Sunday, 1st December 2024

Maharshi Valmiki: ಶ್ರೀಮಹರ್ಷಿ ವಾಲ್ಮೀಕಿ ಅವರ ಬದುಕು ಬರಹ ಸಮಾಜಕ್ಕೆ ಪ್ರೇರಣೆಯಾಗಬೇಕು : ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್

ಚಿಕ್ಕಬಳ್ಳಾಪುರ : ಮಹರ್ಷಿ ವಾಲ್ಮೀಕಿ ಬದುಕು ಬರಹ ಸಮುದಾಯ ಮತ್ತು ಸಮಾಜಕ್ಕೆ ಪ್ರೇರಣೆ ಆಗಬೇಕಿದೆ.ಬೇಡ ವೃತ್ತಿಯನ್ನು ತೊರೆದು ಬದಲಾವಣೆ ಆಗಿ ಮಹರ್ಷಿ ಆದಂತೆ ಸಮುದಾಯದ ಜನತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾಗಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕರೆ ನೀಡಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಭಾರತ ಮತ್ತು ಶ್ರೀಲಂಕಾ  ನಡುವೆ ಸಂಪರ್ಕ ಕಲ್ಪಿಸಲು ರಾಮಸೇತುವನ್ನು ಶ್ರೀರಾಮಸೇನೆ ನಿರ್ಮಿಸಿದ್ದು ಸತ್ಯ ಎಂಬುದು ಈಗ ಗೊತ್ತಾಗಿದೆ. ಹೀಗಾಗಿ ವಾಲ್ಮೀಕಿ ಬರೆದ ರಾಮಾಯಣ ಸತ್ಯಕತೆಯಾಗಿದೆ.ಇದನ್ನು ಅಧ್ಯಯನ ಮಾಡುವ  ಮೂಲಕ ಹಿರಿಯರನ್ನು ಗೌರವಿಸುವ ಗುಣವನ್ನು ಮಕ್ಕಳಿಗೆ ಕಲಿಸಬೇಕು. ತಂದೆ ಮಕ್ಕಳ ಸಂಬ0ಧ, ಸಹೋದರ ವಾತ್ಸಲ್ಯ,ಸತಿ ಪತಿ ಧರ್ಮ,ತಾಯಿಮಕ್ಕಳ ಸಂಬAಧ,ಉತ್ತಮ ರಾಜನೀತಿ ಹೀಗೆ ಸನ್ನಡತೆಯ ಬಹುದೊಡ್ಡ ಮಾರ್ಗವೇ ರಾಮಾಯಣದಲ್ಲಿದ್ದು ಇದನ್ನು ಮಹಾಕವಿ ವಾಲ್ಮೀಕಿ ಕೊಟ್ಟಿದ್ದಾರೆ.ಇದು ನಮ್ಮ ನಿಮ್ಮೆಲ್ಲರ ಬದುಕಿನ ಭಾಗವಾಗಬೇಕಿದೆ ಎಂದರು.

ವಾಲ್ಮೀಕಿ ಸಮುದಾಯ ಜಾಗೃತ ಸಮುದಾಯವಾಗಿದೆ.ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸುರಪುರ ದೊರೆಗಳು, ಚಿತ್ರದುರ್ಗ ನಾಯಕರ ಕೊಡುಗೆ ಸದಾ ಸ್ಮರಣೀಯರಾಗಿದ್ದಾರೆ. ಇದನ್ನು ನೆನೆದು ನಾವ್ಯಾರೂ ಕೀಳಲ್ಲ ಎಂಬುದನ್ನು ಬೆಳೆಸಿಕೊಳ್ಳಬೇಕು.ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಭವನಕ್ಕೆ ನೀಡಿರುವ ೩೦ ಕುಂಟೆ ಜಾಗ ಗೊಂದಲದಲ್ಲಿದೆ. ಇದು ಕೊರ್ಟಿನಲ್ಲಿದೆ.ಇದರ ಪರಿಹಾರಕ್ಕೆ ಜಿಲ್ಲಾಡಳಿತ ನಿರಂತರ ಪ್ರಯತ್ನ ಮಾಡುತ್ತಿದೆ.ವಿಳಂಭವಾದಲ್ಲಿ ಸಮುದಾಯದ ಮುಖಂಡರ ಜತೆ ಮಾತನಾಡಿ ಪರ್ಯಾಯ ಜಾಗದ ಬಗ್ಗೆ ಚಿಂತಿಸಲಾಗುವುದು.೨ತಿAಗಳ ಒಳಗೆ ಕನ್ನಡ ಭವನ ಲೋಕಾರ್ಪಣೆ ಆಗಲಿದ್ದು ಮುಂದಿನ ವರ್ಷದ ಕಾರ್ಯಕ್ರಮ ಕನ್ನಡ ಭವನದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ನಮ್ಮೆಲ್ಲರಿಗೂ ಆದರ್ಶ, ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಸ್ಥಾನಮಾನಗಳೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು.ಕಷ್ಟ ಪಟ್ಟು ಚೆನ್ನಾಗಿ ಓದಿ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು. ವಾಲ್ಮೀಕಿ ಭವನದ ನಿರ್ಮಾಣ ನನ್ನ ಜವಾಬ್ದಾರಿ. ವಾಲ್ಮೀಕಿ ಭವನಕ್ಕೆ ೪ ಕೋಟಿ ಅನುದಾನವನ್ನು ಸರ್ಕಾರದಿಂದ ತಂದು ಭವನವನ್ನು ನಿರ್ಮಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು.

ಉಪನ್ಯಾಸಕ ಚಂದ್ರಶೇಖರ ಮಾತನಾಡಿ ರಾಮಾಯಣ ಕೃತಿಯ ಮೂಲಕ ವಿಶ್ವ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು ಮಹರ್ಷಿ ವಾಲ್ಮೀಕಿ ಆಗಿದ್ದಾರೆ.ರಾಮಾಯಣ ಮಹಾಕಾವ್ಯ ಸಂಸ್ಕೃತದ ಆದಿ ಕಾವ್ಯವಾಗಿದ್ದು ಇದರ ನಂತರದಲ್ಲಿ ಸರಿಸುಮಾರು ೩ ಸಾವಿರ ರಾಮಾಯಣಗಳು ರಚನೆ ಆಗಿವೆ.ತಳಸಮುದಾಯದ ಮೊದಲ ಸಾಕ್ಷರ ವ್ಯಕ್ತಿ ವಾಲ್ಮೀಕಿ.ವಾಲ್ಮೀಕಿ ಹುಟ್ಟಲಿಲ್ಲ ಎಂದಿದ್ದರೆ ನಾಯಕ ಸಮುದಾಯ ಬೇಡವಾದ ಸಮುದಾಯ ಆಗುತ್ತಿತ್ತು.ವಾಲ್ಮೀಕಿ ರಾಮಾಯಣದ ಮೂಲಕ ಬೇಕಾದ ಸಮುದಾಯವಾಗಿದೆ ಎಂದರು.

ಉತ್ತರ ಭಾರತದಲ್ಲಿ ನಾಯಕ ಸಮುದಾಯ ಜಾಗೃತಗೊಂಡ ಎಚ್ಚೆತ್ತ ಸಮುದಾಯವಾಗಿದೆ. ವಾಲ್ಮೀಕಿ ಬೇಡ ನಾಗಿದ್ದ, ದರೋಡೆಕೋರ ಎಂದರೆ ಎಂದರೆ ಅಂತಹ ಹೇಳಿಕೆ ನೀಡುವವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಾರೆ. ತಪ್ಪು ಹೇಳಿಕೆಗೆ ಪುರಾವೆ ಕೇಳುತ್ತಾರೆ.ವಾಲ್ಮೀಕಿ ದೊಡ್ಡ ಕವಿ ಎಂಬುದನ್ನು ಸಹಿಸದ ಪುರೋಹಿತ ಶಾಹಿಗಳ ಹುನ್ನಾರವೇ ಇಂತಹ ಕಟ್ಟುಕತೆಗಳಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸರಕಾರದಿಂದ ಬರುವ ನಾನಾ ಕಾರ್ಯಕ್ರಮಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು.ಸಮುದಾಯದ ಸಾಧಕರನ್ನು ಗೌರವಿಸಿ ಸತ್ಕರಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಾಪಸಂದ್ರದ ರಂಗನಾಥಸ್ವಾಮಿ ದೇವಾಲಯದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮತ್ತು ವಿವಿಧ ಇಲಾಖೆಗಳ ಸ್ಥಬ್ದಚಿತ್ರಗಳ ಮೆರವಣಿಗೆ ನಡೆಸಲಾಯಿತು.ತಮಟೆ ದೊಳ್ಳುಕುಣಿತದಂತಹ ಜಾನಪದ ಕಲಾತಂಡಗಳ ಲಯಬದ್ಧ ಕುಣಿತಕ್ಕೆ ಶಾಲಾಕಾಲೇಜು ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೇಶವರೆಡ್ಡಿ,ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ,ಎಸ್ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್ಪಿ ಐ.ಆರ್.ಖಾಸಿಂ,ಹೆಚ್ಚುವರಿ ಜಿಲ್ಲಾಧಿಕಾರಿ ಭಾಸ್ಕರ್, ಜಿಲ್ಲಾ ಉಪವಿಭಾಗಾಧಿಕಾರಿ ಅಶ್ವಿನ್,ನಗರಸಭಾ ಸದಸ್ಯ ಮಟಮಪ್ಪ, ತಹಶೀಲ್ದಾರ್ ಅನಿಲ್, ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ ಮತ್ತಿತರರು ಇದ್ದರು.