Sunday, 13th October 2024

Minister Zameer Ahmed: ಪ್ಯಾಲೆಸ್ಟೈನ್ ಧ್ವಜ ಹಿಡಿದರೆ ತಪ್ಪೇನಿಲ್ಲ-ಸಚಿವ ಜಮೀರ್

ZameerAhmed

ಕಲಬುರಗಿ: ರಾಜ್ಯದಲ್ಲಿ ಹಲವಡೆ ಕಿಡಿಗೇಡಿಗಳಿಂದ ಪ್ಯಾಲೆಸ್ಟೈನ್ ಧ್ವಜ ಹಾರಾಟ ವಿಚಾರವಾಗಿ ನಗರದಲ್ಲಿ ಸುದ್ದಿ ಗಾರರೊಂದಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಪ್ಯಾಲೆಸ್ಟೈನ್ ಧ್ವಜ ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಪ್ಯಾಲೆಸ್ಟೈನ್ ಧ್ವಜ ಮೆರವಣಿಗೆಯನ್ನು ಸಮರ್ಥಿಸಿಕೊಂಡು ಚರ್ಚೆಗೆ ಗ್ರಾಸವಾಗಿ ದ್ದಾರೆ.

ಪ್ಯಾಲೆಸ್ಟೈನ್ ಗೆ ಕೇಂದ್ರ ಸರಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ವಿ ಆರ್ ವಿತ್ ಪ್ಯಾಲೆಸ್ಟೈನ್ ಅಂದಿದೆ. ಕೇಂದ್ರ ಸರಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದು ಮೆರವಣಿಗೆ ಮಾಡಿದ್ದಾರೆ. ಧ್ವಜ ಹಿಡಿದಿದರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಚಿಕ್ಕಮಗಳೂರು, ಕೋಲಾರದ ಘಟನೆಗಳನ್ನು ಸಮರ್ಥಿಸಿಕೊಂಡರು.

ಬೇರೆ ದೇಶದ ಪರ ಘೋಷಣೆ ಕೂಗಬಾರದು. ಘೋಷಣೆ ಕೂಗಿದರೆ ಅಂತವರು ದೇಶದ್ರೋಹಿ ಕೆಲಸ ಮಾಡಿದಂತೆ ಆಗುತ್ತದೆ. ಘೋಷಣೆ ಕೂಗಿದವರು ಯಾರೇ ಇರಲಿ ಗಲ್ಲು ಶಿಕ್ಷೆಯಾಗಬೇಕು. ನಾನು ಮೊದಲು ಹಿಂದೂಸ್ತಾನಿ, ಆಮೇಲೆ ಕನ್ನಡಿಗ ಅದಾದಮೇಲೆ ಮುಸ್ಲಿಂ. ಯಾರೇ ಆದರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು ಎಂದು ಸಚಿವ ಜಮೀರ್ ಹೇಳಿದರು.

ಬೆಂಕಿ ಹಚ್ಚುವವರ ವಿರುದ್ದ ಕ್ರಮ: ಬಿಜೆಪಿಯವರಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ಅದಕ್ಕಾಗಿ ನಾಗಮಂಗಲ ಕೇಸ್ ನಲ್ಲಿ ಬಿಜೆಪಿ ನಾಯಕರು ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ. ಯಾರೇ ಬೆಂಕಿ ಹಚ್ಚೋ ಕೆಲಸ ಮಾಡಿದರೆ ಅವರ ಮೇಲೆ ಕ್ರಮ ಆಗಬೇಕು. ಎರಡೂ ಬಾರಿ ಸಿಎಂ ಆಗಿರುವ ಕುಮಾರಸ್ವಾಮಿ ಏನ್ ಮಾತನಾಡಿದ್ದಾರೆ. ರಾಜಕಾರಣಿಗಳು ಬೆಂಕಿ ಹಚ್ಚೋ ಕೆಲಸ ಮಾಡಬಾರದು. ನಾವು ಜಾತಿ,ಧರ್ಮವನ್ನ ಬಿಟ್ಟು ಬಿಡಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

*

ನೂರು ವಿಜಯೇಂದ್ರ, ನೂರು ಯಡಿಯೂರಪ್ಪ, ಇನ್ನೂರು ಕುಮಾರಸ್ವಾಮಿ ಬಂದರು, ಸಿದ್ದರಾಮಯ್ಯ ಅವರನ್ನು ಏನು ಮಾಡೊಕ್ಕಾಗಲ್ಲ. ಸಿದ್ದರಾಮಯ್ಯ ಟೈಗರ್ ಇದ್ದಂತೆ. ಐದು ವರ್ಷ ಸಿದ್ದರಾಮಯ್ಯರನ್ನ ಅಲುಗಾಡಿಸೋಕೆ ಸಾಧ್ಯವಿಲ್ಲ.

  • ಜಮೀರ್ ಅಹದ್ಮ ಖಾನ್, ಸಚಿವ

ಇದನ್ನೂ ಓದಿ: Zameer Ahmed Khan: ಅಲ್ಪಸಂಖ್ಯಾತರ ಅಭಿವೃದ್ಧಿಯೇ ಕಾಂಗ್ರೆಸ್‌ ಸರ್ಕಾರದ ಗುರಿ; ಜಮೀರ್‌ ಅಹ್ಮದ್‌‌ ಖಾನ್‌