Monday, 16th September 2024

ಭಾರತದಲ್ಲಿ ಮೂರು ಸುಧಾರಿತ ಹಾರ್ಡ್‌ವೇರ್‌ ಘಟಕಗಳನ್ನು ಸ್ಥಾಪಿಸಲು ಒಂದಾದ ಝೆಟ್‌ವರ್ಕ್‌ ಮತ್ತು ಸ್ಮೈಲ್‌

• ದೇವನಹಳ್ಳಿಯಲ್ಲಿ ನೂತನ ಘಟಕವನ್ನು ಉದ್ಘಾಟಿಸುವ ಮೂಲಕ ಐಟಿ ಹಾರ್ಡವೇರ್‌ ಉತ್ಪನ್ನಗಳ ಉತ್ಪಾದನೆಗೆ ಸಂಬಂಧಿಸಿದಂತೆ ತಾಂತ್ರಿಕ ಒಪ್ಪಂದವೊಂದಕ್ಕೆ ಸಹಿ ಹಾಕಿದ ಝೆಟ್‌ವರ್ಕ್‌ ಮತ್ತು ಸ್ಮೈಲ್‌
• ಝೆಟ್‌ವರ್ಕ್‌ನ ಎಲೆಕ್ಟ್ರಾನಿಕ್ಸ್‌ ವ್ಯವಹಾರಕ್ಕೆ ಭಾರತದಾದ್ಯಂತ ಅಸ್ತಿತ್ವ ಒದಗಿಸಲು ನೆರವಾಗಲಿರುವ ಪಾಲುದಾರಿಕೆ
• ಭಾರತದಲ್ಲಿ ಇಎಸ್‌ಡಿಎಂ ಸಾಮರ್ಥ್ಯಗಳನ್ನು ನಿರ್ಮಿಸಲು 1000 ಕೋಟಿ ರೂಪಾಯಿ ಹೂಡಿಕೆ ಮಾಡುವ ಬದ್ಧತೆ ಹೊಂದಿರುವ ಝೆಟ್‌ವರ್ಕ್‌
ಬೆಂಗಳೂರು: ಜಗತ್ತಿನ ಅತಿ ದೊಡ್ಡ ಉತ್ಪಾದನಾ ಮಾರುಕಟ್ಟೆಯಾಗಿರುವ ಝೆಟ್‌ವರ್ಕ್‌ ಮ್ಯಾನುಫೆಕ್ಚರಿಂಗ್‌ ಬ್ಯುಸಿನೆಸ್‌ ಸಂಸ್ಥೆಯು, ಭಾರತದಲ್ಲಿ ತನ್ನ ಸ್ಟೇಟ್‌-ಆಫ್-ದ-ಆರ್ಟ್‌ ಐಟಿ ಹಾರ್ಡ್‌ವೇರ್‌ ಉತ್ಪಾದನಾ ಘಟಕ (ಕೈಗಾರಿಕೆ) ಸ್ಥಾಪಿಸುವ ಸಂಬಂಧ, ಅತ್ಯಂತ ಕ್ಷಿಪ್ರ ಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಎಲೆಕ್ಟ್ರಾನಿಕ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಸರ್ವಿಸಸ್‌ (ಇಎಂಎಸ್‌) ಕಂಪನಿಯಾಗಿರುವ ನಗರ-ಮೂಲದ ಸ್ಮೈಲ್‌ ಎಲೆಕ್ಟ್ರಾನಿಕ್ಸ್‌ ಜೊತೆ ತಾನು ತಾಂತ್ರಿಕ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದೆ.
ಬೆಂಗಳೂರಿಗೆ ಅತ್ಯಂತ ಸಮೀಪದಲ್ಲೇ ಸ್ಥಾಪನೆಯಾಗಿರುವ ದೇವನಹಳ್ಳಿ ಘಟಕವು, ಡೆಸ್ಕ್‌ಟಾಪ್‌ಗಳು, ಲ್ಯಾಪ್‌ಟಾಪ್‌ಗಳು, ವಿದ್ಯುತ್‌ ಮೀಟರ್‌ಗಳು ಹಾಗೂ ರಿಮೋಟ್‌ ಕಂಟ್ರೋಲ್‌ಗಳ ಅಸ್ಸೆಂಬಲಿಂಗ್‌ (ಜೋಡಣೆ), ಟೆಸ್ಟಿಂಗ್‌ ಮತ್ತು ಪ್ಯಾಕಿಂಗ್‌ಗೆ ಸಂಬಂಧಿಸಿದಂತೆ ಸಂಪೂಣ ಸ್ವಯಂಚಾಲಿತವಾಗಿರುವ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಆಟೋಮೇಟೆಡ್‌ ಸ್ಕ್ರೀನ್‌ ಪ್ರಿಂಟಿಂಗ್‌, ಪ್ಲೇಸ್ಮೆಂಟ್‌ ಮತ್ತು ರಿಫ್ಲೋ ಯಂತ್ರಗಳ ರೀತಿಯ ಕಟಿಂಗ್‌-ಎಡ್ಜ್‌ ತಂತ್ರಜ್ಞಾನವು, ಉತ್ಕೃಷ್ಟ ಗುಣಮಟ್ಟದ ಉತ್ಪಾದನೆಯನ್ನು ಖಾತ್ರಿಪಡಿಸುವ ಜೊತೆಗೆ ಪ್ರತಿ ಒಂದು ಗಂಟೆಗೆ 0.75 ಮಿಲಿಯನ್‌ ಬಿಡಿ ಭಾಗಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. RoHS ಅನುಸರಣೆಯ ಮೂಲಕ ಪರಿಸರ ಹೊಣೆಗಾರಿಕೆಗೆ ಆದ್ಯತೆ ನೀಡುವ ಉತ್ಪಾದನಾ ಘಟಕವು, ಅತ್ಯುತ್ತಮ ಉತ್ಪನ್ನ ರಕ್ಷಣೆ ಸಾಮರ್ಥ್ಯ ಒದಗಿಸುವ ನಿಟ್ಟಿನಲ್ಲಿ ಕನ್ಫಾರ್ಮಲ್ ಲೇಪನದ ಸೌಲಭ್ಯದೊಂದಿಗೆ ಸುಸಜ್ಜಿತವಾಗಿದೆ.
ನೂತನ ಘಟಕವನ್ನು ಏಸರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹರೀಶ್‌ ಕೊಹ್ಲಿ ಅವರು ಉದ್ಘಾಟನೆ ಮಾಡಿದರು. “ಸ್ವಲ್ಪ ಸಮಯ ಸ್ಮೈಲ್‌ ಜೊತೆ ಕಾರ್ಯನಿರ್ವಹಿಸಿರುವ ಅನುಭವದ ಅಧಾರದಲ್ಲಿ ಹೇಳುವುದಾದರೆ, ಭಾರತದಿಂದ ಅತ್ಯುನ್ನತ ಗುಣಮಟ್ಟದ ಜಾಗತಿಕ ಐಟಿ ಹಾರ್ಡ್‌ವೇರ್‌ ಉತ್ಪನ್ನಗಳನ್ನು ಒದಗಿಸುವ ಸ್ಮೈಲ್‌ ಸಂಸ್ಥೆಯ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇನೆ. ಸ್ಮೈಲ್‌ ಮತ್ತು ಝೆಟ್‌ವರ್ಕ್‌ ನಡುವಿನ ಈ ತಾಂತ್ರಿಕ ಒಪ್ಪಂದದ ಕುರಿತು ನಾನು ಅತಿ ಹೆಚ್ಚು ನಿರೀಕ್ಷೆ ಹೊಂದಿದ್ದು, ಐಟಿ ಹಾರ್ಡ್‌ವೇರ್‌ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಅವರಿಗೆ ಈ ಒಪ್ಪಂದವು ನೆರವಾಗಲಿದೆ. ಇದರೊಂದಿಗೆ ಏಸರ್‌ ಇಂಡಿಯಾದ ʼಮೇಕ್‌ ಇನ್‌ ಇಂಡಿಯಾʼ ಬದ್ಧತೆ ಮೂಲಕ ಈ ಸಹಭಾಗಿತ್ವಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು, ಸ್ಥಳೀಯ ಉತ್ಪಾದನೆ ಮತ್ತು ನಾವಿನ್ಯತೆಯ ಮಹತ್ವಕ್ಕೆ ಒತ್ತು ನೀಡಲು ಅನುಕೂಲವಾಗಲಿದೆ. ಈ ಸಂಘಟಿತ ಪ್ರಯತ್ನಗಳು ಉತ್ಪನ್ನದ ಗುಣಮಟ್ಟವನ್ನು ಉತ್ತಮ ಪಡಿಸುವುದು ಮಾತ್ರವಲ್ಲದೆ, ಭಾರತದ ಆಥ‍್ಕ ಪ್ರಗತಿ ಮತ್ತು ತಾಂತ್ರಿಕ ಉನ್ನತಿಗೆ ಮಹತ್ವದ ಕೊಡುಗೆ ನೀಡಲಿದೆ,ʼʼ ಎಂದು ಹರೀಶ್‌ ಕೊಹ್ಲಿ ಅಭಿಪ್ರಾಯಪಟ್ಟರು.
ತ್ವರಿತ ಬೆಳವಣಿಗೆಯ ಪಥದತ್ತ ಮುಖ ಮಾಡಿರುವ ಸ್ಮೈಲ್‌, ಈ ಹೊಸ ಘಟಕ ಆರಂಭದ ಮೂಲಕ ಕ್ಷಿಪ್ರ ಪ್ರಗತಿಯತ್ತ ಮೊದಲ ಹೆಜ್ಜೆ ಇರಿಸಿದೆ. ಝೆಟ್‌ವರ್ಕ್‌ ಜೊತೆಗಿನ ಸಾಹಾಆಗಿತ್ವವು ಸ್ಮೈಲ್‌ ಸಂಸ್ಥೆಗಾಗಿ ಚೆನ್ನೈ ಮತ್ತು ಆಂಧ್ರಪ್ರದೇಶದಲ್ಲಿನ ಎರಡು ಫ್ಯಾಕ್ಟರಿಗಳ ಬಾಗಿಲು ತೆರೆದಂತಾಗಿದ್ದು, ದಕ್ಷಿಣ ಭಾರತದಲ್ಲಿ ಪ್ರಬಲ ಅಸ್ತಿತ್ವವನ್ನು ಒದಗಿಸಲಿದೆ. ಬೆಂಗಳೂರಿನಲ್ಲಿ ಈಗಾಗಲೆ ಹಾಲೀ ಇರುವ ಘಟಕವನ್ನೂ ಒಳಗೊಂಡಂತೆ, ಈ ವಿಸ್ತರಣೆಯ ಮೂಲಕ ಸ್ಮೈಲ್‌ ಭಾರತದಾದ್ಯಂತ ಝೆಟ್‌ವರ್ಕ್‌ ಸಹಭಾಗಿತ್ವದಲ್ಲಿ ಒಟ್ಟು ನಾಲ್ಕು ಫ್ಯಾಕ್ಟರಿಗಳನ್ನು ಹೊಂದಿದಂತಾಗಿದೆ. ಉತ್ತರ ಭಾರತದಲ್ಲಿ ತನ್ನದೇ ಆದ ನಾಲ್ಕು ಫ್ಯಾಕ್ಟರಿಗಳನ್ನು ಹೊಂದಿರುವ ಝೆಟ್‌ವರ್ಕ್‌, ಆ ಮೂಲಕ ಮೊಬೈಲ್ ಫೋನ್‌ಗಳು, ಟೆಲಿಕಾಂ ಸಾಧನಗಳು, ಸ್ಮಾರ್ಟ್ ಮೀಟರ್‌ಗಳು, ಟೆಲಿವಿಷನ್ ಮತ್ತು ಡಿಸ್‌ಪ್ಲೇ ಸಾಧನಗಳು ಮತ್ತು ಕೇಳಬಹುದಾದ (ಆಡಿಬಲ್‌) ಮತ್ತು ಧರಿಸಬಹುದಾದ (ವೇರಬಲ್‌) ಸಾಧನಗಳ ಬೇಡಿಕೆಯನ್ನು ಪೂರೈಸುತ್ತಿದೆ.
“ಪ್ರಮುಖ ಓಡಿಎಂಗಳು ಹಾಗೂ ಓಇಎಂಗಳಲ್ಲಿ ಆಯ್ದ ಸಂಸ್ಥೆಗಳ ಜೊತೆ ತಾಂತ್ರಿಕ ಪಾಲುದಾರಿಕೆ ನಿಭಾಯಿಸಲು ಸ್ಮೈಲ್‌ ಬದ್ಧವಾಗಿದೆ,ʼʼ ಎಂದು ಸ್ಮೈಲ್‌ಎಲೆಕ್ಟ್ರಾನಿಕ್ಸ್‌ನ ಮುಖ್ಯಸ್ತರಾಗಿರುವ ಮುಖೇಶ್‌ ಗುಪ್ತಾ ಹೇಳಿದರು.
“ನಾವು ಸಾಟಿಯಿಲ್ಲದ ಅನುಭೂತಿ ಒದಗಿಸುವ ಜೊತೆಗೆ, ನಮ್ಮ ಒನ್‌-ಸ್ಟಾಪ್‌ ಪರಿಹಾರಗಳ ಮೂಲಕ ಪರಿಕಲ್ಪನೆಗಳನ್ನು ವಾಸ್ತವಕ್ಕೆ ಪರಿವರ್ತಿಸುತ್ತಿದ್ದೇವೆ. ವೈವಿಧ್ಯಮಯ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ 750 ಕೌಶಲ್ಯಯುತ ಕೆಲಸಗಾರರು ಅತ್ಯುತ್ತಮವಾದ ಪೋರ್ಟ್‌ಫೋಲಿಯೋ (ದಾಸ್ತಾವೇಜು) ನಿರ್ವಹಿಸುವ ಜೊತೆಗೆ, ಲೋ-ಮಿಕ್ಸ್‌ ಹೈ-ವಾಲ್ಯೂಮ್‌ ಹಾಗೂ ಹೈ-ಮಿಕ್ಸ್‌, ಲೋ-ವಾಲ್ಯೂಮ್‌ ವಲಯಗಳೆರಡದ ಉತ್ಪಾದನಾ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಇದೀಗ ಜಾಗತಿಕ ಮಟ್ಟದ ಪ್ರತಿಷ್ಠಿತ ಉದ್ಯಮವಾಗಿರುವ ಝೆಟ್‌ವರ್ಕ್‌ ಜೊತೆ ಸಹಭಾಗಿತ್ವ ಸಾಧಿಸಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ. ಪರಿಪೂರ್ಣ ಕಾರ್ಯತಂತ್ರವನ್ನು ಒದಗಿಸುವಂತಹ  ಪಾಲುದಾರಿಕೆ ಇದಾಗಿದ್ದು, ಭಾರತದ ಅತ್ಯುನ್ನತ ಇಎಸ್‌ಡಿಎಂ ಪ್ಲೆಯರ್‌ ಆಗಿ ಹೊರಹೊಮ್ಮಲು ಸ್ಮೈಲ್‌ ಕಾರ್ಯೋನ್ಮುಖವಾಗಲಿದ್ದು, ಪ್ರಗತಿ ಪಥದಲ್ಲಿ ಸಾಗುತ್ತಿರುವ ಐಟಿ ಹಾರ್ಡ್‌ವೇರ್‌ ಉದ್ಯಮದಲ್ಲಿ ಝೆಟ್‌ವರ್ಕ್‌ ಪರಿಣತಿಯನ್ನು ಪಡೆಯಲಿದೆ,” ಎಂದು ಮುಖೇಶ್‌ ಗುಪ್ತಾ ಮಾಹಿತಿ ನೀಡಿದರು.
“ಇಂದು ದೃಢವಾದ ಮತ್ತು ಸ್ವಾವಲಂಬಿ ಎಲೆಕ್ಟ್ರಾನಿಕ್ಸ್ ಉದ್ಯಮ ಪ್ರಗತಿ ಸಾಧಿಸಿ, ಭಾರತ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ ಹೊಂದಿಕೊಳ್ಳುವ ಲಕ್ಷಣಗಳನ್ನು ಹೊಂದಿರುವ ಸ್ಮೈಲ್‌ ಜೊತೆ ಈ ಮಹತ್ವದ ಪಾಲುದಾರಿಕೆ ಆರಂಭಿಸುತ್ತಿರುವುದಕ್ಕೆ ನಾವು ನಿಜಕ್ಕೂ ರೋಮಾಂಚನಗೊಂಡಿದ್ದೇವೆ. ನಮ್ಮ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಮೂಲಕ ನಾವು ಸ್ಥಳೀಯ ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ನಮ್ಮ ಪ್ರಗತಿಯ ವೇಗ ಹೆಚ್ಚಿಸಲಿಕೊಳ್ಳುವ, ಅತ್ಯಂತ ಪರಿಣಾಮಕಾರಿಯಾಗಿ ಉದ್ಯೋಗ ಅವಕಾಶಗಳನ್ನು ಒದಗಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಪವರ್‌ಹೌಸ್‌ ಹಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಭಾರತದ ಪ್ರಯಾಣಕ್ಕೆ ಮಹತ್ವದ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಈ ಪಾಲುದಾರಿಕೆಯು ಸರ್ಕಾರದ ಪ್ರಗತಿಪರ ನೀತಿಗಳು ಮತ್ತು ಕಾರ್ಯಕ್ರಮಗಳಿಂದ ಉತ್ತೇಜನ ಪಡೆದಿರುವ ಅನುಕೂಲಕರ ವ್ಯಾಪಾರ ವಾತಾವರಣಕ್ಕೆ ಸಾಕ್ಷಿಯಾಗಿದೆ,” ಎಂದು ಝೆಟ್‌ವರ್ಕ್‌ನ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಹೇಳಿದರು.
ಝೆಟ್‌ವರ್ಕ್‌ ಕುರಿತು
ಒಪ್ಪಂದದ ತಯಾರಿಕೆಗಾಗಿ ನಿರ್ವಹಿಸಲ್ಪಡುತ್ತಿರುವ ಮಾರುಕಟ್ಟೆಯಾಗಿ ಝೆಟ್‌ವರ್ಕ್‌ ಗುರುತಿಸಿಕೊಂಡಿದೆ. ಸಣ್ಣ ತಯಾರಕರ ಜಾಗತಿಕ ಜಾಲದ ಮೂಲಕ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಲು ನೆರವಾಗುವ ರೀರಿಯಲ್ಲಿ ವಿಶ್ವದ ಪ್ರಮುಖ ಕೈಗಾರಿಕಾ ಮತ್ತು ಗ್ರಾಹಕ ಉದ್ಯಮಗಳೊಂದಿಗೆ ಪಾಲುದಾರಿಕೆ ಹೊಂದುವುದು ಝೆಟ್‌ವರ್ಕ್‌ನ ವಿಶೇಷತೆಯಾಗಿದೆ. ಇಲ್ಲಿ ಪೂರೈಕೆದಾರರ ಆಯ್ಕೆ, ಬೆಲೆ ನಿರ್ಧಾರ ಮತ್ತು ಆರ್ಡರ್‌ಗಳ ಪೂರೈಕೆಗೆ ತನ್ನ ಪಾಲುದಾರರಿಗೆ ನೆರವಾಗುತ್ತದೆ. ಪ್ರೆಸಿಷನ್‌ ಮ್ಯಾನುಫೆಕ್ಚರಿಂಗ್‌, ಏರೋಸ್ಪೇಸ್‌ ಮತ್ತು ಡಿಫೆನ್ಸ್‌, ನವೀಕರಿಸಬಹುದಾದ, ಗ್ರಾಹಕರ ಬಳಕೆ ಎಲೆಕ್ಟ್ರಾನಿಕ್ಸ್‌, ತೈಲ ಮತ್ತು ಅನಿಲ, ಹಾಗೂ ಗ್ರಾಹಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಉದ್ಯಮಗಳಿಗೆ ಉತ್ಪಾದನಾ ಪರಿಹಾರಗಳನ್ನು ಝೆಟ್‌ವರ್ಕ್‌ ಒದಗಿಸುತ್ತದೆ. ಉತ್ಪನ್ನಗಳ  ತ್ವರಿತ ಉತ್ಪಾದನೆ, ಸ್ಪರ್ಧಾತ್ಮಕ ಬೆಲೆ ಹಾಗೂ ವಿಶ್ವ-ದರ್ಜೆಯ ಗುಣಮಟ್ಟವನ್ನು ಝೆಟ್‌ವರ್ಕ್‌ನ ಉತ್ಪಾದನಾ ಸರಣಿಯು ಖಾತ್ರಿಪಡಿಸುತ್ತದೆ. ಉತ್ಪಾದನಾ ಪಾಲುದಾರರ ಅನುಕೂಲಕ್ಕಾಗಿ ಉತ್ಪಾದನಾ ಸಾಮರ್ಥ್ಯಗಳನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುವ ಜೊತೆಗೆ, ಪಾಲುದಾರ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಳ ಮಾಡಿಕೊಳ್ಳಲು ಮತ್ತು ಉತ್ಪಾದನಾ ವೆಚ್ಚವನ್ನು ನಿರ್ವಹಿಸಲು ವೈವಿಧ್ಯಮಯ ಪೋರ್ಟ್‌ಫೋಲಿಯೋ ಸೇವೆಗಳನ್ನು (ಲಾಜಿಸ್ಟಿಕ್ಸ್‌, ಕಚ್ಚಾ ಸಾಮಗ್ರಿಗಳ ಸಂಗ್ರಹ, ವರ್ಕಿಂಗ್‌ ಕ್ಯಾಪಿಟಲ್‌ ರೀತಿಯ) ಒದಗಿಸುತ್ತದೆ.
ಸ್ಮೈಲ್‌ ಎಲೆಕ್ಟ್ರಾನಿಕ್ಸ್‌ ಬಗ್ಗೆ
ಝೆಟ್‌ವರ್ಕ್‌ ಬೆಂಬಲ ಹೊಂದಿರುವ ಸ್ಮೈಲ್‌ ಎಲೆಕ್ಟ್ರಾನಿಕ್ಸ್‌ ಒಂದು, ವಿಶೇಷವಾದ ಹೈಟೆಕ್ ಒಡಿಎಂ ಮತ್ತು ಒಇಎಂ ಪರಿಹಾರಗಳ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿದೆ. ಅತ್ಯಾಧುನಿಕ ಪರಿಹಾರಗಳು ಮತ್ತು ನಿರಂತರ ಸುಧಾರಣೆಯನ್ನ ಅನುಸರಿಸುವ ನಿಟ್ಟಿನಲ್ಲಿ ಮೊದಲ ಶ್ರೇಣಿಯ (ಟೈರ್‌-ಒನ್‌) ನಾಯಕನಾಗುವುದು ಸ್ಮೈಲ್‌ನ ಮಹತ್ವಾಕಾಂಕ್ಷೆಯಾಗಿದೆ. ಪ್ರಮುಖ ಹಾಗೂ ಆಯ್ದ ಒಡಿಎಂಗಳು ಹಾಗೂ ಒಇಎಂಗಳಿಗೆ ಸ್ಟ್ರಾಟರ್ಜಿಕ್‌ ಪಾಲುದಾರನಾಗಲು ಸಂಸ್ಥೆಯು ಬದ್ಧವಾಗಿದೆ. ಸಾಟಿಯಿಲ್ಲದ ಬೆಂಬಲ ಮತ್ತು ಸಮಗ್ರವಾಗಿರುವ ಒನ್‌-ಸ್ಟಾಪ್‌ ಪರಿಹಾರಗಳನ್ನು ಒದಗಿಸುವ ಸ್ಮೈಲ್‌, ತನ್ನ ಕ್ಲೈಂಟ್‌ಗಳ ಅತ್ಯುತ್ತಮ ಔದ್ಯಮಿಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಮತ್ತು, ಪರಿಕಲ್ಪನೆಗಳನ್ನು ವಾಸ್ತವಕ್ಕೆ ಸ್ಪಷ್ಟವಾಗಿ ಪರಿವರ್ತಿಸುತ್ತದೆ. ತನ್ನ ವೈಟ್‌ ಗೂಡ್ಸ್‌ ಆಂಡ್‌ ಕನ್ಸ್ಯೂಮರ್‌ ದ್ಯೂರಬಲ್ಸ್‌, ಐಸಿಟಿ ಹಾರ್ಡ್‌ವೇರ್‌, ಎನರ್ಜಿ ಆಂಡ್‌ ಪವರ್‌ ಮೀಟರ್ಸ್‌, ಹಾಗೂ ಇಂಡಸ್ಟ್ರಿಯಲ್‌ (ಏರೋಸ್ಪೇಸ್‌ & ಡಿಫೆನ್ಸ್‌, ಆಟೋಮೋಟಿವ್‌) ಎಂಬ ನಾಲ್ಕು ಪ್ರಮುಖ ಉದ್ಯಮಗಳಲ್ಲಿ 750 ಮಂದಿ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಖಂಡಗಳಲ್ಲಿನ ಒಟ್ಟು ಮೂರು ರಾಷ್ಟ್ರಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿರುವ ಸ್ಮೈಲ್‌ ಎಲೆಕ್ಟ್ರಾನಿಕ್ಸ್‌, ಶೇ.90ರಷ್ಟು ಲೋ-ಮಿಕ್ಸ್‌, ಹೈ-ವಾಲ್ಯೂಮ್‌ ಉತ್ಪನ್ನಗಳನ್ನು ಮತ್ತು ಶೇ.10ರಷ್ಟು ಹೈ-ಮಿಕ್ಸ್‌, ಲೋ-ವಾಲ್ಯೂಮ್‌ ಉತ್ಪನ್ನಗಳನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *