Friday, 13th December 2024

ಕತ್ತು ಕೊಯ್ದು ಯುವತಿಯ ಬರ್ಬರ ಕೊಲೆ

murder case

ಬೆಂಗಳೂರು: ಬೆಂಗಳೂರಿನಲ್ಲಿ ಕತ್ತು ಕೊಯ್ದು ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೋರಮಂಗಲದ ವಿಆರ್ ಲೇಔಟ್ ನಲ್ಲಿ ಘಟನೆ ನಡೆದಿದೆ.

ಬಿಹಾರ ಮೂಲದ ಕೃತಿ ಕುಮಾರಿ(24) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೃತಿ ಕುಮಾರಿ ಕೆಲಸ ಮಾಡುತ್ತಿದ್ದರು.

ರಾತ್ರಿ 11 ಗಂಟೆ 10 ನಿಮಿಷದಿಂದ 11:30 ನಡುವೆ ಕೃತ್ಯ ನಡೆದಿದೆ.

ಯುವಕನೊಬ್ಬ ಲೇಡೀಸ್ ಪಿಜಿ ಒಳಗೆ ಆಗಮಿಸಿದ್ದಾನೆ. ಚಾಕು ಇಟ್ಟುಕೊಂಡು ಬಂದಿದ್ದ ಯುವಕ ಮೂರನೇ ಮಹಡಿಯಲ್ಲಿರುವ ಕೊಠಡಿಯ ಬಳಿ ಕೃತಿ ಕುಮಾರಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕತ್ತು ಕೊಯ್ದು ಹತ್ಯೆ ಮಾಡಿರುವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಿಚಯಸ್ಥ ಯುವಕನಿಂದ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಪಿಜಿ ಮಾಲೀಕರ ನಿರ್ಲಕ್ಷವೇ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ್ನೇಯ ವಿಭಾಗದ ಸಾರಾ ಫಾತಿಮಾ ಅವರೂ ಪರಿಶೀಲನೆ ನಡೆಸಿದ್ದಾರೆ. ಸಿಸಿ ಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆ ಕಾರ್ಯ ಕೈಗೊಳ್ಳ ಲಾಗಿದೆ. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.