Thursday, 11th August 2022

15ನೇ ಘಟಿಕೋತ್ಸವ: 72 ಮಂದಿಗೆ ಡಾಕ್ಟರೇಟ್ ಪ್ರದಾನ

ರಂಗನಾಥ ಕೆ.ಮರಡಿ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಜು.5ರಂದು ನಡೆಯಲಿದ್ದು, 72 ಮಂದಿಗೆ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ಕಲಾವಿಭಾಗದ 30, ವಿಜ್ಞಾನ ವಿಭಾಗದ 23 ಮತ್ತು ವಾಣಿಜ್ಯ ವಿಭಾಗದ 19 ಮಂದಿ ಪಿಹೆಚ್‌ಡಿ ಪದವಿ ಪಡೆಯುವರು. ಪ್ರಭಾರ ಕುಲಪತಿ ಪ್ರೊ.ಕೇಶವ ನೇತೃತ್ವದಲ್ಲಿ ನಡೆಯು ತ್ತಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು 11 ಮಂದಿಯ ಪೈಕಿ ಜೂ.29 ರಂದು ನಡೆದ ಸಭೆಯಲ್ಲಿ 4 ಮಂದಿಯ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ.
ಅತಿಥಿಗಳಾಗಿ ಯುಜಿಸಿ ಸದಸ್ಯೆ ಉಪಸ್ಥಿತಿ: ಘಟಿಕೋತ್ಸವದಲ್ಲಿ ಛತ್ತಿಸಗಡ ಸೆಂಟ್ರಲ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ಪ್ರಸ್ತುತ ಯುಜಿಸಿ ಸದಸ್ಯೆಯಾದ ಸುಷ್ಮಾ ಯಾದವ್ ಅವರು ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿ ದ್ದಾರೆ ಎಂದು ಸಿಂಡಿಕೇಟ್ ಸದಸ್ಯರು ತಿಳಿಸಿದ್ದಾರೆ.
ರಾಜ್ಯಪಾಲರ ಅಂಗಳಕ್ಕೆ ಆಕಾಂಕ್ಷಿಗಳ ಹೆಸರು
ತುಮಕೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿ ನೇಮಕಾತಿ ಸಂಬಂಧ ಸರಕಾರ ಮೂರು ಮಂದಿ ಹೆಸರನ್ನು ಅಂತಿಮವಾಗಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದೆ. ಆದರೆ ರಾಜ್ಯಪಾಲರು ಹೆಸರನ್ನು ಅಂತಿಮಗೊಳಿಸದ ಕಾರಣ ನೇಮಕಾತಿ ನನೆಗುದಿಗೆ ಬಿದ್ದಿದೆ. ಕುಲಪತಿ ನೇಮಕಾತಿ ತಡವಾಗಿರುವ ಕಾರಣ  ವಿಶ್ವವಿದ್ಯಾನಿಲಯದಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ.