Tuesday, 9th August 2022

ಬ್ಲಾಕ್ ಫಂಗಸ್: ರಾಜ್ಯಕ್ಕೆ 10 ಸಾವಿರ ವಯಲ್ಸ್ ಪೂರೈಕೆ- ಡಾ.ಕೆ. ಸುಧಾಕರ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು, ಬ್ಲಾಕ್ ಫಂಗಸ್ ಗೆ ರಾಜ್ಯಕ್ಕೆ ಔಷಧ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

8 ಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ 80,000 ವಯಲ್ಸ್ ಮಾರುಕಟ್ಟೆಗೆ ಬಂದಿದೆ. ರಾಜ್ಯಕ್ಕೆ 8 -10 ಸಾವಿರ ವಯಲ್ಸ್ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 1250 ಬ್ಲಾಕ್ ಫಂಗಸ್ ಪ್ರಕರಣಗಳಿದ್ದು, ಸುಮಾರು 30ರಿಂದ 35 ಮಂದಿ ಮೃತಪಟ್ಟಿರುವ ಮಾಹಿತಿ ಇದೆ. ಡೆತ್ ಆಡಿಟ್ ನಿಖರವಾದ ಮಾಹಿತಿಗೆ ಸೂಚನೆ ನೀಡಿದ್ದೇನೆ. ಬ್ಲಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.