Friday, 20th September 2024

ನ್ಯಾಕ್ ಪರಿಷ್ಕೃತ ಮಾನ್ಯತಾ ಚೌಕಟ್ಟು ಕುರಿತು ರಾಜ್ಯಮಟ್ಟದ ಕಾರ್ಯಾಗಾರ

ತುಮಕೂರು: ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣ್ಣಮಟ್ಟ ಭರವಸೆಯ ಘಟಕವು ಮತ್ತು ಬೆಂಗಳೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಜಂಟಿಯಾಗಿ ಒಂದು ದಿನದ ರಾಜ್ಯಮಟ್ಟದ  ಸಂಯೋಜಿತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಕ್ ಪರಿಷ್ಕೃತ ಮಾನ್ಯತಾ ಚೌಕಟ್ಟು ಕುರಿತು ಕಾರ್ಯಾಗಾರವನ್ನು ಆಯೋಜಿಸಿತ್ತು.
ಕಾರ್ಯಾಗಾರವನ್ನು ಬೆಂಗಳೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ರಾಜ್ಯ ನೋಡಲ್ ಅಧಿಕಾರಿ ಡಾ ವಿಕ್ರಂ ಕೆ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಂಯೋಜಿತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಕ್ ಸ್ಥಾಪನೆಯಿಂದ ಹಿಡಿದು ಅದರ ಪ್ರಕ್ರಿಯೆ, ಐದು ವರ್ಷ ಕ್ಕೊಮ್ಮೆ ಬರುವ ನ್ಯಾಕ್‌ಗೆ ಬೇಕಿರುವ ಅಗತ್ಯ ದಾಖಲೆ, ಛಾಯಾಚಿತ್ರಗಳು, ಕಡತಗಳು ಸೇರಿದಂತೆ ಒಟ್ಟು ಏಳು ರೀತಿಯ ಮಾನದಂಡಗಳನ್ನು ಭರ್ತಿ ಮಾಡುವ ವಿಧಾನವನ್ನು ಎಳೆಎಳೆಯಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ಡಾ ವೈ ರಮೇಶ್ ಮಾತನಾಡಿ, ನ್ಯಾಕ್‌ನ ಮಾನದಂತ ೨ ಮತ್ತು ೩ರಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಅದರಲ್ಲಿಯೂ ಸರ್ಕಾರದ ರೋಸ್ಟರ್ ಪದ್ಧತಿ ಅಳವಡಿಕೆ, ವಿದ್ಯಾರ್ಥಿಗಳು ಮತ್ತು ಬೋಧಕರ ಅನುಪಾತ, ಬೋಧನಾ ಕಲಿಕಾ ಪ್ರಕ್ರಿಯೆ, ಪೂರ್ಣ ಮತ್ತು ಅರೆಕಾಲಿಕ ಬೋಧಕರ ವರ್ಗ, ಬೋಧಕರ ಅರ್ಹತೆಗಳಾದ ನೆಟ್, ಕೆ-ಸೆಟ್, ಪಿಎಚ್‌ಡಿ ಮತ್ತು ಇತರೆ ಉನ್ನತ ಪದವಿಗಳನ್ನು ಅಪ್‌ಲೋಡ್ ಮಾಡುವುದರ ಕುರಿತು ಮಾಹಿತಿಯನ್ನು ನೀಡಿದರು.
 ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತಾ , ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ರಮೇಶ್ ಮಣ್ಣೆ, ವಾಣ ಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ ವಿನಯ್ ಕುಮಾರ್ ಎಂ, ಐಕ್ಯೂಎಸಿ ಸಂಚಾಲಕರಾದ ಪ್ರೊ ಸೈಯದ್ ಬಾಬು ಎಚ್ ಬಿ, ರಸಾಯನಶಾಸ್ತ್ರ ವಿಭಾಗದ ವಿನೋದ ಕೆ, ರಾಜ್ಯಶಾಶಾಸ್ತ್ರ ವಿಭಾಗದ ರಂಗಸ್ವಾಮಿ ಎಂ ಆರ್ ಸೇರಿದಂತೆ ಎಲ್ಲಾ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.