Sunday, 27th November 2022

ಸಾಹಿತ್ಯ ಲೋಕ ಬಡವಾಗಿದೆ: ಡಾ.ಬಕ್ತಿಯಾರ್ ಖಾನ್ ಪಠಾಣ ಸಂತಾಪ

ಕೋಲಾರ: ಸಾಹಿತಿ ಕಾ.ಹು ಬಿಜಾಪುರ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಖಾನ್ ಕಾಯೇ ಗಫ್ಫಾರೀಯಾ ಗುರುಕುಲದ ಪೀಠಾಧಿಪತಿಗಳಾದ ಅಲ್ ಹಾಜ್ ಡಾ.ಬಕ್ತೀಯಾರ್ ಖಾನ್ ಪಠಾಣ ಸಂತಾಪ ವ್ಯಕ್ತಪಡಿಸಿ ದ್ದಾರೆ.

ಕಾ.ಹು ಬಿಜಾಪುರ ಈ ಭಾಗದ ಜಾನಪದ ಸಾಹಿತ್ಯ ಲೋಕದ ದೃವತಾರೆಯಾಗಿ ಅನೇಕ ಜಾನಪದ ಸಾಹಿತ್ಯಗಳನ್ನು ರಚಿಸಿ ಜಾನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿ ಮರೆಯಾಗಿದ್ದಾರೆ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊಲ್ಹಾರ ಖಾನ್ ಕಾಯೇ ಗಪ್ಫಾರೀಯಾ ಗುರುಕುಲದಿಂದ ಕೊಡಮಾಡುವ ಪ್ರತಿಷ್ಠಿತ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿಯನ್ನು ೨೦೦೯ ರಲ್ಲಿ ಕಾ.ಹು ಬಿಜಾಪುರ ಅವರು ಪಡೆದಿದ್ದನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿಕೊಂಡರು.