Thursday, 3rd December 2020

ದೂರವಾಣಿ ಕದ್ದಾಲಿಕೆ ಕಾಲದಿಂದ ಕಾಲಕ್ಕೆ ಎಬ್ಬಿಸುವ ಹವಾ

ರಮಾನಂದ ಶರ್ಮಾ


ಪ್ರಚಲಿತ

ಕರ್ನಾಟಕದ ಮಾಜಿ ಮುಖ್ಯಮಂತ್ರಿಿ ದಿ.ರಾಮಕೃಷ್ಣ ಹೆಗಡೆಯವರು 1988ರಲ್ಲಿ ದೂರವಾಣಿ ಕದ್ದಾಲಿಕೆ ವಿವಾದದಲ್ಲಿ ಸಿಲುಕಿಕೊಂಡು ಮುಖ್ಯ ಮಂತ್ರಿಿ ಪದವನ್ನು ತ್ಯಜಿಸುವ ಸಂಕಷ್ಟಕ್ಕೆೆ ಒಳಗಾಗುವವರೆಗೆ, ದೂರವಾಣಿ ಕದ್ದಾಲಿಕೆ *(ಠಿಛ್ಝಿಿಛಿಟ್ಞಛಿ ಠಿಜ್ಞಿಿಜ) ಅಂಥ ಗಹನ ವಿಷಯವಾಗಿರಲಿಲ್ಲ. ಯಾರಿಗೂ ಅದರ ಬಗೆಗೆ ಅಷ್ಟಾಾಗಿ ತಿಳಿದಿರಲಿಲ್ಲ. ಅಲ್ಲಿಯವರೆಗೆ ಅದು ಒಂದು ಗುಮಾನಿ ಮಾತ್ರ ಆಗಿತ್ತು ಮತ್ತು ರಾಜಕಾರಣಿಗಳು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಎಸೆಯುವ ಹಲವಾರು ಆರೋಪದ ಅಸ್ತ್ರಗಳಲ್ಲಿ ಒಂದಾಗಿತ್ತು ಎನ್ನುವ ಭಾವನೆ ಇತ್ತು. ಹೆಚ್ಚಾಾಗಿ ವಿರೋಧ ಪಕ್ಷದವರು ಆಡಳಿತ ಪಕ್ಷದ ಮೇಲೆ ಇಂಥ ಆರೋಪ ಮಾಡುವುದು ತೀರಾ ಸಾಮಾನ್ಯ ಮತ್ತು ಜನತೆ ಇದರ ಬಗೆಗೆ ಹೆಚ್ಚಿಿನ ತಲೆ ಕೆಡಿಸಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಅದು ಈ ರೀತಿ ಆಗುತ್ತದೆ ಎನ್ನುವ ಪರಿಕಲ್ಪನೆ ಕೂಡಾ ಯಾರಿಗೂ ಇರಲಿಲ್ಲ. ಈ ಘಟನೆಯ ನಂತರದ ದಿನಗಳಲ್ಲಿ ಮಾಧ್ಯಮದವರು ಈ ಕದ್ದಾಲಿಕೆಯ ಬ್ರಹ್ಮಾಾಂಡವನ್ನು ವಿಸ್ತೃತವಾಗಿ ಬಿಚ್ಚಿಿಟ್ಟದ್ದು, ಅದರ ಹಿನ್ನೆೆಲೆ, ಉದ್ದೇಶ, ಪರಿಣಾಮ ಮತ್ತು ಅದಕ್ಕೆೆ ಸುತ್ತಿಿಕೊಂಡಿರುವ ಕಾನೂನಿನ ಜಟಿಲತೆ ಸಾರ್ವಜನಿಕ ಚರ್ಚೆಯ ವಿಷಯವಾಯಿತು.

ರಾಮಕೃಷ್ಣ ಹೆಗಡೆಯವರ ಜನಪ್ರಿಿಯತೆಯನ್ನು ಸಹಿಸದ ಮತ್ತು ಅವರು ರಾಜಕೀಯದಲ್ಲಿ ಕೆಂಪು ಕೋಟೆಯನ್ನು ತಲುಪಬಹುದು ಎಂದು ಊಹಿಸಿದ ಕೆಲವು ಹಿತಾಸಕ್ತರು ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಈ ದೇಶದ ಭಾರೀ ರಾಜಕೀಯ ದುರಂತವೆನ್ನುವಂತೆ, ಅವರು ಯಾರೂ ಮಾಡದ ಅಪರಾಧವನ್ನು ಮಾಡಿದ್ದಾರೆ ಎನ್ನುವಂತೆ, ಸಂವಿಧಾನಕ್ಕೆೆ ಅಪಚಾರ ಮಾಡಿದಂತೆ, ಜನರ ಖಾಸಗಿ ಬದುಕಿಗೆ ಅವಮಾನ ಮಾಡಿದಂತೆ, ಹೀನ ಕೃತ್ಯವನ್ನುಎಸಗಿದ್ದಾರೆ ಎನ್ನುವಂತೆ ಬಿಂಬಿಸಿದರು. ತಮ್ಮ ರಾಜಕೀಯ ಕಡುವೈರಿಯನ್ನು ಹಳಿಯಲು ಮತ್ತು ಮಟ್ಟ ಹಾಕಲು ಇದೇ ಸುಸಮಯ ಮತ್ತು ಸರಿಯಾದ ಕಾರಣ ವೆಂದು ಡಾ.ಸುಬ್ರಮಣ್ಯಂ ಸ್ವಾಾಮಿ ಇವರ ಜೊತೆಗೂಡಿದರು. ದೂರವಾಣಿ ಕದ್ದಾಲಿಕೆಯನ್ನು ರಾಷ್ಟ್ರದ ಉದ್ದಗಲದಲ್ಲಿ ರಾಷ್ಟ್ರೀಯ ದುರಂತ ಎನ್ನುವಂತೆ ದೊಡ್ಡ ಸುದ್ದಿ ಮಾಡಿದರು. ಕದ್ದಾಲಿಕೆ ವಿರುದ್ದ ಜಾಗೃತಿ ಉಂಟುಮಾಡಿದರು. ರಾಮಕೃಷ್ಣ ಹೆಗಡೆಯವರು ಒಂದೇ ಒಂದು ನಿಮಿಷ ಮುಖ್ಯಮಂತ್ರಿಿ ಖುರ್ಚಿಯಲ್ಲಿ ಕೂರಬಾರದೆಂದು ಅಭಿಯಾನ ಮಾಡಿದರು ಮತ್ತು ನ್ಯಾಾಯಾಲಯದ ಮೊರೆಹೋಗಲು ಸಿದ್ಧತೆ ಕೂಡಾ ಮಾಡಿದ್ದರು.

ಅವರು ಮಾಡಿದ ಕೃತ್ಯ ಜನರಿಗೆ ಸಂವಿಧಾನದ ನೀಡಿದ ಖಾಸಗಿತನದ ಹಕ್ಕಿಿನ*(್ಟಜಿಜಠಿ ಠಿಟ ್ಟಜ್ಚಿ) ಉಲ್ಲಂಘನೆ ಎಂದು ಬೊಬ್ಬೆೆ ಹೊಡೆದರು. ಇದು ಖಾಸಗಿತನದ ಹಕ್ಕಿಿನ ಉಲ್ಲಂಘನೆ, ಅನಾಗರಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ಇನ್ನು ಜನರಿಗೆ ಖಾಸಗಿ ಬದುಕು ಇಲ್ಲ ಎಂದು ಆಕಾಶದೆತ್ತರಕ್ಕೆೆ ಕೂಗಾಡಿದರು. ಆಧಿಕಾರ ವ್ಯಾಾಮೋಹಿ ಯಾಗಿರದ ಮತ್ತು ಖುರ್ಚಿ ಆಸೆ ಇಲ್ಲದ ರಾಮಕೃಷ್ಣ ಹೆಗಡೆಯವರು ವಿವಾದವನ್ನು ಹೆಚ್ಚಿಿಗೆ ಎಳೆಯದೇ, ಮುಖ್ಯಮಂತ್ರಿಿ ಪದವಿಗೆ ರಾಜೀನಾಮೆ ಎಸೆದು ಕಾವೇರಿದ್ದ ರಾಜಕೀಯವನ್ನು ತಣ್ಣಗಾಗಿಸಿದರು. ವಿಪರ್ಯಾಸ ಎಂದರೆ, ಡಾ. ಸುಬ್ರಮಣ್ಯಂ ಸ್ವಾಾಮಿಯವರು ಆ ನಂತರ ಈವರೆಗೆ ದೇಶದಲ್ಲಿ ನಡೆದ ಇಂಥಹ ಯಾವುದೇ ದೂರವಾಣಿ ಪ್ರಕರಣದಲ್ಲಿ ಮೂಗು ತೂರಿಸಿಲ್ಲ.

ಪ್ರಚಲಿತ ಕಾನೂನು ಮತ್ತು ಸಂವಿಧಾನದ ಪ್ರಕಾರ, ನೈತಿಕತೆಯ ದೃಷ್ಟಿಿಯಲ್ಲಿ ರಾಮಕೃಷ್ಣ ಹೆಗಡೆಯವರ ಕೃತ್ಯವನ್ನು ತಪ್ಪುು ಎನ್ನಬಹುದು. ಆದರೆ, ಅವರು ಯಾರೂ ಮಾಡದ್ದನ್ನು ಮಾಡಿದ್ದಾರೆಯೇ ಎನ್ನುವುದು ಮೂಲಭೂತ ಪ್ರಶ್ನೆೆ. ಅಧಿಕಾರದಲ್ಲಿ ಇರುವವರು ದೂರವಾಣಿ ಕದ್ದಾಲಿಕೆ ಮಾಡುವುದು ತೀರಾ ಸಾಮಾನ್ಯ. ಅವರು ತಮ್ಮ ಖುರ್ಚಿಯನ್ನು ಉಳಿಸಿ ಕೊಳ್ಳಲು ತಮ್ಮ ರಾಜಕೀಯ ವೈರಿಗಳ ಮೇಲೆ, ಅವರ ಚಟುವಟಿಕೆಗಳ, ಚಲನವಲನಗಳ ಮೇಲೆ ಒಂದು ಕಣ್ಣನ್ನು ಇಡಲೇಬೇಕು. ಅಂತೆಯೇ ಅವರು ತಮ್ಮ ವಿರೋಧಿಗಳ ಫೋನ್ ಕರೆಗಳ ಮೇಲೆ ಅನಧಿಕೃವಾಗಿ ನಿಗಾ ಇಡುತ್ತಾಾರಂತೆ. ಈ ಘನಕಾರ್ಯಕ್ಕಾಾಗಿ ತಮ್ಮ ಕೆಳಗಿನ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಾಾರಂತೆ.ಇದು ಗೌಪ್ಯವಾಗಿ ನಡೆಯುವ ಕೆಲಸ. ಇದನ್ನು ಯಾರೂ ಬಾಯಿ ಬಿಟ್ಟು ಹೇಳುವುದಿಲ್ಲ. ಪಡೆದ ಮಾಹಿತಿಯನ್ನು ತಮ್ಮ ಅನುಕೂಲಕ್ಕೆೆ ತಕ್ಕಂತೆ ಬಳಸಿಕೊಳ್ಳುತ್ತಾಾರೆ. ರಾಮಕೃಷ್ಣ ಹೆಗಡೆಯವರ ಪ್ರಕರಣದಲ್ಲಿ ಇದು ಮಾಧ್ಯಮಕ್ಕೆೆ ಸೋರಿಕೆಯಾಗಿ ರಾದ್ಧಾಾಂತವಾಯಿತು. ಒಂದೆರಡು ಮಾಧ್ಯಮಗಳು ಮತ್ತು ಕೆಲವು ಪ್ರಭಾವಿ ಪತ್ರಕರ್ತತರ ಅತಿಯಾದ ಅಸಕ್ತಿಿ ಈ ವಿವಾದಕ್ಕೆೆ ಕಾರಣವಾಯಿತೆಂದು ಹೇಳಲಾಗುತ್ತದೆ. ಕದ್ದಾಲಿಕೆಗಿಂತ ಅದು ಸೋರಿಕೆಯಾಗಿದ್ದು ದೊಡ್ಡ ಅವಾಂತರಕ್ಕೆೆ ಕಾರಣವಾಯಿತು. ಅದು ಸೋರಿಕೆಯಾಗಿರದಿದ್ದರೆ, ಇದು ವಿವಾದವೇ ಆಗುತ್ತಿಿರಲಿಲ್ಲ.

ಕದ್ದಾಲಿಕೆ ಈ ದೇಶದಲ್ಲಿ ಹೊಸ ಬೆಳವಣಿಯಲ್ಲ. ಇದು ಹಿಂದೆ ರಾಜ-ಮಹಾರಾಜರ ಕಾಲದಲ್ಲಿಯೂ ಇತ್ತು. ಆಗ, ಈಗಿನಂತೆ ದೂರವಾಣಿ ಇರಲಿಲ್ಲ. ಅವರು ಇದನ್ನು ಗೂಢಚಾರರ ಮೂಲಕ ಮಾಡುತ್ತಿಿದ್ದರು. ಇದನ್ನು ವೈರಿಗಳ ಮೇಲೆ ನಿಗಾ ಇಡುವುದರೊಂದಿಗೆ ಹಿತಶತ್ರುಗಳನ್ನು ಸದೆ ಬಡಿಯಲೂ ಉಪಯೋಗಿಸುತ್ತಿಿದ್ದರು. ಕದ್ದಾಲಿಕೆ ಪರಿಕಲ್ಪನೆ ರಾಜನೀತಿಯಲ್ಲಿ ಅಪರಾಧವೆಂದು ಪರಿಗಣಿಸುವುದಿಲ್ಲ. ಇದನ್ನು ರಾಜಕೀಯ ತಂತ್ರವೆಂದೇ ಬಣ್ಣಿಿಸುತ್ತಾಾರೆ. ಇಂಥವುಗಳು ಪ್ರತಿ ಆಫೀಸಿನಲ್ಲಿಯೂ ಇರುತ್ತಿಿದ್ದು ಅಗೋಚರವಾಗಿರುತ್ತದೆ. ಮ್ಯಾಾನೇಜರ್ ಒಬ್ಬ ತನ್ನ ಕೆಳ ಮಟ್ಟದ ಕೆಲವು ಆಪ್ತ ಸಿಬ್ಬಂದಿ ಅಥವಾ ಸಹೋದ್ಯೋೋಗಿಗಳಲ್ಲಿ ಒಬ್ಬಿಿಬ್ಬರನ್ನು ಬಳಸಿಕೊಂಡು ತನ್ನ ಕಚೇರಿಯಲ್ಲಿ ತನ್ನ ವಿರುದ್ದ ಇರುವ ಮಾಹಿತಿಗಳನ್ನು ಕಲೆ ಹಾಕಿ ನೋಡಿಕೊಳ್ಳುವುದಕ್ಕೆೆ ದೀರ್ಘ ಇತಿಹಾಸ ಇದೆ. ಇವುಗಳನ್ನೂ ಒಂದು ರೀತಿಯಲ್ಲಿ ಕದ್ದಾಲಿಕೆ ಅಥವಾ ಕದ್ದು ನೋಡುವುದು ಎಂದು ಹೇಳಬಹುದು. ಅದು ಬೇರೆ ಮಾತು.

ದೂರವಾಣಿ ಕದ್ದಾಲಿಕೆ ಪ್ರಕರಣಗಳು ಇತ್ತೀಚೆಗೆ ತೀರಾ ಸಾಮಾನ್ಯವಾಗಿದ್ದು, ಅದು ತನ್ನ ಹಿಂದಿನ ಗಂಭೀರತೆಯನ್ನು ಕಳೆದುಕೊಂಡಿದೆ. ಕೇವಲ ರಾಜಕಾರಣಿಗಳು ಈವರೆಗೆ ಈ ರೀತಿ ಆರೋಪ ಮಾಡುತ್ತಿಿದ್ದು, ಈಗ ಇದು ನೌಕರಶಾಹಿಯನ್ನೂ ತಲುಪಿದೆ. ಇತ್ತೀಚೆಗೆ ಇಂಥ ಆರೋಪ ಬೆಂಗಳೂರಿನ ನೌಕರ ಶಾಹಿಯಲ್ಲಿಯೂ ಸುದ್ದಿ ಮಾಡಿದೆ. ಆದರೆ ಯಾರೂ ಅದರ ಬಗೆಗೆ ಅಷ್ಟಾಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ರೀತಿಯಲ್ಲಿ ಅದು *್ಟಠಿ ಟ್ಛ ಠಿಛಿ ್ಝಜ್ಛಿಿಛಿ ಆದಂತೆ ಕಾಣುತ್ತಿಿದ್ದು, ನಿರಂತರವಾಗಿ ಇಂಥವು ಮಾಧ್ಯಮದಲ್ಲಿ ಕಾಣತ್ತವೆ. ಖಾಸಗಿ ಬದುಕಿನ ಹಕ್ಕಿಿನ ಉಲ್ಲಂಘನೆ, ಅಸಂವಿಧಾನಿಕ ಮತ್ತು ಅನಾಗರಿಕ ಎನ್ನುವ ಶಬ್ದಗಳು ಈ ನಿಟ್ಟಿಿನಲ್ಲಿ ಅರ್ಥ ಕಳೆದುಕೊಂಡಿವೆ. ಆಧುನಿಕ ಎಲೆಕ್ಟ್ರಾಾನಿಕ ಆವಿಷ್ಕಾಾರಗಳಿಂದಾಗಿ ಇಂದು ಖಾಸಗಿ ಬದುಕಿನ ಬಾಗಿಲುಗಳು ತೆರೆದಿರುತ್ತಿಿದ್ದು, ಖಾಸಗಿತನದ ಪರಿಕಲ್ಪನೆ ಮೂರಾಬಟ್ಟೆೆ ಯಾಗಿದೆ. ಏನಾದರೂ ಘನಂದಾರಿ ಕೆಲಸ ಮಾಡಿ ಮನೆಗೆ ಮರಳಿ ಟಿವಿ ಆನ್ ಮಾಡಿದರೆ, ನಿಮ್ಮ ಕೆಲಸ ನಿಮ್ಮ ಕಣ್ಮಂದೆ ಟಿವಿ ಪರದೆಯ ಮೇಲೆ ಕಾಣುವ ಉದಾಹರಣೆಗಳು ಇಲ್ಲದಿಲ್ಲ. ಈ ಹಿಂದೆ ಹನಿಮೂನ್‌ಗೆ ಹೋದ ಹೋಟೆಲ್ಲಿಗೆ ಕಾರ್ಯಾರ್ಥ ಪುನಃ ಹೋದಾಗ, ಗ್ರಾಾಹಕರೊಬ್ಬರಿಗೆ ತಮ್ಮ ಹಿಂದಿನ ಭೇಟಿಯ ಖಾಸಗಿ ಕ್ಷಣಗಳು ರೂಂನ ಟವಿಯಲ್ಲಿ ಕಾಣಿಸಿಕೊಂಡು ರಾದ್ಧಾಾಂತವಾಗಿತ್ತಂತೆ. ಇದು ನಮ್ಮ ಖಾಸಗಿ ಬದುಕು ಎಷ್ಟು ಪಬ್ಲಿಿಕ್ ಆಗುತ್ತಿಿದೆ ಎನ್ನುವುದರ ಒಂದು ಚಿಕ್ಕ ಉದಾಹರಣೆ. ಇಂದು ಯಾರ ಬದುಕನ್ನು ಯಾರು ಕ್ಲಿಿಕ್ ಮಾಡಿ ಅಪ್ಲೋೋಡ್ ಮಾಡುತ್ತಾಾರೆ ಎನ್ನುವುದು ತಿಳಿಯುತ್ತಿಿಲ್ಲ.

ಸದಾ ನಡೆಯತ್ತಿಿರುವ ಈ ಕುಕೃತ್ಯ ಬಯಲಿಗೆ ಬಂದು ಅಪರಾಧಿಗಳು ಸಿಕ್ಕಿಿಬಿದ್ದಾಗಲೇ ಯಾರು, ಏನು ಅಂತ ತಿಳಿಯುವುದು. ಯಾವುದನ್ನು ನೀವು ಖಾಸಗಿ ಎನ್ನುತ್ತೀರೋ, ಯಾವುದನ್ನು ಕ್ಲಾಾಸಿಫೈಡ್ ಎನ್ನುತ್ತಿಿರೋ ಅದು ನಾಲ್ಕು ರಸ್ತೆೆ ಕೂಡುವ ಗೋಡೆಯ ಮೇಲೂ ಬರಬಹುದು ಮತ್ತು ನಿಮಗಾಗದಿರುವವರ ಟೇಬಲ್ ಮೇಲೆ ಕೂಡಾ ಬರಬಹುದು. ಹಾಗೆ ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ನಮ್ಮಲ್ಲಿ ಸಾವಿರಾರು ಪ್ರಕರಣಗಳು ಸಿಗುತ್ತವೆ. ರಾಷ್ಟ್ರಪತಿ ಜೈಲ್ ಸಿಂಗ್ ಆಗಿನ ಪ್ರಧಾನಿ ರಾಜೀವ ಗಾಂಧಿ ವಿರುದ್ಧ ದೂರವಾಣಿ ಕದ್ದಾಲಿಕೆ ಆರೋಪವನ್ನು ಹೊರಿಸಿದ್ದರಂತೆ. ಆದರೆ ಈವರೆಗೆ ಇಂಥ ಪ್ರಕರಣಗಳಲ್ಲಿ ಬಹುಶಃ ಶಿಕ್ಷೆ ಯಾಗಿರುವುದು ಕೇವಲ ರಾಮಕೃಷ್ಣ ಹೆಗಡೆಯವರಿಗೆ ಮಾತ್ರ. ಇದೂ ಕೂಡಾ ಅವರು ನೈತಿಕ ಹೊಣೆ ಹೊತ್ತು ಸ್ವತಃ ಶಿಕ್ಷಿಸಿಕೊಂಡದ್ದೇ ವಿನಹ ಯಾವುದೇ ನ್ಯಾಾಯಾಲಯ ನೀಡಿದ್ದಲ್ಲ. ಮನಸ್ಸು ಮಾಡಿದ್ದರೆ ಅವರೂ ಸುದೀರ್ಘ ಕಾನೂನು ಹೋರಾಟ ನಡೆಸಿ ಕ್ಲೀನ್ ಚಿಟ್ ಪಡೆಯಬಹದಿತ್ತು. ಆದರೆ ಹಾಗೆ ಮಾಡದೇ ಹೋದದ್ದು ಅವರ ದೊಡ್ಡತನ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಾಾಧಾರಿತ ರಾಜಕಾರಣದ ಮೊದಲು ಮೆಟ್ಟಿಿಲು ಕೂಡಾ.

ದೂರವಾಣಿ ಕದ್ದಾಲಿಕೆಯನ್ನು ಅಷ್ಟು ಸುಲಭವಾಗಿ ಮಾಡಲು ಸಾದ್ಯವಿಲ್ಲ. ಇದನ್ನು ಕೇಂದ್ರ ಅಥವಾ ರಾಜ್ಯದ ಗೃಹ ಕಾರ್ಯ ದರ್ಶಿಗಳು ಆದೇಶಿಸಬೇಕು. ಇದಕ್ಕೆೆ ಸರಿಯಾದ ಕಾರಣ ಇರಬೇಕು. ಮಾಹಿತಿ ಪಡೆಯುವ ಬೇರೆ ಎಲ್ಲಾ ಮಾರ್ಗಗಳು ಮುಚ್ಚಿಿರಬೇಕು ಅಥವಾ ಖಾಲಿ *(ಛ್ಡಿ್ಠಿಠಿ) ಆಗಿರಬೇಕು. ಈ ಆದೇಶಕ್ಕೆೆ ಸಚಿವ ಸಂಪುಟದ ಅನುಮತಿ ಪಡೆಯಬೇಕು ಮತ್ತು ಸಂವಹನ – ಕಾನೂನು ಕಾರ್ಯ ದರ್ಶಿಯ ಅವಗಾಹನೆಗೆ ತರಬೇಕು. ಆದೇಶವನ್ನು ಪಾಲಿಸುವಾಗ ಖಾಸಗಿತನದ ಹಕ್ಕಿಿನ ಉಲ್ಲಂಘನೆ ಕನಿಷ್ಠ ಇರಬೇಕು. ಈ ಆದೇಶ ಕೇವಲ ಎರಡು ತಿಂಗಳು ್ಝಜಿ ಇದ್ದು, ಅವಶ್ಯ ಎನಿಸಿದರೆ ಪುನಹ ಎರಡು ತಿಂಗಳು ನವೀಕರಿಸಬಹುದು. ಇದಕ್ಕೆೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಉದ್ದೇಶ ಸಾಧಿಸಿದ ಎರಡು ತಿಂಗಳಲ್ಲಿ ನಾಶಪಡಿಸಬೇಕು.

ದೂರವಾಣಿ ಕದ್ದಾಲಿಕೆ ದೇಶದ ಹಿತದ ದೃಷ್ಟಿಿಯಲ್ಲಿ, ದೇಶದ ಭದ್ರತೆ ಮತ್ತು ಸುರಕ್ಷೆೆಗೆ ಸಂಬಂಧ ಪಟ್ಟಿಿದ್ದಾಾದರೆ ತಪ್ಪುು ಎನ್ನಲಾಗದು. ಆದರೆ, ವೈಯಕ್ತಿಿಕ ರಾಜಕೀಯ ಮತ್ತು ಇನ್ನಿಿತರ ಕಾರಣಗಳಿಗಾಗಿ ಮಾಡಿದರೆ, ಅದನ್ನು ಅಪರಾಧ ಎನ್ನುವ ದೃಷ್ಟಿಿಯಲ್ಲಿ ನೋಡಬೇಕು. ಇದನ್ನು ಕ್ಲಾಾಸಿಫೈ ಡ್ ಆಗಿ ಟ್ರೀಟ್ ಮಾಡಬೇಕೆ ವಿನಹ ಸಾರ್ವಜನಿಕ ಚರ್ಚೆಗೆ ಅದು ಆಹಾರವಾಗಬಾರದು. ಅದೇ ರೀತಿ ಒಬ್ಬರ ಖಾಸಗಿ ಜೀವನದ ಕ್ಷಣಗಳನ್ನು ವಿಡಿಯೋ ಮೂಲಕ ಬಹಿರಂಗ ಪಡಿಸುವ ನಿಟ್ಟಿಿನಲ್ಲಿಯೂ ಕಾನೂನು ಬಿಗಿಯಾಗಬೇಕು. ಆದರೆ, ಇವುಗಳನ್ನು ಹೇಳಿದಷ್ಟು ಸುಲಭವಾಗಿ ನಿಲ್ಲಿಸಬಹುದೇ ಎನ್ನುವುದು ಮೂಲಭೂತ ಪ್ರಶ್ನೆೆ. ತಮ್ಮ ಉದ್ದೇಶ ಸಾಧನೆಗೆ ಅವರಿಗೆ ಹಲವಾರು ಮಾರ್ಗಗಳು ಇರುತ್ತವೆ. ಅರೋಪ-ಪ್ರತ್ಯಾಾರೋಪಗಳು ನಡೆಯುತ್ತಲೇ ಇರುತ್ತವೆ. ಒಂದು ದಿನ ಎಲ್ಲರೂ ಅಧಿಕಾರ ಹಿಡಿಯುವವರೇ ಆಗಿದ್ದು, ಈ ವಿಷವರ್ತುಲದಲ್ಲಿ ಅವರೂ ಸಿಲುಕುತ್ತಾಾರೆ.

Leave a Reply

Your email address will not be published. Required fields are marked *