Saturday, 14th December 2024

ಆಲದಮರದ ಪಾರ್ಕಿನಲ್ಲಿ ವಿಶ್ವ ಯೋಗ ದಿನ

ತುಮಕೂರು: ಪ್ರೆಸ್ ಕ್ಲಬ್ ತುಮಕೂರು, ಅಮೋಘ ಟಿವಿ, ಫಿಟ್ನೋಲಿಕ್ ವತಿಯಿಂದ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದಮರದ ಪಾರ್ಕಿನಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.

`ಯೋಗ ಟೂ ಫಿಟ್’ ಎಂಬ ಘೋಷವಾಕ್ಯದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಯೋಗಕ್ಕೆ ವಿಶ್ವಮನ್ನಣೆ ತಂದುಕೊಟ್ಟಿದ್ದು ಇಂದು ದೇಶದೆಲ್ಲೆಡೆ ಯೋಗದ ಉಪಯೋಗ ಸಾರಲಾಗುತ್ತಿದೆ ಎಂದರು.

ಅನುಪಯುಕ್ತವಾಗಿದ್ದ ಆಲದ ಮರ ಪಾರ್ಕ್ ಇಂದು ಸದುಪಯೋಗವಾಗಿದೆ, ಜನೋಪ ಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಪಾರ್ಕ್ಗೆ ತುಮಕೂರು ಪ್ರೆಸ್ ಕ್ಲಬ್ ಮೆರುಗು ತಂದಿದೆ ಎಂದರು.

ಬಿಜೆಪಿ ಮುಖಂಡ ಅರಕೆರೆ ರವೀಶ್ ಮಾತನಾಡಿ, ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ, ಈ ಒತ್ತಡದಿಂದ ಪಾರಾಗಲು ಯೋಗ ಪರಿಣಾಮಕಾರಿ ಎನ್ನಿಸಿದ್ದು ಎಲ್ಲರೂ ಅಭ್ಯಾಸ ಮುಂದುವರಿಸೋಣ ಎಂದರು.

ಪಾಲಿಕೆ ಸದಸ್ಯೆ ಗಿರಿಜಾ  ಮಾತನಾಡಿ, ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು, ಎಲ್ಲರೂ ಕಡ್ಡಾಯವಾಗಿ ಯೋಗದ ಅಭ್ಯಾಸವನ್ನು ಪ್ರತಿನಿತ್ಯ ಮಾಡಬೇಕು ಎಂದರು. ತಹಸೀಲ್ದಾರ್ ಮೋಹನ್‌ಕುಮಾರ್, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಫಿಟ್ನೋಲಿಕ್ ಜಿಮ್ ಮುಖ್ಯಸ್ಥೆ ಶರ್ಮಿಳಾ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಸಹ ಕಾರ್ಯದರ್ಶಿ ಟಿ.ಎನ್. ಸತೀಶ್, ನಿರ್ದೇಶಕರಾದ ದಾದಪೀರ್, ಎನ್‌ಸಿಸಿ ಅಧಿಕಾರಿ ಪ್ರದೀಪ್‌ಕುಮಾರ್, ಯೋಗ ಶಿಕ್ಷಕರಾದ ಶ್ರೀನಿವಾಸ್, ಗೀತಾಂಜಲಿ ಮತ್ತಿತರರು ಇದ್ದರು.