Saturday, 14th December 2024

ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ

ತುಮಕೂರು: ನಗರದ ಎಪಿಎಂಸಿ ಯಾರ್ಡ್ ಎದುರಿನ ಮಹಾಲಕ್ಷ್ಮಿ ಬಡಾವಣೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೋವಿಂದ ರಾಜಸ್ವಾಮಿ ಹಾಗೂ ಆಳ್ವಾರ ಆಚಾರ್ಯರ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಇದರ ಅಂಗವಾಗಿ ಈ ತಿಂಗಳ 4ರಿಂದ ನಾಲ್ಕು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ತಿರುಮಲ ತಿರುಪತಿ ವೇದಪಾಠ ಶಾಲೆಯ ಪಾಂಚತ್ರಾಗಮ ಪ್ರಧಾನ ಗುರುಗಳಾದ ಎಲ್. ವೆಂಕಟೇಶನ್ ಹಾಗೂ ಜಿ.ಎ.ವಿ.ದೀಕ್ಷಿತರ ನೇತೃತ್ವದಲ್ಲಿ 11 ವೇದ ಪಂಡಿತರುಗಳಿಂದ ಈ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
ಈ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಕುಮಾರ್, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಮುಖಂಡ ಪ್ರಮೋದ್ ರೆಡ್ಡಿ ಸೇರಿದಂತೆ ಹಲವು ಮುಖಂಡರು, ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡು ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ಇದೇ ಬುಧವಾರ ಬೆಳಿಗ್ಗೆ 7.30ಕ್ಕೆ ಬಿಂಬಸ್ಥಾಪನಾ, ಅಷ್ಟಬಂಧನ ಸಮರ್ಪಣೆ, ಚತುಸ್ಥಾನಾರ್ಚನ, ನಿವೇದನ, ನಿರಾಜನ ಶಾತ್ತುಮೋರೈ ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇರುತ್ತದೆ. ಸಂಜೆ ಮಹಾ ಶಾಂತಿ ಹೋಮಗಳು, ಸ್ನಪನತಿರುಮಂಜನ, ಚತುಸ್ಥಾನರ್ಚನ, ಷೋಡ ಸನ್ಯಾಸ ಹೋಮಗಳು, ನಿವೇದನ, ನಿರಾಜನ, ಶಾತ್ತುಮೋರೈ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
ಗುರುವಾರ 7ರಂದು ಬೆಳಿಗ್ಗೆ ಚತುಸ್ಥಾನಾರ್ಚನ, ಮಹಾ ಪೂಣಾಹುತಿ, ಬಲಿ ಹರಣ, ಕುಭೋದ್ವಾಸನ, ಮಹಾಕುಂಭ ಸಂಪ್ರೋಕ್ಷಣ, ನೇತ್ರೋನ್ಮಿಲನ, ಮಹಾಪ್ರಾಣ ಪ್ರತಿಷ್ಠಾಪನೆ, ಪ್ರಥಮಾರಾಧನೆ, ವಿಶೇಷ ಅಲಂಕಾರ, ಮಹಾ ದರ್ಶನ ನಿವೇದನ, ನಿರಾಜನ, ಶಾತ್ತುಮೋರೈ ಏರ್ಪಡಿಸಲಾಗಿದೆ.