ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಮಹಿಳೆಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಲಾಗಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಲಾಗಿದ್ದು, ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾರೆ.
ನಾಲ್ಕೈದು ಜನರ ಗುಂಪಿನಿಂದ ಕೃತ್ಯ ನಡೆದಿರುವ ಶಂಕೆ ಇದೆ. ಹಲ್ಲೆ ನಡೆಸಿದವರು ಯಾರು? ಎಂಬುದು ಗೊತ್ತಾಗಿಲ್ಲ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿಲ್ಲ. ಯಾದಗಿರಿ -ಶಹಾಪುರ ಮಾರ್ಗದ ಹೆದ್ದಾರಿ ಬಳಿಯ ಜಮೀನೊಂದರಲ್ಲಿ ರಾತ್ರಿ ವೇಳೆ ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಕೋರರೇ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಿಲ್ಲೆಯಿಂದ ಥಳಿಸಿದ್ದಲ್ಲದೇ, ಅಂಗಾಂಗಗಳನ್ನು ಮುಟ್ಟಿ ವಿಕೃತಿ ತೋರಲಾಗಿದೆ. ಮಹಿಳೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿ ಯಾಗಿದ್ದ ಆರೋಪವಿದ್ದು, ಆಕೆಗೆ ಮೊಬೈಲ್ ತೋರಿಸುತ್ತಾ ಇದರಲ್ಲಿರುವುದು ನೀನೇ ಅಲ್ಲವೇ ಎಂದು ಕೇಳಿ ಹಲ್ಲೆ ನಡೆಸಲಾಗಿದೆ.