Tuesday, 29th September 2020

ಅಸಾಧ್ಯವೆಂದು ಕೈ ಚೆಲ್ಲದಿರೋಣ !

ಎಂತಹದೇ ಸಮಸ್ಯೆೆ ಬಂದರೂ, ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಕೆಲಸ
ಮಾಡುತ್ತಲೇ ಇರುವುದು ಯಾವಾಗಲೂ ಮುಖ್ಯ.

ಶಿವಕುಮಾರ್ ಹೊಸಂಗಡಿ

ಒಂದು ದಟ್ಟ ಕಾನನದ ಮಧ್ಯೆ ವ್ಯಕ್ತಿಯೊಬ್ಬ ತನ್ನ ಸಾಕು ಕತ್ತೆಯೊಂದಿಗೆ ಸಾಗುತ್ತಿದ್ದ ಸಂದರ್ಭ. ದಾರಿಯ ಪಕ್ಕದಲ್ಲಿದ್ದ ಆಳದ ಗುಂಡಿಯೊಂದರಲ್ಲಿ ಕತ್ತೆ ಆಯತಪ್ಪಿ ಬಿದ್ದು, ಮೇಲೆ ಬರಲು ಒದ್ದಾಡಲು ಆರಂಭಿಸುತ್ತದೆ. ಎಷ್ಟೇ ಕಷ್ಟಪಟ್ಟರೂ, ಮೇಲೇರಲು ಸಾಧ್ಯವಾಗುವುದಿಲ್ಲ. ಆದರೂ ತನ್ನ ಪ್ರಯತ್ನ ಬಿಡದೇ ಮೇಲೆ ಹತ್ತಲು ಹರ ಸಾಹಸ ಮಾಡುತ್ತಿತ್ತು.

ಇದನ್ನು ಕಂಡ ವ್ಯಕ್ತಿ ಹೇಗಾದರೂ ಮಾಡಿ ಅದನ್ನು ಮೇಲಕ್ಕೆತ್ತಬೇಕು ಎಂದಾಲೋಚಿಸಿದ. ಆದರೆ ಒಬ್ಬನಿಂದಲೇ ಆ ಕೆಲಸ ಕಷ್ಟ. ಆ ಸುತ್ತಲೂ ದಟ್ಟ ಕಾಡು, ನಿರ್ಜನ ಪ್ರದೇಶ. ಜನರ ಸುಳಿವೂ ಇಲ್ಲ, ಏನೊಂದು ಸೌಲಭ್ಯವೂ ಸಿಗದು. ಹೇಗೋ ತನ್ನಿಂದಾದ ಪ್ರಯತ್ನ ನಡೆಸಿ, ನಡೆಸಿ, ಆಯಾಸಪಟ್ಟು, ಆ ಎಲ್ಲಾ ಪರಿಶ್ರಮದಿಂದ ಎಳ್ಳಷ್ಟೂ ಉಪಯೋಗ ಕಾಣದೇ ಅಸಹಾಯಕನಾಗುತ್ತಾನೆ. ಕತ್ತಲಾಗುತ್ತಾ ಬಂತು. ತನ್ನ ಕೈಯಾರೆ ಸಾಕಿ ಸಲಹಿದ ಕತ್ತೆಯನ್ನು ಬಿಟ್ಟು ತೆರಳಲು ಮನಸ್ಸು ಬಾರದಾಯಿತು. ಹಾಗಂತ ಹೆಚ್ಚು ಸಮಯ ಇಲ್ಲೇ ಇದ್ದರೇ ಅಪಾಯದ ಸಾಧ್ಯತೆ. ಕತ್ತಲಿನಲ್ಲಿ ಆ ನಿರ್ಜನ ಪ್ರದೇಶದಲ್ಲಿ ಅಪಾಯವು ಯಾವ ಸ್ವರೂಪದಲ್ಲಿ ಬರಬಹುದೋ ತಿಳಿಯದು. ಹೀಗೆ ಬಿಟ್ಟು ಹ ಓದರೆ, ಕತ್ತೆಯು ಯಾವುದಾದರೂ ಕಾಡು ಪ್ರಾಣಿಗೆ ಆಹಾರವಾಗಬಹುದು ಎಂದು ಯೋಚಿಸಿ, ಆ ವ್ಯಕ್ತಿ ಒಂದು ಯೋಚನೆ ಮಾಡಿದ.

ಇದು ಯಾವುದಾದರೂ ಹುಲಿಗೋ, ಕಿರುಬಕ್ಕೋ ಆಹಾರವಾಗಿ, ನರಳಿ ನರಳಿ ಸಾಯುವ ಬದಲು, ತಾನೇ ಇದನ್ನು ಜೀವಂತ ಸಮಾಧಿ ಮಾಡೋಣವೆಂದುಕೊಂಡ. ಪಕ್ಕದಲ್ಲಿ ಬಿದ್ದಿದ್ದ ಕಲ್ಲಿನ ರಾಶಿಯಿಂದ ಕಲ್ಲನ್ನು, ಮತ್ತು ಹತ್ತಿರ ಲಭ್ಯವಿದ್ದ ಮಣ್ಣನ್ನು ಎತ್ತಿ ಆ ಹೊಂಡಕ್ಕೆ ಸುರಿಯಲಾರಂಭಿಸಿದ. ಜತೆಗೆ ಅಲ್ಲಿ ಹರಡಿದ್ದ ಕೋಲು, ಸೌದೆ, ಸೊಪ್ಪುಗಳನ್ನು ಆ ಹೊಂಡಕ್ಕೆ ತುಂಬತೊಡ ಗಿದೆ. ಅದೇನಾಶ್ಚರ್ಯ! ಹೊಂಡದಲ್ಲಿ ನಿಧಾನವಾಗಿ ತುಂಬುತ್ತಿದ್ದ ಕಲ್ಲು, ಮಣ್ಣು, ಸೌದೆಗಳ ಮೇಲೆ ಕತ್ತೆ ಹತ್ತಿ ನಿಲ್ಲತೊಡಗು ತ್ತದೆ. ಈತ ಎಸೆದ ಕಸ, ಮಣ್ಣುಗಳೇ ಆ ಕತ್ತೆಗೆ ವರದಾನವಾಗಿ ಪರಿಣಮಿಸುತ್ತದೆ.

ಹೊಂಡ ತುಂಬುತ್ತಿದ್ದಂತೆ, ಕತ್ತೆಯೂ ಸಹ ನಿಧಾನವಾಗಿ ಮೇಲಕ್ಕೆ ಮೇಲಕ್ಕೆ ಏರಲಾರಂಭಿಸಿತು! ಆ ವ್ಯಕ್ತಿಗೆ ನಿಜಕ್ಕೂ ಆಶ್ಚರ್ಯ ವಾಗಿತ್ತು. ಬೆಳಗಿನಿಂದ ಎಷ್ಟೆೆಲ್ಲಾ ಪ್ರಯತ್ನ ಪಟ್ಟರೂ, ನನ್ನಿಂದ ಸಾಧ್ಯವಾಗಲಿಲ್ಲ, ಆದರೆ ಈಗ, ಕತ್ತಲಾಗುವ ಸಮಯಕ್ಕೆ ಕತ್ತೆಯನ್ನು ಮೇಲಕ್ಕೆ ಎತ್ತಲು ಸಾಧ್ಯ ವಾಯಿತಲ್ಲಾ ಎಂದು ಬಹಳ ಸಂತಸಪಟ್ಟ. ಹೊಂಡದಿಂದ ಮೇಲಕ್ಕೇರಿ ಬಂದ ಕತ್ತೆಯನ್ನು ಕರೆದುಕೊಂಡು, ಮನೆಯತ್ತ ಹೆಜ್ಜೆ ಹಾಕಿದ.

ಈ ರೀತಿಯ ಸಂದಿಗ್ಧತೆ, ವಿಷಮ ಸ್ಥಿತಿ ಹಲವುಸಾರಿ ನಮ್ಮ ಜೀವನದಲ್ಲೂ ಎದುರಾಗುತ್ತದೆ. ನಮಗೆ ಅನ್ನಿಸಿ ಬಿಡುತ್ತದೆ, ನನ್ನಿಂದ ಎನೂ ಸಾಧ್ಯವಾಗದು, ಇಂತಹ ಸಮಸ್ಯೆೆಗೆ ಪರಿಹಾರವನ್ನು ಹುಡುಕಲು ನನ್ನಿಂದ ಅಸಾಧ್ಯ ಎಂಬ ಹತಾಶೆಯ ಭಾವನೆ. ಅದೇ ಸಮಯದಲ್ಲಿ ಬಗೆ-ಬಗೆಯ ಕೆಟ್ಟ ಆಲೋಚನೆಗಳು ಪುಟಿದೇಳುತ್ತದೆ. ಆದರೆ, ನಿಜವಾಗಿಯೂ ನೋಡಿದರೆ, ನಮ್ಮ ಜೀವನದ ಎಲ್ಲಾ ಕಷ್ಟಕ್ಕೂ, ಸಮಸ್ಯೆಗೂ ಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ. ನಮ್ಮಿಂದ ಸಾಧ್ಯವಿಲ್ಲ ಎಂದು ನಿರಾಸೆಗೆ, ಖಿನ್ನತೆ ಒಳಗಾಗುವ ಬದಲು, ಪ್ರಯತ್ನವೆಂಬ ಜೀವಂತಿಕೆಯನ್ನು, ಸಕಾರಾತ್ಮಕ ಚಿಂತನೆಯನ್ನು ಜಾರಿಯಲ್ಲಿರಬೇಕು.

ಏನಾದರೂ ಆಗಲಿ, ಒಳ್ಳೆಯ ಉದ್ದೇಶದಿಂದ ಪ್ರಯತ್ನ ಮಾಡುವುದನ್ನು ಮುಂದುವರಿಸುತ್ತಲೇ ಇರಬೇಕು. ಒಂದಲ್ಲ ಒಂದು ಮಾರ್ಗವನ್ನು ಹುಡುಕಲು, ಬಲ್ಲವರಿಂದ ಕೇಳಿ ತಿಳಿಯಲು ಸದಾ ಸಿದ್ಧರಾಗಿರಬೇಕು. ಆಯಾಸ ಎನಿಸಿದರೂ, ಸೂಕ್ತ ಮಾರ್ಗ ದರ್ಶನ ಪಡೆದು, ಸಮಸ್ಯೆೆಯಿಂದ ಹೊರಬರಲು ನಿರಂತರ ಪ್ರಯತ್ನ ಚಾಲೂ ಇಡಬೇಕು. ಒಂದಲ್ಲಾ ಒಂದು ದಿನ ಫಲ ಖಂಡಿತ ವಾಗಿಯೂ ಪ್ರಾಪ್ತಿಯಾಗುತ್ತದೆ. ಅದೇ ಜೀವನದ ಟರ್ನಿಂಗ್ ಪಾಯಿಂಟ್ ಆಗಿ ಬದಲಾವಣೆಯಾಗಬಹುದು!

ನಮ್ಮ ದಾರಿಯಲ್ಲಿ ಕವಲುಗಳು ಹಲವಾರು ಇವೆ, ಪ್ರಯತ್ನ ಮತ್ತು ಆತ್ಮವಿಶ್ವಾಸ ವಿದ್ದರೆ ಎನು ಬೇಕಾದರೂ ಸಾಧಿಸಬಹುದು. ಹೋಟೇಲ್‌ನಲ್ಲಿ ಪ್ರತಿದಿನ ಮರುಗುತ್ತಾ ಲೋಟ ಕ್ಲೀನ್ ಮಾಡುತ್ತಿದ್ದ ಹುಡುಗರು, ಕಷ್ಟಪಟ್ಟು ಮುಂದೆ ಬಂದು, ಈಗ ಅದೇಷ್ಟೋ ಹೋಟೇಲ್‌ಗಳ ಮಾಲೀಕರಾದ ಉದಾಹರಣೆಗಳಿವೆ. ಲಾರಿ ಚಾಲಕರಾಗಿದ್ದ ವರು ಇದೀಗ ಹಲವು ಲಾರಿಗಳ ಒಡೆಯರಾಗಿ, ಯಶಸ್ವೀ ಉದ್ದಿಮೆದಾರರಾದ ನಿದರ್ಶನ ನಮ್ಮ ಮುಂದೆ ಇದೆ ಅಲ್ಲವೇ? ಸೋಲು ಅಥವಾ ನಷ್ಟವಾಗಿದೆ ಎಂದು ಮರುಗುವ ಬದಲು, ಇಂತಹ ಸನ್ನಿವೇಶದಿಂದ ಹೊರಬರಲು ಸಾಧ್ಯ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ನಮ್ಮಿಂದ ಸಾಧ್ಯವಾಗದ ವಿಷಯ ಯಾವುದೂ ಇಲ್ಲ ಎಂಬ ಮನೋಭಾವನೆ ನಮ್ಮಲ್ಲಿ ಬೆಳೆದರೆ, ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ.

Leave a Reply

Your email address will not be published. Required fields are marked *