Wednesday, 11th December 2024

ಸ್ತ್ರೀಯರಿಗೆ ಪೂಜ್ಯ ಸ್ಥಾನವಿದ್ದರೂ ಮೌಢ್ಯತೆ ದೂರ ಆಗಿಲ್ಲ: ಸ್ತ್ರೀಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನವಿದ್ದರೂ ಮೌಡ್ಯತೆ ದೂರ ಆಗದಿರುವ

ಮಧುಗಿರಿ: ಸ್ತ್ರೀಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನವಿದ್ದರೂ ಮೌಡ್ಯತೆ ದೂರ ಆಗದಿರುವ ಬಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಾಂತಲಾ ರಾಜಣ್ಣ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಮಾಲಿಮರಿಯಪ್ಪ ರಂಗಮ0ದಿರದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ಒಕ್ಕೂಟದ ವತಿಯಿಂದ ಕತ್ತಲಿನಿಂದ ಬೆಳಕಿ ನಡೆಗೆ ಘೋಷಣೆಯೊಂದಿಗೆ ವಿಧವೆಯರ ಒಕ್ಕೂಟದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿಧವೆ ಸ್ತ್ರೀಯರು ಮಾನಸಿಕ ಧೈರ್ಯ ಕಳೆದು ಕೊಳ್ಳಬಾರದು ನಿಂದನೆ ಕಟ್ಟುಪಾಡಿಗೆ ಒಳಗಾಗಬಾರದು. ಕೆ ಎನ್ ರಾಜಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ವಿಧವೆಯರಿಗೆ ೪೫೦೦ ಮನೆ ಗಳನ್ನು ಮಂಜೂರು ಮಾಡಿಸಿದ್ದರು.

ಮುಂದಿನ ದಿನಗಳಲ್ಲಿ ಕೆ ಎನ್ ರಾಜಣ್ಣ ಶಾಸಕರಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಧುಗಿರಿಯನ್ನು ಗುಡಿಸಲು ಸಹಿತ ಕ್ಷೇತ್ರವನ್ನಾಗಿ ಮಾಡಲಿದ್ದು ಮತ್ತು ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸಲು ಉಚಿತ ಪಾಸ್ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ ಇದೇ ಅಲ್ಲದೆ ವಿಧವೆ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ಬಗ್ಗೆ ಚಿಂತನೆ ನಡೆದಿದೆ ಸ್ತ್ರೀಯರು ತಿಳುವಳಿಕೆ ಉಳ್ಳವರಾದರೆ ಜೀವನ ಶೈಲಿ ಬದಲಾಯಿಸಿಕೊಳ್ಳಬಹುದು.

ಹೆಣ್ಣು ಅಬಲೆಯಲ್ಲಾ ಸಬಲೇ ಎಂದ ಅವರು ನಿಮ್ಮಗಳ ಹೋರಾಟಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಚುನಾವಣಾ ಸಂದರ್ಭದಲ್ಲಿ ಸ್ತ್ರೀಯರು ಆಸೆ ಆಮೀಷಗಳಿಗೆ ಬಲಿಯಾಗದೆ ನಿಮ್ಮ ಮತವನ್ನು ನಿಮ್ಮ ಪರವಾಗಿ ನಿಲ್ಲುವ ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ನೀಡಿ ಮತ್ತು ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಿ ಎಂದರು.

ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾ ದಳ ಸಂಸ್ಥಾಪಕ ಅಧ್ಯಕ್ಷರಾದ ಸಂಪAಗಿ ಶ್ರೀನಿವಾಸಲು ಮಾತನಾಡಿ ವಿಧವೆಯರಿಗೆ ಪ್ರತಿ ತಿಂಗಳು ಕನಿಷ್ಠ ೩೦೦೦ ಪಿಂಚಣಿ ನೀಡಬೇಕು ಪ್ರತ್ಯೇಕ ನಿಗಮ ಮಂಡಳಿ ರಚನೆಯಾಗಬೇಕು ಆಕಸ್ಮಿಕವಾಗಿ ಗಂಡ ಸತ್ತರೆ ಕನಿಷ್ಠ ೫ ಲಕ್ಷ ರೂ ಪರಿಹಾರ ನೀಡಬೇಕು ಬಸ್ ಮತ್ತು ರೈಲು ಸಂಚಾರದಲ್ಲಿ ಉಚಿತ ಪಾಸ್ ವ್ಯವಸ್ಥೆ ಕಲ್ಪಿಸಬೇಕು ಪ್ರತ್ಯೇಕ ನಿವೇಶನ ಮತ್ತು ಮನೆಯ ನಿರ್ಮಾಣದ ವೆಚ್ಚ ವರಿಸಬೇಕು ವಿಧವೆಯರ ಮಕ್ಕಳಿಗಾಗಿ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕು ಎನ್‌ಎಫ್‌ಬಿಎಸ್ ಯೋಜನೆ ಅಡಿಯಲ್ಲಿ ೨೦೦೦೦ದಿಂದ ಲಕ್ಷಕ್ಕೆ ಏರಿಕೆ ಮಾಡಬೇಕು ಪ್ರತ್ಯೇಕ ರಕ್ಷಣೆಗೆ ಒತ್ತಾಯಿಸಿದರು.

ತಹಸಿಲ್ದಾರ್ ಸಿಗ್ಬತ್ಉಲ್ಲಾ ಮಾತನಾಡಿ ವಿಧವೇ ಸ್ತ್ರೀಯರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು ಅಂತಹ ಹಂತವಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ತಾಲೂಕ್ ಆಡಳಿತ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ರಾಗಿ ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು ಮಾತನಾಡಿ ಸಮಾಜದಲ್ಲಿ ವಿಧವೆಯರನ್ನು ನೋಡುವ ದೃಷ್ಟಿಕೋನ ಬದಲಾವಣೆಯಾಗಬೇಕು ವಿಧವೆಯರಿಗೆ ತಮ್ಮ ಜಮೀನಿನ ಮೇಲೆ ಕೆಸಿಸಿ ಸಾಲ ನೀಡುವ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.
ತಾ.ಪಂ. ಮಾಜಿ ಸದಸ್ಯರಾದ ಸುವರ್ಣಮ್ಮ ಮಾತನಾಡಿ ಈ ಸಮಾರಂಭ ಹೆಣ್ಣುಮಕ್ಕಳನ್ನು ಗುರುತಿಸುವ ವೇದಿಕೆಯಾಗಿದೆ ರಾಜ್ಯದಲ್ಲಿ ಸ್ತ್ರೀಯರಿಂದ ಮಾತ್ರ ಬದಲಾವಣೆ ಸಾಧ್ಯ ಸ್ತ್ರೀಯ ಕೂಗು ಅಹವಾಲು ಕೇಳುವವರಿಗೆ ಸ್ತ್ರೀಯರಿಗೆ ಶಕ್ತಿ ತುಂಬುವರಿಗೆ ನಿಮ್ಮಗಳ ಸಹಕಾರ ಇರಬೇಕು ಸರ್ಕಾರಗಳ ಬದಲಾವಣೆ ಸ್ತ್ರೀಯರಿಂದ ಮಾತ್ರ ಸಾಧ್ಯ ಎಂದರು.

ತಾ.ಪ0. ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿ ೨೦೧೩ರ ಅವಧಿಯಲ್ಲಿ ಕೆ ಎನ್ ರಾಜಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ವಿಧವೆಯರಿಗೆ ಅಂಗವಿಕಲರಿಗೆ ವಿಶೇಷವಾಗಿ ಮನೆ ನಿರ್ಮಿಸಿದ್ದರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದರೆ ಪ್ರತಿ ಮನೆಗೆ ೨೦೦೦ ಹಣ ನೀಡುವ ಭರವಸೆಯಿದ್ದು ಸ್ತ್ರೀಯರು ಮತವನ್ನು ಮಾರಿಕೊಳ್ಳದೆ ಉತ್ತಮ ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾ ದಳದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಗೀತಾ, ಕಾನೂನು ಸಲಹೆಗಾರ ಅಂಜನ ಮೂರ್ತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್ ಬಿ ಜಮೀರ್, ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್ ರೆಡ್ಡಿ, ರಾಷ್ಟ್ರೀಯ ನಿರ್ದೇಶಕ ಮದುಕುಮಾರ್, ರಾಜ್ಯ ನಿರ್ದೇಶಕರು. ಡೇವಿಡ್ ಮೆನೇಜಸ್ ತುಮಕೂರು ಜಿಲ್ಲಾ ಅಧ್ಯಕ್ಷ ಮ್ಯಾಥ್ಯೂ ರೊನಾಲ್ಡ್, ಮಧುಗಿರಿ ತಾಲೂಕು ಕೋಆರ್ಡಿನೇಟರ್ ಮಹೇಶ್ ಕುಮಾರ್ ಹಾಗೂ ಮಹಿಳೆಯರು ಹಾಜರಿದ್ದರು.