Friday, 7th May 2021

ಸಂಘ ಸಂಸ್ಥೆಗಳ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ 130ನೇ ಜಯಂತಿ ಆಚರಣೆ

ಶಿರಸಿ : ಶಿರಸಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಶಿರಸಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ,ಪಂಗಡಗಳ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ 130 ನೇ ಜಯಂತಿ ಯನ್ನು ಸರಳವಾಗಿ ಆಚರಿಸಲಾಯಿತು.

ಇಲ್ಲಿನ ಅಂಬೇಡ್ಕರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಅಂಬೇಡರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಆರತಿ ಬೆಳಗುವ ಮೂಲಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಡಾ.ಅಂಬೇ ಡ್ಕರ ಅವರು ಕೊಟ್ಟಂತಹ ಬಹಳ ದೊಡ್ಡ ಕೊಡುಗೆ ಸ್ವಾಭಿಮಾನ ಜಾಗೃತಿ ಮಾಡಿರುವುದು. ಶೋಷಿತ ಸಮುದಾಯಕ್ಕೆ ಸ್ವಾಭಿ ಮಾನದ ಬದುಕು ನೀಡಲು ಬೇಕಾದ ನೇತೃತ್ವ ನೀಡಿದರು. ಅದಕ್ಕೆ ಅವರ ವ್ಯಕ್ತಿತ್ವ ಕಾರಣವಾಗಿದ್ದು, ಅವರು ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ ಎಂದರು.

ಅಂಬೇಡ್ಕರ ಅವರು ರಚಿಸಿದ ಸಂವಿಧಾನದಿಂದ ಸಾಮಾನ್ಯರಲ್ಲಿ ಸಾಮಾನ್ಯರು ಅತ್ಯುತ್ತಮ ಸ್ಥಾನಕ್ಕೆ ಏರಲು ಅವಕಾಶ ನೀಡಲಾ ಗಿದೆ. ಅದು ಸಂವಿಧಾನ ಕೊಡುಗೆಯಾಗಿದೆ. ಜಗತ್ತು ಕಂಡ ಶ್ರೇಷ್ಠ ಸಂವಿಧಾನ ಭಾರತದ್ದಾಗಿದೆ. ಇದಕ್ಕೆ ಅಂಬೇಡ್ಕರ ಅವರು ಕಾರಣರಾಗಿದ್ದು, ಅವರ ಜೀವನ ಸದಾ ಆದರ್ಶ ಎಂದರು.

ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ತಾಲೂಕಾ ಪಂಚಾಯತ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ಡಿಎಸ್ಪಿ ರವಿ ನಾಯಕ ಮುಂತಾದವರು ಇದ್ದರು. ತಹಶೀಲ್ದಾರ ಎಮ್.ಆರ್.ಕುಲಕರ್ಣಿ ಸ್ವಾಗತಿಸಿದರು.

Leave a Reply

Your email address will not be published. Required fields are marked *