ಶಿರಸಿ: ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಭಯ ಹುಟ್ಟಿಸಿದ್ದ ಮಂಗನಬಾಹು ಸೋಂಕು ಇದೀಗ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದ್ದು ಒಂದೇ ವಾರದಲ್ಲಿ 120 ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಒಂದೇ ಶಾಲೆಯಲ್ಲಿ 125 ಮಕ್ಕಳಿಗೆ ಮಂಗನಬಾಹು ಕಾಡಿದೆ. ಐದೇ ದಿನದಲ್ಲಿ ಮಂಗನಬಾಹು ಸೋಂಕಿಗೆ ಮಕ್ಕಳು ಕಂಗಾಲಾಗಿದ್ದಾರೆ. ಒಂದೆಡೆ ಕೆಮ್ಮು ಜ್ವರದಿಂದ ಬಳಲುತ್ತಾ ಮಲಗಿರುವ ವಿದ್ಯಾರ್ಥಿಗಳು , ಆತಂಕದಲ್ಲಿ ವಸತಿ ನಿಲಯಕ್ಕೆ ಬಂದಿರುವ ಪಾಲಕರು. ಮತ್ತೊಂದೆಡೆ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿರುವ ವೈದ್ಯರ ತಂಡ. ಈ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡು ತಾಲೂಕಿನ ಇಂದಿರಾಗಾಂಧಿ ವಸತಿ ನಿಲಯ ಶಾಲೆಯ ಚಿತ್ರಣ. ಇತ್ತೀಚೆಗೆ ಕೇರಳದಲ್ಲಿ ಮಂಗನಬಾಹು ಸೋಂಕಿನಿಂದ 15 ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ವೃದ್ಧರು ಸೋಂಕಿತರಾಗಿದ್ದರು.
ಇದರ ಬೆನ್ನಲ್ಲೇ ಮಂಗನ ಕಾಯಿಲೆ ರೋಗದಿಂದ ತತ್ತರಿಸಿ ಕಳೆದ ಕೆಲವು ದಿನಗಳಿಂದ ರಿಲೀಫ್ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಈಗ ಮಂಗನಬಾವು ಸೋಂಕು ಕಾಡತೊಡಗಿದೆ. ಒಹುತೇಕ ಮಕ್ಕಳಲ್ಲೇ ಕಂಡುಬರುವ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಬೇಗ ಹರಡುತ್ತಿದೆ. ನವೆಂಬರ್ 16 ಕ್ಕೆ ಐದು ಮಕ್ಕಳಲ್ಲಿ ಜ್ವರ, ಶೀತ ಹಾಗೂ ಗಂಟಲ್ ನೋವು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಆಗ ಮಂಗನಬಾವು ರೋಗ ಇರುವುದು ದೃಢ ಪಟ್ಟಿದೆ.
ರೋಗ ಕಾಣಿಸಿಕೊಂಡ ಮಕ್ಕಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದ್ರೆ ಮಂಗನಬಾವು ವೈರಲ್ ಸೋಂಕು ಆಗಿರುವುದರಿಂದ ಕೇವಲ ಐದು ದಿನದಲ್ಲಿ 120ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನಬಾವು ಕಾಣಿಸಿಕೊಂಡಿದೆ. ಅನೇಕ ಮಕ್ಕಳು ತಿವ್ರವಾದ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು ಕೆಲವರು ವಸತಿ ನಿಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿರಾಗಾಂಧಿ ವಸತಿ ನಿಯದಲ್ಲಿ ಒಟ್ಟು 210 ವಿದ್ಯಾರ್ಥಿಗಳಿದ್ದು , ರೋಗ ವೇಗವಾಗಿ ವ್ಯಾಪಿಸುತ್ತಿರುವುದರಿಂದ ಸದ್ಯಕ್ಕೆ ಪಾಲಕರನ್ನ ಕರೆಸಿ ಮಕ್ಕಳನ್ನು ಮನೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತಿದೆ .ಬೇರೆ ವಿದ್ಯಾರ್ಥಿನಿಲಯದಲ್ಲೂ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ,ಸೋಂಕು ಹೆಚ್ಚಾದ್ದರಿಂದ ಮೂರು ದಿನ ಮುಂಡಗೋಡಿನ ಇಂದಿರಾಗಾಂಧಿ ವಸತಿನಿಲಯದ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
*
ಈಗಾಗಲೇ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಜಿಲ್ಲಾಡಳಿತ. ಮುಂಡಗೊಡ ವಸತಿ ನಿಲಯಕ್ಕೆ ಒಂದು ವೈದ್ಯರ ತಂಡವನ್ನ ನಿಯೋಜಿಸಿದೆ, ಅಲ್ಲದೆ ಕೆಲವು ಪಾಲಕರು ಆತಂಕದಲ್ಲಿರುವ ಹಿನ್ನೆಲೆ ಅವರನ್ನ ಕರೆಸಿ ರೋಗದ ಬಗ್ಗೆ ಮಾಹಿತಿ ಕೊಡಲಾಗುತ್ತಿದೆ, ಈ ರೋಗ ಪ್ರಾಣ ಹಾನಿ ಸಂಭವಿಸುವ ರೋಗ ಅಲ್ಲ, ಹೆದರಿ ಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪಾಲಕರಿಗೆ ಜಿಲ್ಲಾಡಳಿತ ತಿಳಿಹೇಳಿದ್ದು ಆರೋಗ್ಯಯುತ ಮಕ್ಕಳನ್ನು ಕರೆದೊಯ್ಯಲು ಪೋಷಕರಿಗೆ ಸೂಚನೆ ನೀಡಲಾಗಿದೆ.ಇನ್ನು ವೈದ್ಯಾಧುಕಾರಿಗಳು ಸಹ 15 ದಿನದೊಳಗೆ ಈ ರೋಗ ಒಬ್ಬ ವ್ಯಕ್ತಿಯಲ್ಲಿ ಕಾಣಿಸುತ್ತೆ , ಇದಕ್ಕೆ ಯಾವುದೇ ಚುಚ್ಚುಮದ್ದುಗಳಿಲ್ಲ, ಸೋಂಕಿತರನ್ನು ದೂರ ಇಡಬೇಕು
ಲಕ್ಷ್ಮೀಪ್ರಿಯಾ ಡಿಸಿ.
ಇದನ್ನೂ ಓದಿ: #Virus