ್ಚಿಸಿದ್ದು ಇದು ಅಂತರ್ಜಲ ಪ್ರಮಾಣ ಹೆಚ್ಚಿಸಲಿದೆ ಮತ್ತು ದಕ್ಷಿಣ ಪಿನಾಕಿನಿ ನದಿಗೆ ಜೀವ ತುಂಬಿದೆ. ಇದರಲ್ಲಿ 25,800 ಕ್ಯೂಬಿಕ್ ಮೀಟರುಗಳಷ್ಟು ಹೂಳು ನಿವಾರಿಸಲಾಗಿದೆ ಮತ್ತು 8,300 ಕ್ಯೂಬಿಕ್ ಮೀಟರುಗಳಷ್ಟು ಮಣ್ಣನ್ನು ನಿವಾರಿಸಲಾಗಿದ್ದು ಅದರ ನೀರಿನ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು `ಕೆರೆಗಳ ನಗರ’ ಎಂದೂ ಖ್ಯಾತಿ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ನಗರವು ತೀವ್ರ ನಗರೀಕರಣ, ಜನಸಂಖ್ಯೆಯ ಹೆಚ್ಚಳ ಮತ್ತು ವಾತಾವರಣದ ಬದಲಾವಣೆಯಂತಹ ಅಂಶಗಳಿಂದ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ. ನಗರವು ಹೆಚ್ಚಾಗಿ ಅಂತರ್ಜಲವನ್ನು ಆಧರಿಸಿದೆ, ಅದು ಆತಂಕಕಾರಿ ಮಟ್ಟದಲ್ಲಿ ಕುಸಿಯುತ್ತಿದೆ. ಅಲ್ಲದೆ ಕೆರೆಗಳು ಮತ್ತು ನದಿಗಳ ನೀರಿನ ಗುಣಮಟ್ಟವೂ ಮಾಲಿನ್ಯ ಮತ್ತು ಒತ್ತುವರಿಗಳಿಂದ ಕುಸಿಯುತ್ತಿದೆ. ಆಲ್ಸ್ಟಂ ಸಮಾಜ ಇಂದು ಎದುರಿಸುತ್ತಿರುವ ಜಾಗತಿಕ ತಾಪಮಾನದಿಂದ ತೀವ್ರ ನಗರೀಕರಣದ ಸವಾಲುಗಳನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಉಪಕ್ರಮವು ಆಲ್ಸ್ಟಂನ ಸಕಾರಾತ್ಮಕ ಸಾಮಾಜಿಕ ಮತ್ತು ಪಾರಿಸರಿಕ ಪರಿಣಾಮ, ಪರಿಸರ ಸುಸ್ಥಿರತೆ ಮತ್ತು ಸಮುದಾಯ ಅಭಿವೃದ್ಧಿ ಉತ್ತೇಜಿಸುವಲ್ಲಿ ಬದ್ಧತೆಯನ್ನು ತೋರಿಸಿದೆ.
ಈ ಯೋಜನೆಯ ಯಶಸ್ಸಿನ ಕುರಿತು ಆಲ್ಸ್ಟಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲಾಯ್ಸನ್, “ಆಲ್ಸ್ಟಂನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿರುವ ಸಮುದಾಯಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲು ಬದ್ಧರಾಗಿದ್ದೇವೆ. ಸುಸ್ಥಿರ ರೂಢಿಗಳಿಗೆ ನಮ್ಮ ಬದ್ಧತೆಯು ನಮ್ಮ ಉದ್ಯಮದ ಆಚೆಗೆ ಮತ್ತು ನಾವು ಸೇವೆ ಒದಗಿಸುತ್ತಿರುವ ವಿಸ್ತಾರ ಸಮುದಾಯಗಳಿಗೆ ವಿಸ್ತರಿಸಿದೆ. ಬಿದರೆ ಅಗ್ರಹಾರ ಕೆರೆಯ ಪುನರುಜ್ಜೀವನ ಯೋಜನೆಯು ಈ ಬದ್ಧತೆಗೆ ಸಾಕ್ಷಿಯಾಗಿದೆ. ಸುಧಾರಿತ ನೀರಿನ ಗುಣಮಟ್ಟ ಮತ್ತು ಹಸಿರು ವಿಸ್ತರಣೆಯಿಂದ ಈ ಕೆರೆಯು ಭವಿಷ್ಯದಲ್ಲಿ ಕಿರು ಜೀವ ವೈವಿಧ್ಯತೆಯ ತಾಣವಾಗುವ ಸಂಭವನೀಯತೆ ಇದೆ. ವೇಕ್ ದಿ ಲೇಕ್’ ಉಪಕ್ರಮಕ್ಕೆ ಬೆಂಬಲಿಸುವ ಮೂಲಕ ಆಲ್ಸ್ಟಂ ಸ್ಥಳೀಯ ಸಮುದಾಯದ ಸಬಲೀಕರಣದಲ್ಲಿ ದೀರ್ಘಾವಧಿ ಪರಿಣಾಮ ಉಂಟು ಮಾಡುವ ಗುರಿ ಹೊಂದಿದೆ ಮತ್ತು ಭವಿಷ್ಯದ ತಲೆಮಾರುಗಳಿಗೆ ಸುಸ್ಥಿರ ವಿಶ್ವದ ಸೃಷ್ಟಿಗೆ ಕೊಡುಗೆ ನೀಡುತ್ತಿದೆ.
ಆಲ್ಸ್ಟಂ ಮತ್ತು ಯು.ಡಬ್ಲ್ಯೂ.ಬಿ.ಇ ಕೂಡಾ ಕೆರೆಯ ಪಾರಿಸರಿಕ ಮತ್ತು ಸಾಮಾಜಿಕ ಮೌಲ್ಯ ಹೆಚ್ಚಿಸಲು ಹಲವಾರು ಪರಿಣಾಮಕಾರಿ ಚಟುವಟಿಕೆ ಗಳನ್ನು ಕೈಗೊಂಡಿದೆ. ಇವುಗಳಲ್ಲಿ ನೀರಿನ ಕಳೆ ನಿವಾರಣೆ, ಮಣ್ಣು ಹಾಗೂ ಹೂಳೆತ್ತುವುದು, ಕೆರೆಯ ಏರಿಗೆ ಶಕ್ತಿ, ಒಳಹರಿವಿನ ಮೋರಿ ನಿರ್ಮಾಣ, ತ್ಯಾಜ್ಯ ನೀರಿನ ಸಂಸ್ಕರಣೆ, ಕೆಸರು ಕೊಳಗಳ ಸೃಷ್ಟಿ ಮತ್ತು ಗಡಿ ಕಾಪಾಡಲು ಬೇಲಿ ಹಾಕಲಾಗಿದೆ.
ಜೀವ ವೈವಿಧ್ಯತೆ ಉತ್ತೇಜಿಸಲು ಕೆರೆಯ ಮಧ್ಯಭಾಗದಲ್ಲಿ ಪಕ್ಷಿಗಳಿಗೆಂದು ದ್ವೀಪ ಸೃಷ್ಟಿಸಲಾಗಿದೆ ಮತ್ತು ಸಾಂಪ್ರದಾಯಿಕ, ದಟ್ಟ ಮತ್ತು ಮಿಯಾವಾಕಿ ವಿಧಾನಗಳಿಂದ ಹಲವಾರು ಸ್ಥಳೀಯ ಮರಗಳನ್ನು ಬೆಳೆಸಲಾಗಿದೆ. ಸಮುದಾಯದ ಅನುಕೂಲಗಳಲ್ಲಿ ನಡೆದಾಡುವ ಮಾರ್ಗಗಳು, ಬೆಂಚುಗಳು, ವಯಸ್ಕರ ಓಪನ್-ಏರ್ ಜಿಮ್ ಮತ್ತು ಮಕ್ಕಳಿಗೆ ಆಟದ ಪ್ರದೇಶಗಳನ್ನು ಸೃಷ್ಟಿಸುವ ಮೂಲಕ ಉನ್ನತೀಕರಿಸಿದ ಮನರಂಜನೆಯ ಸ್ಥಳ ಹಾಗೂ ಸಮುದಾಯದ ಹೆಚ್ಚಿನ ತೊಡಗಿಕೊಳ್ಳುವಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಆಲ್ಸ್ಟಂ ಸಕ್ರಿಯವಾಗಿ ಸುಸ್ಥಿರ ಸಾರಿಗೆ ವ್ಯವಸ್ಥೆಗಳತ್ತ ಕಾರ್ಯ ನಿರ್ವಹಿಸುತ್ತಿದ್ದು ಅವು ಒಳಗೊಳ್ಳುವ, ಪರಿಸರ ಸ್ನೇಹಿ, ಸುರಕ್ಷಿತ ಮತ್ತು ದಕ್ಷತೆ ಹೊಂದಿದ್ದು ಸಾಮಾಜಿಕ ಜವಾಬ್ದಾರಿಯ ಉದ್ಯಮ ಮಾದರಿಯನ್ನು ಅನುಷ್ಠಾನಗೊಳಿಸುತ್ತಿದೆ. ಆಲ್ಸ್ಟಂ ಇಂಡಿಯಾ ತನ್ನ ಜಾಗರೂಕತೆಯಿಂದ ಸತತ ವಿಸ್ತಾರ ಶ್ರೇಣಿಯ ಸಮುದಾಯ ನೆರವಿನ ಕಾರ್ಯಕ್ರಮಗಳನ್ನು ದೇಶಾದ್ಯಂತ ಕೈಗೊಂಡಿದೆ. ಈ ಉಪಕ್ರಮಗಳನ್ನು ಇಂತಹ ಉಪಕ್ರಮಗಳನ್ನು ಯಶಸ್ವಿ ಯಾಗಿ ಅನುಷ್ಠಾನಗೊಳಿಸಿದ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಎನ್.ಜಿ.ಒ.ಗಳ ಸಹಯೋಗದಲ್ಲಿ ಕೈಗೊಳ್ಳಲಾಗಿದೆ.
“ಆಲ್ಸ್ಟಂ” ಆಲ್ಸ್ಟಂ ಸಮೂಹದ ರಕ್ಷಿತ ಟ್ರೇಡ್ ಮಾರ್ಕ್