Tuesday, 17th September 2024

ಲಕ್ಷಾಂತರ ಮೌಲ್ಯದ ಅಕ್ರಮ ಪಡಿತರ ಜಪ್ತಿ…

ಯಾದಗಿರಿ: ಯಾರು ಸಹ ಅಸುವಿನಿಂದ ಬಳಲಬಾರದು ಎಂದು ಸರಕಾರ ಕಡು ಬಡವರಿಗೆ ಪ್ರತಿ ತಿಂಗಳು ಪಡಿತರ ದಾನ್ಯಗಳನ್ನೂ ವಿತರಿಸಲಾಗುತ್ತಿದೆ. ಆದರೆ ಬಡವರ ಹೊಟ್ಟೆ ಸೇರಬೇಕಾಗಿದ್ದ ಪಡಿತರಕ್ಕೆ ಕನ್ನ ಹಾಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಅಕ್ರಮ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಶಹಾಪುರ ಹೊರವಲಯದಲ್ಲಿ ನಡೆದಿದೆ.

ಹೌದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನ ಗುಡಿ ಸಮೀಪದಲ್ಲಿ ಅಕ್ರಮವಾಗಿ ಕ್ಯಾಂಟರ್ ವಾಹನದಲ್ಲಿ ಪಡಿತರ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ 282 ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ.

ಟಾಟಾ ಕ್ಯಾಂಟರ್ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ, ಧಾಖಲೆಗಳಿಲ್ಲದೆ ಅಕ್ರಮವಾಗಿ ಪಡಿತರ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸದ್ದ್ಯ 4ಲಕ್ಷಕ್ಕೂ ಅಧಿಕ ಬೆಲೆ ಬಾಳುವ 140 ಕ್ವೀಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದೂ, ಲಾರಿಯನ್ನು ವಶಕ್ಕೆ ಪಡೆದು ಚಾಲಕ ರಾಜೂ ರಾಠೋಡ ವಿರುದ್ದ ಪ್ರಕರಣ ದಾಖಳಿಸಲಾಗಿದೆ ಎಂದು ತಿಳಿಸಲಾಗಿದೆ.

ಭೀಮರಾಯನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *