Saturday, 14th December 2024

ಗ್ರಾಮದ ನೈರ್ಮಲ್ಯ, ಕುಡಿಯುವ ನೀರಿನ ನಿರ್ವಹಣೆ ನನ್ನ ಮೊದಲ ಆದ್ಯತೆ : ಗೋವಿಂದರಾಜು

ಚಿಕ್ಕನಾಯಕನಹಳ್ಳಿ: ಗ್ರಾಮಗಳಲ್ಲಿ ನೈರ್ಮಲ್ಯ ಹಾಗು ಕುಡಿಯುವ ನೀರಿನ ನಿರ್ವಹಣೆ ಮಾಡಲು ಮೊದಲು ಆದ್ಯತೆ ನೀಡುವೆ ಎಂದು ಮಲ್ಲಿಗೆರೆ ಗ್ರಾಂ.ಪA ನೂತನ ಅಧ್ಯಕ್ಷ ಹೆಚ್.ಎನ್.ಗೋವಿಂದರಾಜು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಬೇಟಿ ಮಾಡಿ ನಂತರ ಮಲ್ಲಿಗೆರೆ ಗ್ರಾಂ.ಪA. ಸದಸ್ಯಗಳಿAದ ಹಾಗು ಪಕ್ಷದ ಮುಖಂಡರು ಗಳಿ0ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಲ್ಲಿಗೆರೆ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಭಾರತೀಯ ಜನತಾಪಾರ್ಟಿ ಆಯ್ಕೆಮಾಡಿದೆ. ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯ ಕೆಲಸವು ನಮ್ಮ ಪಂಚಾಯ್ತಿಯಲ್ಲಿ ನಡೆಯುತ್ತಿದೆ.ದೇಶದಲ್ಲಿ ಅನೈರ್ಮಲ್ಯವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ್ ಅಭಿಯಾನವನ್ನು ಜಾರಿಗೆ ತಂದಿದ್ದಾರೆ.ಶುದ್ಧ ಕುಡಿಯುವ ನೀರು ಹಾಗು ಪರಿಸರ ಸಂರಕ್ಷಣೆ ಜನರಿಗೆ ಅತ್ಯವಶ್ಯಕವಾಗಿದೆ ಈವಿಚಾರದಲ್ಲಿ ಹೆಚ್ಚು ಕೆಲಸ ಮಾಡಬೇಂಕೆAದು ಕಂಕಣ ತೊಟ್ಟಿದ್ದೇನೆ ಎಂದರು.

ರಾಜ್ಯದಲ್ಲಿ ಬೇರೆ ವಿಧಾನ ಕ್ಷೇತ್ರಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಅಪಾರ ಜನ ಪರ ಕೆಲಸಗಳನ್ನು ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ತಮ್ಮ ಇಚ್ಛಾ ಶಕ್ತಿಯಿಂದ ನೆರವೇರಿಸುತ್ತಿದ್ದಾರೆ.ಜೆ.ಸಿ.ಎಂರವರ ಮಾರ್ಗದರ್ಶನದಲ್ಲಿ ಪಂಚಾಯ್ತಿಯ ಅಭಿವೃದ್ದಿ ಕೆಲಸಕ್ಕೆ ಮುಂದಾಗುವೆ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಕೇಶವ ಮೂರ್ತಿ ಮಾತನಾಡಿ ಗ್ರಾಮಗಳ ಅಭಿವೃದ್ದಿಗೆ ಪಂಚಾಯ್ತಿಯ ಸದಸ್ಯರುಗಳ ವಿಶ್ವಾಸವನ್ನು ಗಳಿಸಿ ಪ್ರಮಾಣಿಕ ವಾಗಿ ಜನರ ಕೆಲಸಗಳನ್ನು ಮಾಡುವುದು ಅಧ್ಯಕ್ಷರ ಮೇಲಿನ ಜವಾಬ್ದಾರಿಯಾಗಿರುತ್ತದೆ ಎಂದರು. ತಾಲ್ಲೂಕು ಬಗರ್ ಹುಕುಂ ಕಮಿಟಿಯ ಸದಸ್ಯರಾದ ನಿರಂಜನ್ ಮೂರ್ತಿ ಮಾತನಾಡಿ ಗ್ರಾಮ ಪಂಚಾಯ್ತಿಗೆ ನುತನವಾಗಿರುವ ಗೋವಿಂದ ರಾಜು ಸಮೀಪಸುತ್ತಿರುವ ಚುಣಾವಣೆ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾರುವುದು ಒಳ್ಳೆಯ ಸಂಗತಿ ಜನರ ಮನಸ್ಸು ಗಳನ್ನು ಆಕರ್ಷಿಸಲು ತಮ್ಮ ಉತ್ತಮ ಕೆಲಸಗಳಿಂದ ಸಾದ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಾಳಾದ ಕೆಂಪದೇವಮ್ಮ ಅನುಪಮ,ಪಲ್ಲವಿ,ಸರಸ್ಪತಿ,ಜ್ಯೋತಿ,ಮಣಿ,ವಿಜಯ್ ಕುಮಾರ್, ಹಾಗು ಮುಖಂಡರಾದ ದವಣದ ಹೊಸಹಳ್ಳಿ ಕರಿಯಪ್ಪ, ಕಾನ್ಕೆರೆ ಸಿದ್ದೇಶ್ ಸೇರಿದಂತೆ ಮುಂತಾದವರಿದ್ದರು.