Friday, 13th December 2024

ವಿವೇಕ ಎಂದರೆ ಜ್ಞಾನ-ವಿಜ್ಞಾನ-ಸುಜ್ಞಾನದ ಸಂಕೇತ: ವೈ ಎ ನಾರಾಯಣಸ್ವಾಮಿ

ದೇಶದ ಸಂಸ್ಕೃತಿ ಪರಂಪರೆ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದವರನ್ನು ನಾವು ಸ್ಮರಿಸಬೇಕು

ತಿಪಟೂರು: ವಿವೇಕ ಎಂದರೆ ಧ್ಯಾನದ ಕಣಜ, ಗಣಿ ಹಾಗೂ ಜ್ಞಾನ-ವಿಜ್ಞಾನ-ಸುಜ್ಞಾನ, ಸಂಸ್ಕೃತಿಯ ಸಂಕೇತವೇ ಇಂದಿನ ವಿವೇಕ ಕೊಠಡಿಗಳ ಉದ್ಗಾಟ ನೆಯ ಮುಖ್ಯ ಉದ್ದೇಶ ಎಂದು ವಿಧಾನ ಪರಿಷತ್ತಿನ ಮುಖ್ಯ sಸಚೇತಕ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ನೊಣವಿನಕೆರೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಅಯೋಜನೆ ಮಾಡಿದ್ದ ಶಾಲಾ ಕೊಠಡಿಗಳು ಮತ್ತು ವಿವೇಕ ಕೊಠಡಿಗಳ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.

ಜ್ಞಾನದ ಸಂಕೇತವಾಗಿರುವ ವಿವೇಕನಂದರ ಜ್ಞಾಪಕವಾಗಿ ನಾವು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು ವಿವೇಕ ಎಂದರೆ ಕೇಸರೀಕರಣವಲ್ಲ, ನಾವೆಲ್ಲರೂ ಪ್ರಬುದ್ದರಾಗಿ, ಶಕ್ತಿಯುತರಾಗಿ ಬೆಳೆಯಬೇಕಾದರೆ ಪಡೆದಂತಹ ಶಿಕ್ಷಣ ಅತಿ ಮುಖ್ಯ ವಾಗಿದೆ.

ಭಾರತ ದೇಶದ ಪರಂಪರೆಯನ್ನು, ಸಂಸ್ಕೃತಿಯನ್ನು ಕೀರ್ತಿ ಪತಾಕೆಯನ್ನು ಎತ್ತಿ ವಿಶ್ವಕ್ಕೆ ತಿಳಿಸಿದವರು ಎಂದರೆ ಸ್ವಾಮಿ ವಿವೇಕನಂದರು., ದೇಶದ ಭವಿಷ್ಯ ನಿರ್ಧಾರ ಮಾಡುವುದು ಶಾಲಾ ಕೊಠಡಿಗಳಲ್ಲಿ ಅದುದರಿಂದ ಜ್ಞಾನದ ವಿಚಾರಗಳನ್ನು ತಿಳಿಸುವ ಕೆಲಸವಾಗ ಬೇಕಾಗಿದೆ ಮಕ್ಕಳ ಶಕ್ತಿ ಸಾಮರ್ಥ್ಯ, ಬೌದ್ದಿಕ ಗುಣಮಟ್ಟ ಹೆಚ್ಚಳವಾಗಬೇಕು ಎಂಬ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಂದ0ತಹ ಕಲಿಕಾ ಚೇತರಿಕೆಯು ಕಾರ್ಯಕ್ರಮವು ಹೊರ ರಾಜ್ಯಗಳಲ್ಲಿ ಅನುಷ್ಠಾನ ತರುತ್ತಿದ್ದು, ಮೆಕಾಲೆಯ ಶಿಕ್ಷಣ ಪದ್ದತಿಯಿಂದ ಗುಲಾಮ ಗಿರಿ ಅಂಶವನ್ನು ಕಳಚಿ, ಹೊಸ ಶಿಕ್ಷಣ ನೀತಿಯಿಂದ ಭಾರತವನ್ನು ವಿಶ್ವ ಗುರು ಭಾರತ ವನ್ನಾಗಿ ಮಾಡಲು ಶ್ರಮಿಸಬೇಕಾಗಿದೆ ಎಂದರು.

ಉಪನಿರ್ಧೇಶಕ ನಂಜಯ್ಯ ಮಾತನಾಡಿ ಪ್ರಸ್ತುತ ವರ್ಷದಲ್ಲಿ ಕೋಠಡಿಗಳ ದುರಸ್ತಿಗೆ ೨ ಕೋಟಿ ಶೌಚಾಲಯ ಕುಡಿಯುವ ನೀರಿಗಾಗಿ ೧೦೮ ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡ ಲಾಗಿದ್ದು ಉತ್ತಮ ಪೌಷ್ಠಿಕಾಂಶದ ಬಿಸಿಯೂಟಕ್ಕೆ ಅದ್ಯತೆ ನೀಡಲಾಗಿದ್ದು. ಈ ವರ್ಷದಿಂದ ಕರ್ನಾಟಕ ದರ್ಶನ ಕರ‍್ಯಕ್ರಮವನ್ನು ಆರಂಭಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಧಿಕಾರಿ ಶ್ರೀಮತಿ ಕಲ್ಪಶ್ರೀ, ದಂಡಾಧಿಕಾರಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ನೊಣವಿನಕೆರೆ ಗ್ರಾ ಪಂ ಅದ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರಘು, ಶಿಕ್ಷಕರಾದ ಚನ್ನೇಗೌಡ, ಲಕ್ಷಣ್, ಕುಮಾರಸ್ವಾಮಿ, ದಕ್ಷೀಣ ಮೂರ್ತಿ, ಸುರೇಶ್ ಮತ್ತಿತ್ತರು ಹಾಜರಿದ್ದರು.

*

ನೂರು ವರ್ಷ ತುಂಬಿದ ಶಾಲೆಗಳು, ಜ್ಞಾನಪೀಠ ಪ್ರಶಸ್ತಿ ಪಡೆದ ಶಾಲೆಗಳ ಅಭಿವೃದ್ದಿ ಮಾಡುವುದು ನಮ್ಮ ಸರ್ಕಾರದ ಮೊದಲ ಆಧ್ಯತೆಯಾಗಿದೆ. ಇಂದಿನ ತಂತ್ರಜ್ಞಾನದ ಜೊತೆಗೆ ನಾವುಗಳು ಹೊಂದಿಕೊಳ್ಳುವುದು ಉತ್ತಮವಾಗಿದ್ದು ಹೊಸತನವನ್ನು ಬಯಸುವುದು ಸೂಕ್ತವಾಗಿದೆ.
.ವೈ ಎ ನಾರಾಯಣಸ್ವಾಮಿ ಮುಖ್ಯ ಸಚೇತಕ ವಿಧಾನ ಪರಿಷತ್ತು