Wednesday, 11th December 2024

Tumkur News: ವಾಲ್ಮೀಕಿ ರಾಮಾಯಣ ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಗ್ರಂಥ

ಗುಬ್ಬಿ: ಕೃತಿ ಮತ್ತು ಕಾವ್ಯಗಳ ಮೂಲಕ ಜೀವನದ ಮೌಲ್ಯಗಳನ್ನು ಅರಿಯಲು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಜಗತ್ತಿನ ಶ್ರೇಷ್ಠ ಗ್ರಂಥ ವಾಲ್ಮೀಕಿ ರಾಮಾಯಣ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.

 ಪಟ್ಟಣದ ಡಾ. ಬಾಬು ಜಗಜೀವನರಾವ್ ಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು ಅವರ ಆದರ್ಶಗಳನ್ನು ಬಳಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣವಾಗಬೇಕು ಎಂದರು.

 ಉಪನ್ಯಾಸಕ ಲೋಕೇಶ್ ಮಾತನಾಡಿ ಈ ಜಗತ್ತಿನಲ್ಲಿ ಯಾವುದು ಧರ್ಮ ಯಾವುದು ಅಧರ್ಮ ಎಂಬುದನ್ನು ತಿಳಿಸುವ ಉದ್ದೇಶದಿಂದ ರಾಮಾಯಣ ರಚನೆ ಮಾಡಿದ್ದಾರೆ. ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿಗಳು ಆಧುನಿಕ ಜಗತ್ತಿಗೆ ಕಡಿಮೆ ಇಲ್ಲದಂತೆ ನದಿ, ಸರೋವರ, ಪ್ರಕೃತಿ ಸೌಂದರ್ಯವನ್ನು ಸವೆಯಬಹುದು. ಭಕ್ತಿ ಭಾವ ಸಂಬಂಧ ಗಳ ಬೆಸುಗೆಯನ್ನು ಕಾಣಬಹುದು. ಮೌಲ್ಯಯುತ ಸಾಹಿತ್ಯದ ಸೃಷ್ಟಿಗೆ ಪ್ರೇರಣೆಯಾಗಿದೆ ಅನೇಕ ಕಥೆ ಕಾದಂಬರಿ ಗಳು ರಚನೆಯಾಗಿವೆ ಎಂದು ತಿಳಿಸಿದರು.

 ತಾಲೂಕು ಪಂಚಾಯಿತಿ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಅಧಿಕಾರಿ ವೀಣಾ, ವೈದ್ಯಾಧಿಕಾರಿ ಬಿಂದು ಮಾಧವ್,  ಪ ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಪ ಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೇ ಮಮತಾ, ಸದಸ್ಯರಾದ ಜಿಎನ್ ಅಣ್ಣಪ್ಪ ಸ್ವಾಮಿ, ಶಿವಕುಮಾರ್, ಮಹಮ್ಮದ್ ಸಾಧಿಕ್, ಶಶಿಕುಮಾರ್, ವಾಲ್ಮೀಕಿ ನಾಯಕ ಸಮಾಜದ ಗೌರವಾಧ್ಯಕ್ಷ ನರಸಿಂಹಮೂರ್ತಿ, ಅಧ್ಯಕ್ಷ ಅಡವೀಶಯ್ಯ,ಕಾರ್ಯದರ್ಶಿ ರಾಮಚಂದ್ರಪ್ಪ, ಸಣ್ಣ ರಂಗಯ್ಯ, ಸೌಭಾಗ್ಯಮ್ಮ, ಚೇಳೂರು ಶಿವನಂಜಪ್ಪ, ಮುಂತಾದವರಿದ್ದರು.

ಇದನ್ನೂ ಓದಿ: Tumkur News: ಸಾಂಕೇತಿಕವಾಗಿ ವಾಲ್ಮೀಕಿ ಜಯಂತಿ