Tuesday, 9th August 2022

ಡಾ.ಸಂಗನಬಸವ ಸ್ವಾಮೀಜಿ ಲಿಂಗೈಕ್ಯ: ಅಂತಿಮ ದರ್ಶನಕ್ಕೆ ಸಿದ್ಧತೆ

ಹೊಸಪೇಟೆ ಕೊಟ್ಟೂರು ಮಠ

ಹೊಸಪೇಟೆ: ಹೊಸಪೇಟೆಯ ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ‌. ಸಂಗನ ಬಸವ ಮಹಾಸ್ವಾಮಿಗಳು ಲಿಂಗೈಕ್ಯ ಹಿನ್ನಲೆ ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆದಿದ್ದು, ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದು, ಮಧ್ಯಾಹ್ನ 2-30 ಕ್ಕೆ ಹೊಸಪೇಟೆ ತಲುಪಲಿದೆ.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯದಿಂದ ಮೆರವಣಿಗೆ ಮಾಡಿಕೊಂಡು ಆಗಮಿಸಲಾಗುತ್ತದೆ. ಮಠದಲ್ಲಿ ಎರಡು ಗಂಟೆ ಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಗದಗನ ಹಾಲಕೇರೆ ಮಠಕ್ಕೆ ತೆರಳಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ವೀರಶೈವ- ಲಿಂಗಾಯತ ಸಮುದಾಯದ ಕಾರ್ಯದರ್ಶಿ ರವಿಶಂಕರ್ ಮತ್ತು ಶ್ರೀ ಮಠದ ಕಾರ್ಯದರ್ಶಿ ಸಾಲಿ ಸಿದ್ಧಯ್ಯ ಸ್ವಾಮಿಗಳು ಹೇಳಿದ್ದಾರೆ.