Friday, 13th December 2024

ಕಾಂಗ್ರೆಸ್ ಪಕ್ಷದಿಂದ ಮತಪಟ್ಟಿ ಜಾಗೃತಿ ಅಭಿಯಾನ

ತುಮಕೂರು: ರಾಜ್ಯದಲ್ಲಿ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಗೆ ಸಿದ್ದಗೊಳುತ್ತಿರುವ ಮತಪಟ್ಟಿಯಲ್ಲಿ ಸಾಕಷ್ಟು ಅವ್ಯವಹಾರಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದವತಿಯಿಂದ ಮತಪಟ್ಟಿ ಜಾಗೃತಿ ಅಭಿಯಾನ ಆರಂಭಿಸಿದ್ದು,ಯಾರೊಬ್ಬರು ತಮ್ಮ ಹಕ್ಕಿನಿಂದ ವಂಚಿತರಾಗ ಬಾರದು ಎಂಬುದು ಇದರ ಹಿಂದಿನ ಉದ್ದೇಶ ಎಂದು ಆತೀಕ್ ಅಹಮದ್ ತಿಳಿಸಿದ್ದಾರೆ.
ನಗರದ ಮರಳೂರು ದಿಣ್ಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವ ತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಶೀಲನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಬಿಜೆಪಿಯ ಅಭಿವೃದ್ದಿ ಶೂನ್ಯ ಅಡಳಿತವನ್ನು ಪ್ರಶ್ನಿಸುವ ಮತ್ತು ಬಿಜೆಪಿಯೇತರ ಪಕ್ಷಗಳಿಗೆ ಮತ ಹಾಕುವ ವ್ಯಕ್ತಿಗಳನ್ನು ಗುರುತಿಸಿ, ಅವರ ಹಕ್ಕುಗಳನ್ನು ಕಸಿಯುವ ಕೆಲಸ ವನ್ನು ಆಡಳಿತ ಬಿಜೆಪಿ ಪಕ್ಷ ಮಾಡಲು ಹೊರಟಿದೆ.ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ.
ಶೀಘ್ರದಲ್ಲಿಯೇ ಅಲ್ಪಸಂಖ್ಯಾತರ ಇರುವ ಜಾಗಗಳಲ್ಲಿ ನಮ್ಮ ಘಟಕದವತಿಯಿಂದ ಕ್ಯಾಂಪ್ ಮಾಡಿ,ಪ್ರತಿಯೊಬ್ಬ ಮತದಾರ ರನ್ನು ಪರೀಕ್ಷಿಸಿ, ಅವರ ಹಕ್ಕುಗಳನ್ನು ಖಾತರಿ ಪಡಿಸುವ ಕೆಲಸ ಮಾಡಲಾಗುವುದು ಎಂದರು.
ಮತದಾನ ಈ ದೇಶದ ಸಂವಿಧಾನದ ಹಕ್ಕು.ಆ ಹಕ್ಕನ್ನು ಕಸಿಯುವ ದೊಡ್ಡ ಹುನ್ನಾರವನ್ನು ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿದೆ ಇನ್ನೂ ರಾಜ್ಯವನ್ನು ಮುನ್ನಡೆಸಬೇಕಾಗಿರುವ ಸರಕಾರ ಮತದಾನದ ಹಕ್ಕನ್ನು ಕಸಿಯುವ ಕೆಲಸಮಾಡುತ್ತಿದೆ.ಆ ಮೂಲಕ 40 ಕಮಿಷನ್ ಹಗರಣ ಆಚೆ ಬರುತ್ತದೆ ಎಂದು ಹೆದರಿ,ಈ ರೀತಿಯಾಗಿ ಮತದಾನದ ಹಕ್ಕನ್ನು ಕಸಿಯಲು ಹೊರಟಿ ದ್ದಾರೆ. ಹಾಗಾಗಿ ಮತದಾರರು ಜಾಗೃತರಾಗಿ ಎಂದು ಸಲಹೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ ಮಾತನಾಡಿ,ಅಂಬೇಡ್ಕರ್ ಕೊಟ್ಟ ಹಕ್ಕು ಕಸಿಯಲು ಬಿಜೆಪಿ ಪಕ್ಷ ಮುಂದಾಗಿದೆ. ತುಮಕೂರು ನಗರದಲ್ಲಿ 15 ಸಾವಿರದಿಂದದಿAದ 35 ಸಾವಿರಕ್ಕೂ ಹೆಚ್ಚು ದಲಿತರು, ಅಲ್ಪಸಂಖ್ಯಾತರು, ಕ್ರೈಸ್ತರು ಹಾಗೂ ಕೆಳವರ್ಗದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.
ಇನ್ನು ಚುನಾವಣಾ ಸಮೀಪಿಸುತ್ತಿದ್ದಂತೆ ಕೆಲ ಮತದಾರರನ್ನು ಕೈ ಬಿಡುವ ಕೆಲಸಕ್ಕೆ ಬಿಜೆಪಿ ಸರಕಾರ ಮುಂದಾಗಿದ್ದು, ಕೂಡಲೇ ಮತದಾರರು ಜಾಗೃತರಾಗಿ ಇಂತಹ ತಪ್ಪು ಗಳನ್ನು ಪ್ರಶ್ನೆ ಮಾಡುವಂತೆ ಆಗಬೇಕು.ಆ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇದೆ ಎಂದು ಖಾತ್ರಿಪಡಿಸಿ ಕೊಂಡು ಮತ ಚಲಾವಣೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮರಳೂರು ವಾರ್ಡಗಳು ವಿವಿಧ ಭಾಗಗಳಲ್ಲಿ ಸಂಚರಿಸಿ ಮತದಾರರನ್ನು ಜಾಗೃತಿಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶಿವಾಜಿ,ಅಬ್ದುಲ್ ವಾಹಿದ್ ಆನ್ಸರ್,ಥಾಮಸ್, ಕಾಂಗ್ರೆಸ್ ಮುಖಂಡ ರಹೀಮ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.