Thursday, 19th September 2024

ಬೆಂಗಳೂರಿನಲ್ಲಿ ಮೊದಲ ಮಳಿಗೆ ಆರಂಭಿಸಿದ Wrangler®; ಭಾರತದಲ್ಲಿ ರಿಟೇಲ್‌ ವಹಿವಾಟು ವಿಸ್ತರಣೆ

ಬೆಂಗಳೂರು: ಜನಪ್ರಿಯ ವಸ್ತ್ರ ಹಾಗೂ ಜೀವನಶೈಲಿ ಬ್ರ್ಯಾಂಡ್ ಆಗಿರುವ Wrangler® ಭಾರತದಲ್ಲಿ  ತನ್ನ ಮೊದಲ ಪ್ರಮುಖ ಮಳಿಗೆ ಆರಂಭಿಸಿರು ವುದಾಗಿ ಪ್ರಕಟಿಸಿತು.

ಬೆಂಗಳೂರಿನ ಇಂದಿರಾನಗರದ ಜನನಿಬಿಡ ರಸ್ತೆಯಲ್ಲಿ ಇರುವ ಈ ವಿಶಾಲ ಮಳಿಗೆಯು ಭಾರತದಲ್ಲಿ Wrangler®ನ ವಿಸ್ತರಣೆಗೆ ಮಹತ್ವದ ಮೈಲಿಗಲ್ಲು ಆಗಿದೆ. ಈ ಫ್ಲ್ಯಾಗ್‌ಶಿಪ್‌ ಮಳಿಗೆಯೊಂದಿಗೆ, Wrangler®ತಂತ್ರಜ್ಞಾನದ ನಾವೀನ್ಯತೆ ಬಳಕೆ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರೂಪಿಸಿರುವ ಖರೀದಿ ಅನುಭವಗಳು ಮತ್ತು ಭಾರತದ ಗ್ರಾಹಕರಿಗೆ ವ್ಯಾಪಕವಾದ ಉತ್ಪನ್ನ ವರ್ಗೀಕರಣದ ಮೂಲಕ ಗ್ರಾಹಕರ ಅನುಭವವನ್ನು ಉನ್ನತೀಕರಿಸುವುದನ್ನು ಮುಂದುವರೆಸಲಿದೆ.

4,500 ಚದರ ಅಡಿಗಳಷ್ಟು ವಿಶಾಲ ಪ್ರದೇಶದಲ್ಲಿ ಹರಡಿರುವ ಈ ಮಳಿಗೆ ಯು  ಭಾರತದಲ್ಲಿನ  Wrangler®ನ ಅತಿದೊಡ್ಡ ಮಳಿಗೆಯಾಗಿದೆ.  ಇಂದಿರಾನಗರದಲ್ಲಿನ  Wrangler® ಮಳಿಗೆಯು ಜನಪ್ರಿಯ ಡೆನಿಮ್‌ಗಳು, ಟಿ-ಶರ್ಟ್‌ಗಳು, ಜಾಕೆಟ್‌ಗಳು ಮತ್ತು ಸ್ವೆಟ್‌ಶರ್ಟ್‌ಗಳನ್ನು ಮಾರಾಟ ಮಾಡಲಿದೆ. ಈ ಮಳಿಗೆಯು ಉಡುಪುಗಳಲ್ಲಿನ ಇತ್ತೀಚಿನ ಬದಲಾವಣೆಗಳು ಮತ್ತು ಪ್ರೀಮಿಯಂ ಸಂಗ್ರಹ ಮತ್ತು ಸಹಯೋಗಗಳಿಗೆ ಅನುಗುಣವಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಹೊಸ ಶ್ರೇಣಿಯ ವೈವಿಧ್ಯಮಯ ಉಡುಪುಗಳನ್ನು ಮಾರಾಟ ಮಾಡಲಿದೆ. ಇದು ವಿಶೇಷವಾದ Wrangler® x Smriti Mandhana  ಸಂಗ್ರಹ ಒಳಗೊಂಡಿದೆ, ಇದು ದಪ್ಪ ಮತ್ತು ತೆಳು ವಸ್ತ್ರದ ಮೂಲಕ  ಮೈಗೆ ಅಂಟಿಕೊಳ್ಳುವ,  ಹಾಗೂ ಬಟ್ಟೆಗಳ ಆಯ್ಕೆಯಲ್ಲಿ ಹೊಂದಾಣಿಕೆಯ ಮತ್ತು ಬೆಳವಣಿಗೆ ಸಂಕೇತಿಸುವ ಆಯ್ದ ವಸ್ತ್ರಗಳನ್ನು ಒಳಗೊಂಡಿದೆ.

ಮಳಿಗೆಯ ಹೃದಯಭಾಗದಲ್ಲಿ ಭಾರತದ ಮೊದಲ ವರ್ಧಿತ ವಾಸ್ತವದ (Augmented Reality–AR)  ಗೋಡೆಯ ಮೇಲೆ ರಚಿಸಿದ ವರ್ಣಚಿತ್ರ ಇದೆ. ಇದು Wrangler®ನ ಶ್ರೀಮಂತ ಪರಂಪರೆ ಮತ್ತು ನವೀನ ಮನೋಭಾವದ ಸಂಭ್ರಮಾಚರಣೆಯಾಗಿದೆ, ಇದು ಗ್ರಾಹಕರು ವೈವಿಧ್ಯಮಯ ವಸ್ತ್ರ ಸಂಗ್ರಹ ವನ್ನು ಮೆಚ್ಚಿಕೊಳ್ಳುವಂತೆ ಮಾಡಲಿದೆ.

ರೋಮಾಂಚಕ ಕಲಾಕೃತಿಗಳು, ಗ್ರಾಹಕರ ಅನುಭವಗಳು ಮತ್ತು  ಉತ್ಪನ್ನದ ಕಥೆ ಹೇಳುವ ಪ್ರತಿಯೊಂದು ವಸ್ತ್ರವು ‌ ಮಳಿಗೆಯ Wrangler® ಬ್ರ್ಯಾಂಡ್ ಕಥೆಗೆ ಜೀವಂತಿಕೆ ನೀಡಲಿವೆ. ಆಯ್ಕೆ ಮಾಡಿದ ಕ್ಯಾನ್ವಾಸ್, ಡೆನಿಮ್ ಪರಂಪರೆಯ ಹೃದಯಭಾಗದಲ್ಲಿ  ಕಲಾತ್ಮಕತೆಯನ್ನು ವರ್ಧಿಸಲಿದೆ.

ಭಾರತದಲ್ಲಿ Wrangler® ಉತ್ಪನ್ನಗಳನ್ನು ಮಾರಾಟ ಮಾಡುವ ಪರವಾನಗಿಯನ್ನು ಏಸ್‌ ಟರ್ಟಲ್‌ ಮಾತ್ರ ಪಡೆದುಕೊಂಡಿದೆ. Wrangler®, ಭಾರತದಲ್ಲಿ ತನ್ನ ಮೊದಲ ಮಳಿಗೆ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಏಸ್ ಟರ್ಟಲ್‌ನ ಸಿಇಒ ನಿತಿನ್ ಛಾಬ್ರಾ ಅವರು, ‘Wrangler®ನ ಮೊದಲ ವಿಶಾಲ ಮಳಿಗೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಗಮನ ಸೆಳೆಯುವ ಹೊಸ ಉಡುಪು ಧರಿಸಲು ಇಷ್ಟಪಡುವ ಮತ್ತು ವಿಶ್ವದ ಅತ್ಯಂತ-ಪ್ರೀತಿಯ ಉಡುಪು ಬ್ರ್ಯಾಂಡ್‌ಗಳಲ್ಲಿ ಒಂದನ್ನು ಸಂಪರ್ಕಿಸಲು ಬಯಸುವ Wrangler®ನ ಗ್ರಾಹಕರ ಜೊತೆಗೆ ಒಡನಾಟ ಇರಿಸಿಕೊಳ್ಳಲು ಈ ಮಳಿಗೆಯು ನಮಗೆ ಅವಕಾಶ ಒದಗಿಸುತ್ತದೆ. ನಿರಂತರವಾಗಿ ಬದಲಾಗುತ್ತಿರುವ ರಿಟೇಲ್‌ ವಹಿವಾಟಿಗೆ ಸಂಬಂಧಿಸಿದಂತೆ ಗ್ರಾಹಕರ ನಡವಳಿಕೆಯೂ ಬದಲಾಗು ತ್ತಿರುವುದರಿಂದ, ಭಾರತದಲ್ಲಿನ  ಯುವ, ಸೂಕ್ಷ್ಮ ಅಭಿರುಚಿಯ ಗ್ರಾಹಕರ ಬೆಳೆಯುತ್ತಿರುವ ನಮ್ಮ ವ್ಯಾಪಕ ನೆಲೆಗೆ ನಮ್ಮ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಪ್ರಭಾವಶಾಲಿ ಬ್ರ್ಯಾಂಡ್ ಅನುಭವ ಒದಗಿಸಲು ನಾವು ಆದ್ಯತೆ ನೀಡುವುದನ್ನು ಮುಂದುವರಿಸುತ್ತೇವೆ.

ಭಾರತದಲ್ಲಿ Wrangler®ನ ವಹಿವಾಟನ್ನು ಗಣನೀಯವಾಗಿ ಹೆಚ್ಚಿಸಲು ನಮ್ಮ ವ್ಯಾಪಕವಾದ ಬಹು ಬಗೆಯ ವಾಣಿಜ್ಯ ಪರಿಣತಿ ಮತ್ತು ಅನನ್ಯ ತಂತ್ರಜ್ಞಾನ-ಚಾಲಿತ ಕಾರ್ಯನಿರ್ವಹಣಾ ಮಾದರಿಯನ್ನು ಬಳಸಿಕೊಳ್ಳಲು ಏಸ್‌ ಟರ್ಟಲ್‌ನಲ್ಲಿ ನಾವು ಸಮರ್ಥರಾಗಿದ್ದೇವೆ. ನಾವು Wrangler®ನ ರಿಟೇಲ್‌ ವಹಿವಾಟು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ.  Wrangler® ಬ್ರ್ಯಾಂಡ್‌ ಅನ್ನು ದೇಶದಾದ್ಯಂತ ತಲುಪಿಸುತ್ತೇವೆ. ದೇಶದಾದ್ಯಂತ ಸ್ಥಾಪಿಸಲಾಗುತ್ತಿರುವ ಆಫ್‌ಲೈನ್ ರಿಟೇಲ್‌ ಮಳಿಗೆಗಳ  ಸರಣಿ ಹಾಗೂ ಅಂತರ್ಜಾಲ ಮಳಿಗೆ ಮೂಲಕ ಲಕ್ಷಾಂತರ ಭಾರತೀಯ ಗ್ರಾಹಕರ ಬಳಿಗೆ ಬ್ರ್ಯಾಂಡ್ ಅನ್ನು ಕೊಂಡೊಯ್ಯುತ್ತೇವೆ’ ಎಂದು ಹೇಳಿದ್ದಾರೆ.

ಬಹುಬಗೆಯ ಮಾರಾಟ ವಿಧಾನ ಸೌಲಭ್ಯ ಒಳಗೊಂಡಿರುವ ಈ ರಿಟೇಲ್‌ ಮಳಿಗೆಯು ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ವಿಧಾನಗಳು ಮತ್ತು ಟಚ್‌ಪಾಯಿಂಟ್‌ಗಳಾದ್ಯಂತ ಏಕರೂಪದ ಹಾಗೂ ಉನ್ನತ ಶಾಪಿಂಗ್ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ನೈಜ-ಮಯದಲ್ಲಿ ಬಹು ಬಗೆಯ ಖರೀದಿ ಅನುಭವ ಒದಗಿಸಲು ಹಾಗೂ ಬೆಲೆ ಸಮಾನತೆಗಾಗಿ ಮಳಿಗೆಗಳಲ್ಲಿ  ಎಲೆಕ್ಟ್ರಾನಿಕ್ಸ  ಷೆಲ್ಫ್‌ ಲೇಬಲ್ಸ್‌ ಗಳು ಇರಲಿವೆ. ‌

ವೈಯಕ್ತಿಕ ಶಿಫಾರಸುಗಳು ಮತ್ತು ಹೆಚ್ಚಿನ ಪರಿಶ್ರಮ ಇಲ್ಲದೆ ಉತ್ಪನ್ನ ಹುಡುಕಾಟದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ   ಸಂತೋಷಪಡಲು ‘ಸ್ಮಾರ್ಟ್ ಫಿಟ್ಟಿಂಗ್ ರೂಮ್‌’ಗಳು ಖರೀದಿದಾರರಿಗೆ ಹೊಸ ಅನುಭವಗಳನ್ನು ಒದಗಿಸಲಿವೆ. Wrangler®ನ ಕೊಡುಗೆಗಳ ಸಂಪೂರ್ಣ ಶ್ರೇಣಿಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಮಳಿಗೆಯು ಡಿಜಿಟಲ್ ಪರದೆಗಳನ್ನು ಹೊಂದಿದೆ.

ಭಾರತ ಮತ್ತು  ದಕ್ಷಿಣ ಏಷ್ಯಾದ ಇತರ ಮಾರುಕಟ್ಟೆಗಳಿಗೆ ದೀರ್ಘಾವಧಿಯ ಪರವಾನಗಿದಾರನಾಗುವುದಕ್ಕೆ ಕೊಂಟೂರ್ ಬ್ರ್ಯಾಂಡ್‌ಗಳೊಂದಿಗೆ ಏಸ್‌ ಟರ್ಟಲ್‌ 2021ರಲ್ಲಿ ಒಪ್ಪಂದ ಮಾಡಿಕೊಂಡಿತು. ಏಸ್ ಟರ್ಟಲ್, ತನ್ನ ಬ್ರ್ಯಾಂಡೆಡ್ ಅಂತರ್ಜಾಲ ತಾಣ www.Wrangler.in ತಾಣ,  ಆನ್‌ಲೈನ್ ಮಾರುಕಟ್ಟೆ ಸ್ಥಳಗಳು ಮತ್ತು ಭಾರತದಾದ್ಯಂತ 54 ಭೌತಿಕ ರಿಟೇಲ್‌ ಮಳಿಗೆಗಳ ಮೂಲಕ Wrangler®ನ  ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ರಿಟೇಲ್‌ ಮಾರಾಟ ಮಾಡಲು ಈ ಒಪ್ಪಂದವು ಅವಕಾಶ  ಮಾಡಿಕೊಟ್ಟಿತು. ಭಾರತದಲ್ಲಿನ Wrangler®ನ ಉತ್ಪನ್ನಗಳ ವಿನ್ಯಾಸ, ಸ್ಥಳೀಯ ತಯಾರಿಕೆ, ಮಾರುಕಟ್ಟೆ ಹಾಗೂ ಮಾರಾಟ ಸೇರಿದಂತೆ  ಸಂಪೂರ್ಣ ವ್ಯವಹಾರವನ್ನು ಏಸ್ ಟರ್ಟಲ್ ನಿರ್ವಹಿಸಲಿದೆ.

Leave a Reply

Your email address will not be published. Required fields are marked *