Friday, 13th December 2024

ಸಿದ್ದಗಂಗಾ ಮಠದಲ್ಲಿ ವೀರಶೈವ ಲಿಂಗಾಯಿತ ಕಾರ್ಯಾಗಾರ

ತುಮಕೂರು: ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ,ವೀರಶೈವರು ಒಂದೇ ಎಂಬ ಪ್ರತಿಪಾದನೆಯೊಂದಿಗೆ ಎಲ್ಲರನ್ನೂ ಒಗ್ಗೂಡಿ ಸುವ ಉದ್ದೇಶದಿಂದ ನವೆಂಬರ್ 12 ಮತ್ತು 13 ರಂದು ಸಿದ್ದಗಂಗಾ ಮಠದ ವಸ್ತು ಪ್ರದರ್ಶನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಬೆಂಗಳೂರು ವಿಭಾಗೀಯ ಮಟ್ಟದ ಕಾರ್ಯಾಗಾರ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶ ಮತ್ತು ಕಾರ್ಯಾಗಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ
ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಅವರು, ವೀರಶೈವ ಲಿಂಗಾಯಿತರಲ್ಲಿ ಸಂಘಟನೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶ ದಿಂದ 1904ರಲ್ಲಿ ಅನಗಲ್ ಶ್ರೀಕುಮಾರಸ್ವಾಮೀಜಿ ಅವರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ, ಇಂದು ವೀರಶೈವ ಲಿಂಗಾಯಿತ ಮಹಾಸಭಾ ಆಗಿ ಪರಿವರ್ತನೆಗೊಂಡು, ರಾಜ್ಯದ ಪ್ರವರ್ಗ 3 ರಲ್ಲಿರುವ ಲಿಂಗಾಯಿತ, ವೀರಶೈವ ಮತ್ತು ಅದರ ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಸಮಾ ವೇಷದಲ್ಲಿ ಚರ್ಚೆಗಳು ನಡೆಯಲಿವೆ ಎಂದರು.
ನ.12ರ ಶನಿವಾರ ಬೆಳಗ್ಗೆ 7 ಗಂಟೆಗೆ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಗದ್ದುಗೆ ಪೂಜೆಯ ಮೂಲಕ ಆರಂಭವಾಗುವ ಕಾರ್ಯಕ್ರಮದಲ್ಲಿ ಶ್ರೀಸಿದ್ದಲಿಂಗಸ್ವಾಮೀಜಿ, ಶ್ರೀಡಾ.ಶಿವಾನ0ದ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ದ್ವಜಾರೋಹಣ ಸಮ್ಮೇಳನದ ದ್ವಜಾರೋಹಣ ನೆರವೇರಲಿದೆ.
ನ.12 ಶನಿವಾರ ಬೆಳಗ್ಗೆ 10 ಗಂಟೆಗೆ ಕಾರ್ಯಾಗಾರದ ನಿಮಿತ್ತ ನಡೆಯುವ ವಾಣಿಜ್ಯ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಉದ್ಘಾಟನೆಯನ್ನು ಕರ್ನಾಟಕ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ನೆರವೇರಿ ಸುವರು.ಉದ್ಯಮಿಗಳಾದ ಉಮೇಶ್ ಹೆಚ್.ಪಾಟೀಲ್,ಹೆಚ್.ಎಸ್.ರವಿಶಂಕರ್,ಎಸ್.ಜಿ.ಚAದ್ರಮೌಳಿ ಮತ್ತಿತರರು ಪಾಲ್ಗೊಳ್ಳಲಿ ದ್ದಾರೆ.
ಬೆಳಗ್ಗೆ 10:30 ರಿಂದ 11:30ರವರೆಗೆ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಸಿದ್ದಗಂಗೆಯ ಶ್ರೀಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ,ಮಹಾಸಭಾದ ಹಿರಿಯ ಉಪಾಧ್ಯಕ್ಷ ಡಾ.ಎನ್.ತಿಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾಗಾರವನ್ನು ಮಾಜಿ ಸಚಿವರು ಹಾಗೂ ಶಾಸಕರು ಮತ್ತು ಅಭಾವೀಲಿಂ ಮಹಾಸಭಾ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ ಉದ್ಘಾಟಿಸುವರು.ಶಾಸಕರಾದ ಜಿ.ಬಿ.ಜೋತಿಗಣೇಶ್, ಸಂಗಮೇಶ್,ಮುಖ0ಡರಾದ ಎಂ.ಎನ್.ಶಶಿಧರ್, ಟಿ.ಬಿ.ಶೇಖರ್ ಸೇರಿದಂತೆ ಹಲವರು ಉಪಸ್ಥಿತರಿರುವರು.
ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ ಪ್ರಸ್ತುತ ಕೃಷಿ ಕ್ಷೇತ್ರ ಮುಂದಿರುವ ಸವಾಲುಗಳು ಮತ್ತು ಪರಿಹಾರೋಪಾಯಗಳು ಕುರಿತು ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಸ್.ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆಯ ತೋಟಗಾರಿಕಾ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ್ ಅವರು ವಿಷಯ ಮಂಡಿಸಿ ಮಾತನಾಡಲಿದ್ದಾರೆ.ವಸತಿ ಸಚಿವ ವಿ.ಸೋಮಣ್ಣ,ಸಂಸದ ಜಿ.ಎಸ್. ಬಸವರಾಜು, ಎಸ್.ಆರ್.ಪಾಟೀಲ್ ಅವರು ಭಾಗವಹಿಸಲಿದ್ದಾರೆ.
ದ್ವಿತೀಯ ಗೋಷ್ಠಿಯಲ್ಲಿ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಹಡಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯುವ ಕೈಗಾರಿಕೆ ಮತ್ತು ವಾಣಿಜ್ಯ ವಿಚಾರಗೋಷ್ಠಿಯನ್ನು ಕೆಸಿಟಿಯು ಎಂ.ಡಿ. ಬಿ.ಮಹೇಶ್ ಉದ್ಘಾಟಿಸುವರು. ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಕೆ.ಷಡಕ್ಷರಿ ಮತ್ತಿತರರು ಪಾಲ್ಗೊಳ್ಳುವರು.
ಮಧ್ಯಾಹ್ನ 3 ಗಂಟೆಗೆ ನಡೆಯುವ ಪ್ರಸ್ತುತ ವೀರಶೈವ-ಲಿಂಗಾಯಿತ ಧರ್ಮ ಮತ್ತು ತತ್ವಾಚರಣೆಗಳ ಕುರಿತ ಘೋಷ್ಠಿಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಎಂ.ಬಿದರಿ ಉದ್ಘಾಟಿಸಲಿದ್ದು,ಅಟವಿಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗ ಸ್ವಾಮೀಜಿ ವಿಷಯ ಮಂಡಿಸಿ ಮಾತನಾಡಲಿದ್ದಾರೆ.
ಜಾನಪದದಲ್ಲಿ ವೀರಶೈವ-ಲಿಂಗಾಯಿತ ಧರ್ಮ ಕುರಿತಂತೆ ನಡೆಯುವ ನಾಲ್ಕನೇಗೋಷ್ಠಿಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದು, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್,ಎಸ್.ಪಿನಾಕ ಪ್ರಾಣಿ ಅವರುಗಳು ವಿಷಯ ಮಂಡಿಸಿ ಮಾತನಾಡ ಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ನವೆಂಬರ್ 13ರ ಬೆಳಗ್ಗೆ 9 ರಿಂದ 10:30ರವರಗೆ ಪ್ರತಿಭಾಪುರಸ್ಕಾರ ನಡೆಯಲಿದ್ದು,ವೀ.ಲಿಂ ಮಹಾಸಭಾದ ತುಮಕೂರು ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಸುಮಾರು 375 ಜನ ವೀರಶೈವ-ಲಿಂಗಾಯಿತ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ಮಕ್ಕಳಿಗೆ ತಲಾ 2 ಸಾವಿರ ರೂ ನಗದು ಬಹುಮಾನ, ಪ್ರಶಶ್ತಿ ಪದಕ ನೀಡಿ ಗೌರವಿಸಲಾಗುವುದು.
ಬೆಳಗ್ಗೆ 10ರಿಂದ 12 ಗಂಟೆಯವರಗೆ ಜರುಗುವ ಮಹಿಳಾಗೋಷ್ಠಿಯನ್ನು ಪ್ರಾದ್ಯಾಪಕರು, ವಿಮರ್ಶಕರು ಆದ ಡಾ.ಎಂ.ಎಸ್. ಆಶಾದೇವಿ ಅವರು ಉದ್ಘಾಟಿಸಲಿದ್ದಾರೆ.ರಾಜ್ಯ ಮಹಿಳಾ ವಿಭಾಗ ಅಧ್ಯಕ್ಷೆ ಎಸ್.ವೈ.ಅರುಣಾದೇವಿ ಅಧ್ಯಕ್ಷತೆ ವಹಿಸುವರು. ಮೀನಾಕ್ಷಿ ಖಂಡಿಮಠ್,ಗAಗಾಭಿಕಾ ಮಲ್ಲಿಕಾರ್ಜುನ್,ನಂದಿನಿ ಘಂಟಿ ಅವರುಗಳು ವಿಷಯ ಮಂಡಿಸಿ ಮಾತನಾಡಲಿದ್ದಾರೆ.
ಪ್ರಸ್ತುತ ಶಿಕ್ಷಣ ಮತ್ತು ಉದ್ಯಮಗಳಲ್ಲಿ ಯುವಕರ ಪಾತ್ರ ಕುರಿತ ಯುವಗೋಷ್ಠಿಯನ್ನು ಚಲನಚಿತ್ರ ನಟ ಡಾಲಿ ಧನಂಜಯ್
ಉದ್ಘಾಟಿಸಲಿದ್ದಾರೆ.
ರಾಜ್ಯಯುವಘಟಕದ ಅಧ್ಯಕ್ಷ ಮನೋಹರ್ ಜಿ.ಅಬ್ಬಿಗೆರೆ ಅಧ್ಯಕ್ಷತೆ ವಹಿಸಲಿದ್ದು,ನಿಟ್ಟೆ ಮೀನಾಕಿ ಇನ್ಸಿಟ್ಯೂಟನ ಎಸ್.ನಾಗೇಂದ್ರ ವಿಷಯ ಮಂಡಿಸಿ ಮಾತನಾಡಲಿದ್ದಾರೆ.ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿ.ಎಸ್.ಪುಟ್ಟ ರಾಜು ಮತ್ತಿತರರು ಪಾಲ್ಗೊಳ್ಳುವರು.
ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಮತ್ತು ಅಭಿನಂದನಾ ಸಮಾರಂಭವನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸ ಲಿದ್ದು, ಸಮಾವೇಶ ಸಮಿತಿ ಅಧ್ಯಕ್ಷ ಎಸ್.ಕೆ.ರಾಜಶೇರ್ ಅಧ್ಯಕ್ಷತೆ ವಹಿಸುವರು. ಸಮಾರೋಪ ನುಡಿಗಳನ್ನು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನುಡಿಯಲಿದ್ದಾರೆ. ಇದೇ ವೇಳೆ ಶತಾಯುಷಿ ಭೀಮಣ್ಣ ಖಂಡ್ರೆ ಅವರನ್ನು ಅಭಿನಂದಿಸಲಾಗುವುದು.
ಬೆಂಗಳೂರು ವಿಭಾಗಕ್ಕೆ ಸೇರಿದ 9 ಜಿಲ್ಲೆಗಳ 54 ತಾಲೂಕುಗಳು ಸುಮಾರು 10 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ತ್ತಿದ್ದು, ಹೆಚ್ಚು ಜನರು ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್ ಪಟೇಲ್, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಮುಕ್ತಾಂಭ ಬಸವರಾಜು, ಪಾವರ್ತಿ ಕ ರೆಡ್ಡಿ, ಶ್ರೀಕಂಠಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.