Wednesday, 11th December 2024

ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣ

ವಾಲ್ಮೀಕಿ ಸಮುದಾಯದವರು ಶೈಕ್ಷಣಿಕ, ರಾಜಕೀಯವಾಗಿ ಪ್ರಬಲರಾಗಿ: ಸಚಿವ ಸತೀಶ ಜಾರಕಿಹೊಳಿ ಕರೆ

ಸುರಪುರ: ವಾಲ್ಮೀಕಿ ಸಮುದಾಯದವರು ರಾಜಕೀಯವಾಗಿ ಮುಂಚೂಣಿಯಲ್ಲಿದ್ದು. ಸಂವಿಧಾನ ಬದ್ಧವಾದ ಹಕ್ಕುಗಳನ್ನು ಪಡೆದುಕೊಳ್ಳಲು ಶಿಕ್ಷಣ ಅಗತ್ಯ ಆದ್ದರಿಂದ ಸಮುದಾಯದ ಯುವಕರು ಶಿಕ್ಷಣವಂತರಾಗುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ಕೊಟ್ಟರು.

ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಉದ್ಘಾಟಿಸಿ. ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಪತದತ್ತ ಸಾಗುತ್ತಿದೆ. ಬಾಬಾಸಾಹೇಬರ ಸಂವಿಧಾನದಡಿಯಲ್ಲಿ ಬರುವ ಸವಲತ್ತುಗಳನ್ನು ಪಡೆದು ಕೊಳ್ಳುವಂತೆ ಸಲಹೆ ನೀಡಿದರು.

ಇನ್ನೂ ಸಿದ್ಧರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರಕಾರ ಪರಿಶಿಷ್ಟ ವರ್ಗಗಳ ಪ್ರತ್ಯೇಕ ಸಚಿವಾ ಲಯವನ್ನು ಸ್ಥಾಪಿಸುವ ಮೂಲಕ, ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ ಮತ್ತು ಎಸ್ಸಿ, ಎಸ್ಟಿ ಸಮುದಾಯದವರಿಗೆ ಜನಸಂಖ್ಯೆಗನುಗುಣವಾಗಿ ಅಭಿವೃದ್ಧಿಗೆ ಹಣ ಬಿಡುಗಡೆ
ಮಾಡುವ ಮೂಲಕ ಪರಿಶಿಷ್ಟರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೆವೆ ಎಂದರು.

ಇನ್ನೂ ಸುರಪುರ ಶೂರತನಕ್ಕೆ ಹೆಸರುವಾಸಿಯಾಗಿದ್ದು. ಸುರಪುರದ ಒಂದು ಲಕ್ಷ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ದೇಶಕ್ಕಾಗಿ
ತಮ್ಮನ್ನು ತಾವೂ ಅರ್ಪಿಸಿದ ಪೂಣ್ಯ ಭೂಮಿ ಇದು. ಸಾಧು, ಸಂತರು ನಡೆದಾಡಿದ ಸುರ’ಪರು ಇದು ಎಂದು ಸುರಪುರದ ಇತಿಹಾಸದ ಬಗ್ಗೆ ಮೆಲುಕು
ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿ ವಾಲ್ಮೀಕಿ ಸಮುದಾಯ ಶೌರ್ಯಕ್ಕೆ ಹೆಸರಾದ ಸಮುಯಾದ. ಯಾವುದೇ
ಸಂಧರ್ಭದಲ್ಲಿಯು ಸಹ ಬೆನ್ನು ತೋರಿಸುವಂತಹ ಸಮುದಾಯವಲ್ಲ. ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ, ವೀರ ಮದಕರಿ ನಾಯಕ ಹೋರಾಟದ ಸ್ವರೂಪ ನಮ್ಮೆಲ್ಲರಿಗೂ ಸ್ಪೂರ್ತಿ. ಕಾಂಗ್ರೆಸ್ ನೇತೃತ್ವದ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ವಾಲ್ಮೀಕಿ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಪ್ರಸನ್ನಾನಂದ ಸ್ವಾಮೀಜಿಗಳು ಮಾತನಾಡಿ ಸುರಪುರದ ಇತಿಹಾಸ ಜಗತ್ತಿಗೆ ಗೊತ್ತಿರುವಂತಹದು. ನಾಡಿನ ರಕ್ಷಣೆ ಮಾಡಿದ ಕೀರ್ತಿ ಸಮುದಾಯಕ್ಕೆ
ಸಲ್ಲುತ್ತದೆ. ಸಮುದಾಯದ ಚುನಾಯಿತ ಪ್ರತಿನಿಧಿಗಳು ಪಕ್ಷಾತೀತವಾಗಿ ಸಮುದಾಯದ ಅಭಿವೃದ್ಧಿಗೆ ಬದ್ಧರಾಗಿರಬೇಕು ಯಾವುದೇ ಸಂಘರ್ಷಕ್ಕೆ ಹೊಳಗಾಗದೆ ಸಂಘಟಿತರಾಗಬೇಕು, ಶಿಕ್ಷಣ ಪಡೆಯಬೇಕು ಎಂದರು.

ಈ ರಾಜ್ಯ ಮುಖ್ಯಮಂತ್ರಿ ಯಾಗಿ ನಾಡನ್ನಾಳುವುದು ಸಮುದಾಯದ ಕನಸಾಗಿದೆ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎಂದು
ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಕಕ್ಕೇರಾ ಪಟ್ಟಣದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ, ವರದಾನೇಶ್ವರ ಸ್ವಾಮಿಜಿ, ಅಡವಿಲಿಂಗ ಮಹಾರಾಜ, ನಂದಣ್ಣಪ್ಪ ಪೂಜಾರಿ,
ಭೀಮಣ್ಣ ಮುತ್ಯಾ ಸಾನಿಧ್ಯ ವಹಿಸಿದ್ದರು. ಶಾಸಕರುಗಳಾದ ಬಸನಗೌಡ ದದ್ಧಲ, ಹಂಪಯ್ಯ ಸಾಹುಕಾರ ಬಾದರ್ಲಿ, ನಾಗರಾಜ ಮಾಜಿ ಸಂಸದ
ಬಿವಿ ನಾಯಕ, ಶ್ರೀದೇವಿ ನಾಯಕ, ಸಿತರಾಮಪ್ಪ ಜಾಹಗಿರದಾರ, ಶಾಂತಗೌಡ ಮಾಲಿ ಪಾಟೀಲ, ಗುಂಡಪ್ಪ ಸೊಲ್ಲಾಪೂರ ಸೇರಿ ಅನೇಕರಿದ್ದರು.

*

ಸಮುದಾಯ ಎಲ್ಲಾ ಕಾಲಘಟ್ಟಗಳಲ್ಲಿಯು ಮುಂಚೂಣಿಯಲ್ಲಿತ್ತು. ರಾಜಾ ಮಹಾರಾಜರಾಗಿ, ಪಾಳೆಗಾರರಾಗಿ, ಜಾಹಗಿರದಾರರಾಗಿ, ಬ್ರಿಟಿಷ್ ವಿರುದ್ಧದ ಹೋರಾಟದಲ್ಲಿ ಹೀಗೆ ಎಲ್ಲಾ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದೇವೆ ಈಗಲೂ ಸಹ ಮುಂದಿದ್ದೇವೆ ಇನ್ನೂ ಮುಂದುವರಿಯಬೇಕಾದರೆ ಶಿಕ್ಷಣ ಪಡೆಯಬೇಕು ಎಂದರು. ಸ್ವಾಮೀಜಿಗಳ ಆದೇಶವನ್ನು ಎಲ್ಲಾ ಚುನಾಯಿತ ಪ್ರತಿನಿಧಿಗಳು ಪಾಲಿಸುವ ಮೂಲಕ ನಾವು ಸಮುದಾಯದ ಅಭಿವೃದ್ಧಿಗೆ
ಬದ್ಧರಾಗಿದ್ದೇವೆಂದರು.

-ಬಿ. ನಾಗೇಂದ್ರ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ

ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿದರೆ ಸಮುದಾಯದ ಪೂಜ್ಯರು ಮೀಸಲಾತಿ ಹೆಚ್ಚಿಸುವಲ್ಲಿ ಅವಿರತ ಹೋರಾಟ ಮಾಡಿ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮುದಾಯಕ್ಕೆ ಮೂರು ಪ್ರಭಲ ಖಾತೆ ಪಡೆದುಕೊಳ್ಳುವ ಮೂಲಕ ರಾಜಕೀಯವಾಗಿ ಸಮುದಾಯದ ಮುಂಚೂಣಿ ಯಲ್ಲಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ನಾವು ಸಮುದಾಯದ ಅಭಿವೃದ್ಧಿಗೆ ಬದ್ಧರಾಗಿದ್ದೇವೆಂದರು.
-ನರಸಿಂಹ ನಾಯಕ ರಾಜುಗೌಡ ಮಾಜಿ ಸಚಿವ

ಸಮುದಾಯದ ಬಹುದಿನಗಳ ಕನಸಾಗಿದ್ದ ಮಹರ್ಷಿಯವರ ಪುತ್ಥಳಿ ಅನಾವರಣ ಕಾರ್ಯ ಅತ್ಯಂತ ಸಂಭ್ರಮದಿಂದ ನಡೆಯಿತು. ಸಮುದಾಯದ
ಅಭಿವೃದ್ಧಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಕಕ್ಕೇರಾ ಪಟ್ಟಣಕ್ಕೆ ಅನೇಕ ಅಭಿವೃದ್ಧಿ ಕೊಡುಗೆಗಳನ್ನು ನೀಡಿರುವ ಮುಂದಿನ ದಿನಗಳಲ್ಲಿ ಕಕ್ಕೇರಾ ಪಟ್ಟಣದಲ್ಲಿ ಮೂರಾರ್ಜಿ ವಸತಿ ಕಾಲೇಜು ಮತ್ತು ವಾಲ್ಮೀಕಿ ಭವನ ನೀರ್ಮಾಣ ಕಾರ್ಯ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
-ರಾಜಾ ವೆಂಕಟಪ್ಪ ನಾಯಕ ಶಾಸಕ

*

ಬದ್ದ ಎದುರಾಳಿಗಳಾಗಿರುವ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಮಾಜಿ ಶಾಸಕ ರಾಜೂಗೌಡ ಅವರು ಭಾನುವಾರ ಕಕ್ಕೇರಾ ದಲ್ಲಿ ನಡೆದ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದು, ವಿಶೇಷವಾಗಿ ಕಂಡುಬಂದಿತ್ತು.

ಸುರಪುರ ವಿಧಾನಸಭಾ ಕ್ಷೇತ್ರವು ಐತಿಹಾಸಿಕವಾಗಿ ಸದ್ದು ಮಾಡಿದಷ್ಟು ರಾಜಕೀಯವಾಗಿಯೂ ಅಷ್ಟೇ ಸದ್ದು ಮಾಡಿದ್ದು ಇಲ್ಲಿನ ಜನಪ್ರತಿನಿಧಿಗಳು ಬದ್ಧ ವೈರಿಗಳಂತೆ ಚುನಾವಣೆ ಎದುರಿಸಿತ್ತದ್ದರು. ಆದರೆ ಕಕ್ಕೇರಾದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ನರಸಿಂಹ ನಾಯಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ನಾವು ಸಮುದಾಯದ ಅಭಿವೃದ್ಧಿಗೆ ಬದ್ಧ ಎನ್ನುವ ಸಂದೇಶ ರವಾನಿಸಿದ್ದಾರೆ.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ರಾಜೂಗೌಡ ಅವರ ಹೆಸರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದ ಸಮುದಾಯದವರು ಶಿಳ್ಳೆ, ಕೇಕೆ ಹಾಕುವ ಮೂಲಕ ಹರ್ಷ ವ್ಯಕ್ತಪಡಿಸಿದರು.