Friday, 13th December 2024

Application invited: ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ 

ತುಮಕೂರು: ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ಜಿಲ್ಲೆಯ ಪ್ರತಿಭಾವಂತ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ ೯೫ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ ೯೦ರಷ್ಟು ಅಂಕ ಪಡೆದಿರುವ ಜಿಲ್ಲೆಯ ವೀರಶೈವ ಲಿಂಗಾಯತ ವಿದ್ಯಾರ್ಥಿಗಳು ತಮ್ಮ ಸ್ವ ಬರಹದ ಅರ್ಜಿಯನ್ನು  ಸೆ. ೧೨ರೊಳಗೆ ಸಲ್ಲಿಸಬೇಕು. ಅರ್ಜಿ ಜತೆಗೆ ಅಂಕಪಟ್ಟಿ, ವರ್ಗಾವಣೆ ಪತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಲಗತ್ತಿಸಬೇಕು ಎಂದು ಸಮಿತಿಯ ಎಚ್.ಎಂ.ರವೀಶ್ ತಿಳಿಸಿದ್ದಾರೆ.
ಅರ್ಜಿಗಳನ್ನು ಎಸ್‌ಐಟಿ ಆವರಣದ ಗಣಪತಿ ದೇವಸ್ಥಾನದ ಅರ್ಚಕ ನವೀನ್‌ಕುಮಾರ್ ಅವರಿಗೆ ಖುದ್ದು ತಲುಪಿಸಬಹುದು. ಮಾಹಿತಿಗಾಗಿ ನವೀನ್‌ಕುಮಾರ್-೯೮೪೪೧೮೭೮೯೩, ಕೆ.ಎಸ್.ದರ್ಶನ್‌ಕುಮಾರ್-೯೯೮೬೯೭೭೭೦೧, ರವೀಶ್ ಹೆಚ್.ಎಂ.೭೯೯೬೯೪೨೬೯೭ ಸಂಪರ್ಕಿಸಿ.