ತುಮಕೂರು: ನಗರದ ಅಮರಜೋತಿ ನಗರದಲ್ಲಿರುವ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘದ ಕಚೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ವಿಶ್ವಕರ್ಮರು ಇಡೀ ಮನುಕುಲದ ಕೌಶಲ್ಯಕ್ಕೆ ಮೂಲರಾದವರು. ವಿಶ್ವಕರ್ಮ ಸಮು ದಾಯ ಮಾಡುತ್ತಿರುವ ಐದು ಪ್ರಮುಖ ಕುಲಕಸುಬುಗಳನ್ನು ಹೊರತು ಪಡಿಸಿ, ಯಾವುದೇ ಕೌಶಲ್ಯವಿಲ್ಲ. ನಮ್ಮ ಪರಂಪರೆ, ಸಂಸ್ಕೃತಿಗೆ ವಿಶ್ವಕರ್ಮರ ಕೊಡುಗೆ ಅಪಾರ ವಾಗಿದ್ದು,ಸರಕಾರ ರಾಜ್ಯದಲ್ಲಿ ಕರಕುಶಲ ಕೌಶಲ್ಯ ವಿವಿ ತೆರೆದು, ಅದಕ್ಕೆ ವಿಶ್ವಕರ್ಮರ ಹೆಸರಿಡಬೇಕೆಂದರು.
ವಿಶ್ವಕರ್ಮ ಸಾಹಿತ್ಯ ಪರಿಷತ್ತಿನ ಡಾ.ಕೆ.ವಿ.ಕೃಷ್ಣಮೂರ್ತಿ ಮಾತನಾಡಿ,ವಿಶ್ವಕರ್ಮ ಎಂಬುದರಲ್ಲಿ ವಿಶ್ವಧರ್ಮ ಅಡಗಿದೆ. ಇತಿಹಾಸದ ಪುಟದಲ್ಲಿ ದಾಖಲಾಗಿರುವ ಅತೀವ ಕುಸರಿ ಕೆಲಸಗಳನ್ನು ಒಳಗೊಂಡ ದೇವಾಲಯಗಳನ್ನು ನಿರ್ಮಿಸಿದ್ದು ವಿಶ್ವಕರ್ಮರು. ಇಂತಹ ವಿಶ್ವಕರ್ಮರನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಧಗಳಲ್ಲಿಯೂ ಕಡೆಗಣಿಸ ಲಾಗುತ್ತಿದೆ. ಸಾಮಾಜಿಕ ನ್ಯಾಯವೆಂಬುದು ಮರೀಚಿಕೆಯಾಗಿದೆ. ಈಗಲೆ ಯುವಜನಾಂಗ, ಅದರಲ್ಲಿಯೂ ಹಿಂದುಳಿದ ವರ್ಗಕ್ಕೆ ಸೇರಿದ ಯುವ ಜನಾಂಗ ಎಚ್ಚೆತ್ತುಕೊಂಡು, ತಮ್ಮ ಪಾಲಿಗಾಗಿ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಜಯಕುಮಾರ್ ಮಾತನಾಡಿ, ಎಲ್ಲಾ ಓಬಿಸಿ ಸಮುದಾಯದವರು ಸೇರಿ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಮುನ್ನುಗುತ್ತಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ.ಅಕ್ಟೋಬರ್ 07 ರಂದು ನಮ್ಮ ಸಂಘದಿAದ ಮಹರ್ಷಿ ನಾರಾಯಣಗುರುಗಳ ಜಯಂತಿ ಆಚರಿಸುತಿದ್ದು ಎಲ್ಲಾ ಸಮುದಾಯದ ಮುಖಂಡರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ,ರಾಜ್ಯದಲ್ಲಿ ಓಬಿಸಿ ಮತ್ತು ಎಂಬಿಸಿಗಳು ಒಗ್ಗೂಡದಿದ್ದರೆ ಉಳಿಗಾಲವಿಲ್ಲ.ಕೇವಲ ರಾಜಕೀಯ ವಿಚಾರಗಳಿಗೆ ಒಂದು ಗೂಡದೆ ಎಲ್ಲಾ ವಿಚಾರಗಳಲ್ಲಿಯೂ ಒಗ್ಗೂಡಿ ಕೆಲಸ ಮಾಡುವ ಮೂಲಕ ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಲ್ಲಸಂದ್ರ ಶಿವಣ್ಣ, ಹಿಂದುಳಿದ ವರ್ಗಗಳ ಮುಖಂಡರಾದ ಮಂಜೇಶ್,ಪಿ.ಎನ್.ಮೂರ್ತಿ, ತೇಜು ರಾಜಣ್ಣ, ಕೆಂಪರಾಜು,ಎಚ್.ಎಂ.ಕುಮಾರ್,ಕುಣಿಹಳ್ ಳಿ ಮಂಜನಾಥ್,ಕೆಪಿಸಿಸಿ ಓಬಿಸಿ ಘಟಕದ ರೇಣುಕಯ್ಯ, ರಾಜೇಶ್ ದೊಡ್ಡಮನೆ, ಚಂದ್ರಕಲಾ ಹನುಮಂತರಾಜು, ನಾಗರಾಜು.,ಹೆಬ್ಬೂರು ಶ್ರೀನಿವಾಸಮೂರ್ತಿ,ನಾರಾಯಣ್, ಸತೀಶ್, ಹೊಸ ಕೋಟೆ ನಟರಾಜು,ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎಂ.ಕೆ.ವೆಂಕಟಸ್ವಾಮಿ,ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಯ್ಯ ಮತ್ತು ಪತ್ರಕರ್ತ ಹರೀಶ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.